ವೀರಪಂಡಿತ ಶಾಸ್ತ್ರಕಾರರೆ ಜ್ಞಾನನಿಧಿ ಋಷಿವರ್ಯರೆ, ಹಿಂದೆ ಗತಿಸಿದ ಯೋಗಪುರುಷರೆ ನಿಮ್ಮ ಕಷ್ಟವ ನೆನೆವೆನು ನಿಬಿಡವಾಗಿದೆ ನೀವು ರಚಿಸಿದ ಗ್ರಂಥರಾಶಿಯು ಧರೆಯೊಳು ಸೃಷ್ಟಿಯಂತ್ರವ ಭೇದಿಸುವ ಘನ ಮಥನ ರವವಿದೆ ಅದರೊಳು ಬಂದು ಇಲ್ಲಿಗೆ ಭ್ರಾಂತರಾದಿರೊ ಏನಿದೆನ್ನುತ...
ಅಂತರಂಗದಿ ಕರುಣವಿರಿಸುವ ಅಂತರಾತ್ಮ ವಿಚಾರನೆ ಭ್ರಾಂತಿಹರ ಅದ್ವೈತ ಸಿದ್ಧನೆ ಸ್ವಾಮಿ! ಚಿಂತವಿದೂರನೇ ನಿಮ್ಮ ನುಡಿಗಳ ಕೇಳಿ ತಣಿದೆನು ಸರಿ ಇದೆನ್ನುತ ತಿಳಿದೆನು ಕರುವು ತಾಯನು ಅಗಲಿದಂದದಿ ಏನೊ ಬಳಲುತಲಿರುವೆನು ಹಿಂದು ಮುಂದುಗಳೊಂದನರಿಯದೆ ಸುತ್ತ ನೋಡುತಲಿರುವೆನು...