೧ ಹಾ! ಇನ್ನು ದೂರಮಾದೆಯ ನನಗೆ ಸಂತತಂ ಕಾಳಧೂಮವನುಗುಳ್ವ ಎಲೆಲೇ ಗಗನಚುಂಬಿ!* ಭೋರೆನುತ್ತಲಿ ವರುಣ ವೇಗದಿಂ ಜಲದಂಬಿ- ನಾ ವೃಷ್ಟಿಯಿಂ ಕಾಡಿದರು ತಾ ನಿರಂತರಂ; ಭೂವಳಯದಲ್ಲೆಲ್ಲಿರ್ದೊಡಂ ನಾಂ ಕಣಮೊಂದು ನೀರನೂ ಬಿಡದೆ ಹೀರುವೆನೆಂಬ ಪೂಣಾಂತು ಜಗವ ಸುಡುತಿದ್ದರೂ ಭಾಸ್ಕರನು-ಮೃಗಜಂತು ತರುರಾಜಿ ಸರ್ವಮುಂ ಇರೆ ಬಿಸಿ...

ವ್ಯಾಪಾರವ ಬಿಟ್ಟು, ತಾಪತ್ರಯವನೆ ಹಿಂಗಿ. ಲೋಕದ ಹಂಗನೆ ಹರಿದು, ಬೇಕು ಬೇಡೆಂಬುದನೆ ನೂಕಿ, ತಾ ಸುವಿವೇಕಿಯಾದಲ್ಲದೆ, ಜ್ಯೋತಿಯ ಬೆಳಗ ಕಾಣಬಾರದೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ಬಾಳ ಕನಸು ಕಮರಿ ದೇಹ ಪರರಿಗೆ ಮಾರಿ ಹರ್ಷವೆಂಬ ಕರ್ಕಶದಲಿ ನಾರಿ ಸುಡುತಿಹಳು ಬೆಂಕಿಯಲಿ ಮೈಸಿರಿ ಯೌವನದ ಕನಸಲಿ ಆಚಾರ-ರೂಢಿಗಳ ಸವಾರಿಯಲಿ ಪುರುಷನ ಚಪಲತೆಯಲಿ ಸಿಲುಕಿ ಹೆಣ್ಣು ಕೊರಗುತಿಹಳು ಸಮಾಜದ ಕಣ್ಣು ತೆರೆಸಿ ಕವಿದಿಹ ಕತ್ತಲೆಯ ದೂಡಿ ಬೆಳಕು ಬೀ...

ಕಂಗಳಿಂದಲಿ ನಿನ್ನ ನೆನಪದೂಡುವುದೆಂತು? ಬೇಡಬೇಡಂದರೂ, ಅಲೆಮೇಲೆ ಅಲೆ ಬಂದು ದಡವನೆಡೆಬಿಡದೆಯೇ ಮುತ್ತಿ ಮುತ್ತಿಕ್ಕುವೊಲು ಕಳೆದ ಕಾಲದಲಳಿದ ಕನಸುಗಳು ಹೊರಬಂದು ದುಗುಡ ಹರಡುತಲಿಹವು.  ದಡದ ಮೇಲಿನ ಮರಳು ಹನಿನೀರಿಗಾಗೊರಲಿ ಕೊರಗಿ ಬಿಸಿಯಾಗುವೊಲು ಹೃದ...

-ರವಿ ಕೋಟಾರಗಸ್ತಿ ನಾಗಮಣಿಯಾಗಿ ಬೀರುತ ದಿವ್ಯ ಶಕ್ತಿಯನು, ಯಕ್ಷಪ್ರಶ್ನೆಯಾಗಿ ಕೇಳಲಿ ಇತಿಹಾಸ ದೌರ್ಜನ್ಯವನು, ಕಡಲಭಾರ್ಗವನಾಗಿ ಸದೆ ಬಡಿಯಲಿ ಶತ-ಶತಮಾನಗಳ ಶೋಷಣೆಯನು ಸ್ಟುಪಿಡ್ ರಾಜಕೀಯ ಮೆಟ್ಟಿ ನಿಲ್ಲುತ ಬಾಂಧವ್ಯದ ಬಾಹುಗಳ ಚಾಚುತಲಿ ಢಂ ಢಂಮಾರ ...

ಪ್ರಿಯ ಸಖಿ, ಪರಿಪೂರ್ಣ ಕವಿತೆಯೊಂದರ ನಿಜವಾದ ಸಾರ್ಥಕತೆ ಇರುವುದೆಲ್ಲಿ? ವಿಮರ್ಶಕನ ಟೀಕೆಯಲ್ಲೋ? ಸಹೃದಯನ ಮೆಚ್ಚುಗೆಯಲ್ಲೋ? ಕವಿಯ ಆತ್ಮ ಸಂತೃಪ್ತಿಯಲ್ಲೋ?  ಎಲ್ಲಾ ಒಂದಕ್ಕಿಂತಾ ಒಂದು ಮಹತ್ವವಾದದ್ದೇ ! ಉತ್ತಮ ಕವನವೊಂದಕ್ಕೆ ವಿಮರ್ಶಕನ ಟೀಕೆಯೂ ಬ...

ನೀರಿಗೆ ಬಿದ್ದ ಹೆಣ್ಣು ತಾವರೆಯ ತೆನೆಯಾಗಿ ಹೂವಾಗಲಿಲ್ಲ ಕೆಂಪಾಗಿ. ಸಾವಿನಲಿ ಶಾಂತಿ ಉರುಳಿತ್ತು ತಲೆಕೆಳಗಾಗಿ ಆ ಎಲ್ಲ ನೋವು ತಂಪಾಗಿ. ನೀರಿಗೆ ಬಿದ್ದ ಹೆಣ್ಣು ಒಂದೇ ಮುಳುಗು ಮುಳುಗಿ ಕಂಡಿತ್ತು ಸಾವಿನ ಯುಗಾದಿ. ಸುತ್ತೆಲ್ಲ ಕಿತ್ತು ಬಿದ್ದಿತ್ತು...

ಒಮ್ಮೆ ಹಾಡಿದ ಹಾಡು- ಮತ್ತೊಮ್ಮೆ-ಹಾಡಲೆಂತೋ ಅರಿಯೆ. ಒಮ್ಮೆ ಕಂಡಾಕನಸು ಮತ್ತೊಮ್ಮೆ-ಕಾಣಲೆಂತೋ ಅರಿಯೇ! ಎಲ್ಲ ನಿನ್ನದೆ ಛಾಯೆ ಹೃದಯದೊಲವೆ! ಜೀವವೊಂದೇ ಅಹುದು, ಬದುಕುಗಳು-ಸಾಸಿರವ ಮಿಕ್ಕುವುವು! ಭಾವವೊಂದೇ ಅಹುದು, ರೂಪಗಳು-ಎಣಿಕೆಗೇ ಸಿಕ್ಕದವು! ಎ...

ತುಂಬಿದ ಚಂದ್ರನೆ ನೀ ಬಾರ ತುಂಬಿದ ಭಾಗ್ಯವ ನೀ ತಾರ ನಂಬಿದ ಗತಿಗೆ ನೆಲೆ ತೋರ! ಅಗಸ ಮಿತ್ರನು ನೀನದಕೊ ತಂಪನು ಸುರಿಸುತ ನೀ ಮಿನುಗೊ ಭೂಮಿಯ ಕನ್ನಡಿ ನೀನೆ ಕಣೊ ನೈದಿಲೆ ನಗುವುದು ನೀ ಬರಲು ನಲ್ಮೆಯ ಹೂವಿಗೆ ನೀ ಮುಗುಳು ಸಂತಸವೀಯುತ ನೀ ಬಾಳು! ವಸಂತ...

ನಿಮ್ಮ ಪಾದವಿಡಿದು, ಮನ ನಿರ್ಮಳವಾಯಿತು. ನನ್ನ ತನು ಶುದ್ಧವಾಯಿತು. ಕಾಯ ಗುಣವಳಿಯಿತು. ಕರಣಗುಣ ಸುಟ್ಟು ಭಾವಳಿದು ಬಯಕೆ ಸವೆದು, ಮಹಾದೇವನಾದ ಶರಣರ ಪಾದವಿಡಿದು, ನಿಜಮುಕ್ತಳಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ತಲೆಯ ಮೇಲಿನ ಹೆಜ್ಜೆ ಎಂದೋ ತೆರಳಿತು ಪಡುವಲಿನ ಬಿಳಿ ಕೆಂಪು ನೀಲಿ ನೀರನು ದಾಟಿ, ಮರಕತ ದ್ವೀಪದಮನೆಗೆ. ದಣಿಗೂ ದಣಿವು! ಇತ್ತ ಈ ಬಿಡುಗಡೆಯೂ ಮೈಮುರಿದು ಪರಶಿವನ ತ್ರಿಶೂಲದಂತಾಯ್ತು ನೋಡುನ ಕಣ್ಣಿಗೆ! ತಲೆಯ ಮೇಲಿನ ಹೆಜ್ಜೆ. -ಈ ಮಾತು ಮುಗಿಯಿತು; ‘...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...