ಅಚ್ಚರಿ ಕಚ್ಚಿದ ಬದುಕು

ಅಚ್ಚರಿ ಕಚ್ಚಿದ ಬದುಕಿನ
ಆಸೆ ಮುಗಿಯದು.
ನುಡಿಯಲು
ಭಾಷೆ ಸಾಲದು.
ಬೆದೆ ಕುದಿವ ಗೂಳಿಯ ಕುರುಡು ಆವೇಶಕ್ಕೂ
ಬರಡು ಹಸು
ಬಸಿರು ತಾಳದು

ಪಹರೆ ದನಿಗಳೆಲ್ಲ
ಮುಜುರೆಮಾಡಿ ಸರಿದವು.
ಈಗ ನನ್ನದೆ ಕೊರಳು,
ತಪ್ಪಿ ಕೊರಳಿಗೆ ಬಿದ್ದರೆ
ನನ್ನದೆ ಉರುಳು,
ಬಾಕಿ ತೀರಿಸಲು ನಡುವೆ
ನಾಕ ನರಕ ಹೊಲಿಯುವ
ನನ್ನದೆ ಬೆರಳು.
ನಿಂತ ಬದುಕು ನಿನ್ನ ಚಿಂತೆಯಲ್ಲೇ ಚಲಿಸುತ್ತ
ನೋಡುತ್ತೇನೆ ಸುತ್ತ,
ನೆಲೆ ಬಾನು ಕಡಲಲ್ಲಿ ನಿನ್ನದೆ ಹೆಸರು
ಹರಿಯುವ ಇರುವೆಯಲ್ಲೂ ನಿನ್ನದೆ ಉಸಿರು.

ಮಬ್ಬು ಬೆಳಕಿನ
ಕಬ್ಬಿನಗದ್ದೆ ನಡುವೆ
ಸೋಗೆ ಸರಿಸಿ ನಡೆಯುವಾಗ ಕಾಲಿಗೆ
ಕೂಳೆ ಚುಚ್ಚುತ್ತದೆ.
ಹಾಳು ಶನಿ ಎಂದು ಶಪಿಸಿ
ಬಾಗಿದರೆ
ಗಜದೂರದಲ್ಲೆ ಹೆಡತೂಗಿ
ಬಾ ಎನ್ನುತ್ತದೆ
ಬಂಗಾರ ಶೂಲದ ಸಾವು.

ತುದಿ ಇಲ್ಲದ ಸಿಹಿಗದ್ದೆ ನಡುವೆ ನಿಲ್ಲುವೆ
ತುಂಬಿದ ಮೌನದ ಗಡಿಗೆ
ಅಪಸ್ವರವಿಲ್ಲದೆ ಸಿಡಿಯುವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೧೪
Next post ಸಾಲ

ಸಣ್ಣ ಕತೆ

 • ಎರಡು…. ದೃಷ್ಟಿ!

  ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…