ಭಕ್ತನೊಬ್ಬ ಹನುಮಂತನ ಗುಡಿಗೆ ಹೋಗುವಾಗ ಬಾಗಿಲಲ್ಲೇ ಚಪ್ಪಲಿಗಳನ್ನು ಬಿಟ್ಟು ಒಳಕ್ಕೆ ಹೋಗಿ ದರ್ಶನ ಪಡೆದು ಹಿಂದಕ್ಕೆ ಬಂದು ಚಪ್ಪಲಿ ಹಾಕಿಕೊಳ್ಳಲು ಹೋದರೆ ಚಪ್ಪಲಿಗಳೇ ನಾಪತ್ತೆ! ಅವು ಹೊಸ ಚಪ್ಪಲಿಗಳು. ತುಂಬಾ ಖಿನ್ನನಾಗಿ ಮತ್ತೆ ದೇವರ ಬಳಿ ಹೋಗಿ “ನಾನು ಎಷ್ಟು ಅಂತ ಚಪ್ಪಲಿ ಕೊಳ್ಳೋದು? ಈಗಾಗಲೇ ಹತ್ತಾರು ಜೊತೆ ಅಲ್ಲಿ-ಇಲ್ಲಿ ಸುತ್ತಾಡುವಾಗ ಕಳೆದು ಕೊಂಡೆ. ಈ ಸಂಕಷ್ಟ ದಿಂದ ನೀನೇ ಪಾರುಮಾಡಬೇಕು.” ಎಂದು ಮೊರೆ ಇಟ್ಟ. ಹನುಮಂತ ಪ್ರತ್ಯಕ್ಷವಾಗಿ, “ವತ್ಸಾ ಅಲ್ಲಿ, ಇಲ್ಲಿ ನಾನು ಯಾವಾಗಲಾದರೂ ಸುತ್ತುವುದನ್ನು ನೀನು ಕಂಡಿದ್ದೀಯಾ? ನನ್ನ ಹಾಗೆ ಹಾಯಾಗಿ ಯಾಕೆ ನೀನು ಇರಬಾರದು? ನನಗೆ ಚಪ್ಪಲಿಗಳ ಅಗತ್ಯವೇ ಇಲ್ಲ!” ಅಂದ.
***