ಜಗವೊಂದು ಬಂದರೀ ಜೀವಸಾಗರದಲ್ಲಿ ಹಡಗುಗಳು ಐತಂದು ಕೂಡುವುವು ದಿನವು, ತೆರತೆರದ ಜನರಿಹರು-ವಿಧವಿಧದ ಭಾಷೆಗಳು ಚಣಕಾಲ ಸಂಧಿಸುತ ಮೆರೆವುವಲ್ಲಿ! ನಾಲ್ಕು ದಿನಗಳ ಜೀವ, ಒಂದಿರುಳ ಪ್ರೇಮ! ಮುಂದೆಲ್ಲಿಗೋ ಪಯಣ, ಎಂದೊ ಮಿಲನ? ಪಯಣದಲಿ ಸಾಗರದಿ ಕಡುತೆರೆದ ...
ಪ್ರಿಯ ಸಖಿ, ಇಂದು ನಾವು ಬಹಿರಂಗದ ಆಡಂಬರ, ಡಾಂಭಿಕತೆ, ಸೋಗಿನ ಸುಳಿಗೆ ಸಿಲುಕಿ ನಿಜವಾದ ಆತ್ಮಸೌಂದರ್ಯವನ್ನು ಮರೆತುಬಿಟ್ಟದ್ದೇವೆ. ಪಂಡಿತರತ್ನ ಎರ್ತೂರು ಶಾಂತಿರಾಜ ಶಾಸ್ತ್ರಿಯವರು ತಮ್ಮ ಒಂದು ಹಾಡಿನಲ್ಲಿ ಅರಿಯಲಿಲ್ಲವಲ್ಲ ಆತ್ಮನ ಮರೆತು ಕೆಟ್ಟರ...
ಮಕ್ಕಳು : ರಾತ್ರಿ ಬೇಗ ಮಲಗಿ ಬೆಳಗ್ಗೆ ಆರಕ್ಕೇಳ್ತೀವಿ ಸಖತ್ತು ತಿಂಡಿ ಬಾರಿಸಿ ತಪ್ಪದೆ ಪಾಠ ಓದ್ತೀವಿ. ಗುಂಡ : ತಿಂಡಿ ತಿಂಡಿ ತಿಂಡಿ ತಿನ್ತೀನೊಂದು ಬಂಡಿ! ಮಕ್ಕಳು : ಹಟವೇ ಮಾಡದೆ ನಗ್ತಾ ದಿನಾ ಸ್ಕೂಲಿಗೆ ಹೋಗ್ತೀವಿ, ಎಲ್ಲರ ಜೊತೇಲು ಕೂತ...
ಹುಟ್ಟಿದ್ ಮಳೇ ಹಾಳಾಗ್‌ಹೋಯ್ತು, ಸುಮ್ನೇ ಗುಡುಗಿನ್ ಕೋಡಿ.- ಅಕ್ಕಿ ಬೆಲೇ ಏರ್ತಾ ಹೋಯ್ತು ದುಡ್ಡಿನ್ ಮೊಕಾ ನೋಡಿ. ಅಕ್ಕೀಗಿಂತ ಅಲ್ಲಿದ್ ಕಲ್ಲೆ ಮುತ್ನಂಗಿತ್ತು, ತಣ್ಗೆ! ಕಟ್ಕೊಂಡೋಳ್ಗಿತಿಟ್ಕೊಂಡೋಳೇ ಸುಂದ್ರೀ ಅಲ್ವೆ, ಕಣ್ಗೆ! ಒಲೇ ಕುರ್ಚೀಲನ್ನ...
ಮನದ ಕಾಂಕ್ಷೆ ಒಲವಿನೆಣಿಕೆ ಆಳ ಅಳೆದು ನೋಡಲಾರೆ, ವಿಶ್ವವ್ಯಾಪಿ ಎಮ್ಮ ಮುದವು ನಿಲ್ವುದೆಲ್ಲಿ ಎಣಿಸಲಾರೆ! ಕತ್ತಲಂತೆ ಸುತ್ತಲೆಲ್ಲ ಮನಕೆ ಭಾರ ದೇಹಸರ್ವ ತಿಂಬೆದೆಲ್ಲ ಅರುಚಿ ಕೇಳು, ಯಾರ ಇದುರು ಪೇಳ್ವುದಲ್ಲ!! ಮಂಜುಗಟ್ಟಿ ನೇತೃದ್ವಯವು ಬೆಂದಮನವ ಸ...
ಅಯ್ಯ, ಏನೇನು ಇಲ್ಲದ ಬಯಲ ದೇಹಕ್ಕೆ, ತಾಮಸವ ಮುಂದು ಮಾಡಿ, ಹೀಗೆ ಕಟ್ಟಿತ್ತಲ್ಲ ಜಗವೆಲ್ಲ. ಅದೇನು ಕಾರಣವೆಂದರೆ, ಸುಮುಖನ ಕಡೆಗಿತ್ತು ಜಗದ ರಚನೆಯ ನೋಡಿತ್ತು. ಇಚ್ಛೆಯ ಮಚ್ಚಿತ್ತು. ಅಂಗಸುಖವ ಬಯಸಿತ್ತು. ಕಂಗಳ ಕಾಮವನೆ ಮುಂದು ಮಾಡಿತ್ತು. ಇದರಿಂದ...
ಈ ಮೊದಲು ತಿಳಿದುಕೊಂಡಿದ್ದೆ ಇಲ್ಲಿಯ “ಈ ಗಾಳಿ ಈ ಬೆಳಕು ಈ ಎಲ್ಲಜೀವಿಗಳೂ” ಎಲ್ಲಾ ಕಡೆಗೂ ಎಲ್ಲಾ ದೇಶದೊಳಗೂ ಒಂದ ಅಂತ. ಹಾಗಂತನ ಏನೋ ಕೆಲವೊಂದು ಅಥವಾ ಕೆಲವೊಂದೇ ಪರಿಧಿಯೊಳಗ ಸುತ್ತಿಕೊಂಡು ಬಹಳ ಆರಾಮವಾಗಿ ಇದೇ ಒಳ್ಳೆಯದು ಅಂತ ಇದ್ದ...
ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ ಹಾಡುಗಳಲೆಲ್ಲೆಲ್ಲು ಯಾರದೋ ಛಾಯೆಯೇ ಮೂಡಿರಲು “ಇದು ಯಾರೋ?” ಎನುತ ಕಾತರರಾಗಿ ಗೆಳೆಯರೆಲ್ಲರು ನನ್ನ ಕಾಡುತಿರೆ, ನಿನ್ನನ್ನೇ ಬಣ್ಣಿಸಲು ಹೊರಟಿಹೆನು – ನಿನ್ನ ನೆನವಿನಲೆನ್ನ ಮನದ ಮಾತುಗ...
ಅಡಿಗೆ ಮನೇಲಿ ನೂರಾರ್ ಡಬ್ಬ ಸಾಲಾಗ್ ಕೂತಿದ್ದಾವೆ ನಾನು ಅಮ್ಮ ಹಂಚ್ಕೋತೀವಿ ಎಲ್ಲಾ ಡಬ್ಬನೂವೆ. ನಾಕೇ ಡಬ್ಬ ಸಾಕು ನಂಗೆ ಉಳಿದದ್ ಅಮ್ಮಂಗೇನೆ, ಪಾಪ ಅಡಿಗೆ ಮಾಡ್ಬೇಕಲ್ಲ ಟೈಮಿಗ್ ಎಲ್ಲಾರ್ಗೂನೆ! ಅಲ್ದೆ ಅಮ್ಮ ದೊಡ್ಡೋಳಲ್ವ? ದೊಡ್ಡೋರ್‍ಗೇನೆ ಜಾಸ್ತ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






