ಕಾಸರಗೋಡಿನ ಕರಾವಳಿಯಲ್ಲಿ ಅರುಬೇಸಗೆಯೇನು!
ಅಂಥ ಬೇಸಗೆಯ ಮಧ್ಯಾಹ್ನ
ಪೇಟೆಯಿಂದ ಮನೆಗೆ ಬರುತ್ತ
ಪದ್ಮನಾಭರ ಇನ್ನೂ ಬರೆಯದ ಕಾದಂಬರಿಯ ಕಥೆ
ಬಿಚ್ಚಿಕೊಳ್ಳುವುದು.  ಟಾರುರೋಡಿನ
ಬಿಸಿಲ್ಗುದುರೆ ನೆಗೆಯುವುದು ನಮ್ಮ ಮುಂದೆ
ಮತ್ತೆ ಊಟವೇನು, ವಿಶ್ರಾಂತಿಯೇನು,
ನಿದ್ದೆಯೇನು, ಹಬ್ಬುವುದೊಂದೆ ಸಿಗರೇಟಿನ ಹೊಗೆ.
ಈ ಮಧ್ಯೆ ಎದ್ದವೆಷ್ಟು ಕ್ರಾಂತಿಗಳು!
ಬಿದ್ದವೆಷ್ಟು ಸಾಮ್ರಾಜ್ಯಗಳು!
*****