ಮರದಡಿಯಲಿ

ಇಬ್ಬನಿ ಹನಿ ಹನಿ ಸುರಿದು ಹಾಸಿದ ತಂಪಿನ ಹೊತ್ತು ನಿನ್ನ ಕಣ್ಗಳು ನನ್ನ ದಿಟ್ಟಿಸುತ್ತಿದ್ದವು ಎಲ್ಲಾ ನೀರಸಗಳ ಸರಿಸಿ ಸೂರ್ಯ ನಮ್ಮಿಬ್ಬರನು ತಬ್ಬಲು ಏರಿಬಂದ ಹಕ್ಕಿ ಹಾರಿಹೋದ ತೇಲು ಬೆಳಗು ಎದೆಯ ನದಿಯಲಿ ರಂಜಕದಲೆಗಳು....

ಡಿಸೆಂಬರಿನ ಚಳಿ

ಡಿಸೆಂಬರಿನ ಚಳಿ ಶತಮಾನ ಕಳೆದರೂ ಇತಿಹಾಸ ಸ್ಪುರಿಸುತ್ತದೆ ತೆಳು ಬಟ್ಟೆಯ ಮಕ್ಕಳ ಬೀದಿ ಕಸಕ್ಕೆ ಬೆಂಕಿ ಹಚ್ಚುತ್ತ ಮೈಮನ ಕಾಯಿಸಿಕೊಳ್ಳುತ್ತಿದ್ದಾರೆ. ಹೆತ್ತವರು ಎಲ್ಲೆಲ್ಲೋ ಇದ್ದಾರೆ ಸೂರ್ಯ ಹೊತ್ತು ಸಾಗಿದ್ದಾನೆ ಎಲ್ಲಾ ನಿಟ್ಟುಸಿರುಗಳ. ಎತ್ತ ಪಯಣ...

ಕಣ್ಣು

ಕತ್ತಲು ಆವರಿಸಿದ ಕೋಣೆಯಲಿ ಕಪ್ಪನೆ ಕಣ್ಣಗೊಂಬೆಯ ಕರಿನೆರಳ ತುಂಬ ಅರಗಿಸಿಕೊಳ್ಳದ ನಿನ್ನ ಮುಖ ಅಂಚಿನಲಿ ಬಸಿತು ಬೀಳಲು ಕಾತರಿಸಿ ದಿಗಿಲುಗೊಂಡ ಸಣ್ಣಹನಿ. ಕಾಳರಾತ್ರಿಯಲ್ಲು ಪ್ರೀತಿ ಬೆಳಕು ಚೆಲ್ಲದ ಪ್ರಣತಿ ಬಾಚಿ ತಬ್ಬುವ ಅಲೆಗಳ ನೆನಪು...

ಪೂಜೆ

ಎಲ್ಲಾ ಅಬ್ಬರಗಳ ನಡುವೆ ಮೆಲ್ಲಗೆ ನಿನ್ನ ಧ್ವನಿ ನಿಟ್ಟುಸಿರು ಕೇಳಿಸುತ್ತದೆ ಬೆವರ ಹನಿ ಗುಂಟ ಇಳಿದ ಶ್ರಮ ಬೇಗುದಿಯಲಿ ಮಣ್ಣ ಅರಳಿಸಿ ನೀರು ಹನಿಸಿದೆ. ಸೋಕಿದ ವ್ಯಾಪಕ ಗಾಳಿ ಎದೆಯೊಳಗೆ ಇಳಿದು ಉಸಿರಾಡಿದ ಸದ್ದುಗಳು...

ಆಟ

ಪ್ರತಿ ಸಂಜೆಯ ಬೆಳಕು ನನ್ನ ಪುಟ್ಟ ಕೋಣೆಯಿಂದ ಹಾರಿಹೋದ ಕ್ಷಣ ನೆರಳಿನ ಕತ್ತಲಿನಲಿ ಒಂದು ಪರಿಚಿತ ಮುಖ ಹುಡುಕುತ್ತೇನೆ. ಕವಿತೆ ಬೀಜ ಕಟ್ಟುವ ಹೊತ್ತು ತೇಲಿ ಸಾಗಿವೆ ಬೆಳ್ಳಕ್ಕಿ ಸಾಲು ಸಾಲು ಅಲ್ಲಲ್ಲಿ ಒಂದೊಂದು...

ರೂಹು

ಬಣ್ಣಬಣ್ಣ ಮುಗಿಲ ಮೈತುಂಬ ಹೂವರಳಿದ ಸಿರಿಸಂಜೆ ಮೋಡದಂಚಿಗೆ ಜರಿಯ ಅಂಚು ಮೆದು ಮಲ್ಲಿಗೆ ಅಂಗಳದ ಮೂಲೆಯಲಿ ಸೂಸಿದ ಕಂಪು ನೀನು ಪ್ರತಿಫಲಿಸಿದ ನನ್ನೆದೆ ಕನ್ನಡಿ. ಸಿರಿ ಮುಗಿಲ ರಂಗವಲ್ಲಿ ಸ್ಪಂದನಕೆ ಮೊಗ್ಗಾಗಿ ತಿಳಿಗಾಳಿ ತೀಡಿ...

ಸಾಂಗತ್ಯ

ಕಪ್ಪು ಮಣ್ಣ ನೆಲದಲಿ ಘಮ್ಮೆಂದು ಸೂಸಿ ತೇಲುವ ಎಳೆ ಹಾಲು ತುಂಬಿ ಜೋಳದತೆನೆಗಳ ಅರಿವಿಗೆ ಪರಿವಿಗೆ ಮೊಗ್ಗೊಡೆದು ಜೀವದ ಹರವಿಗೆ ಗಾಳಿ ಜೇಕು ಹಾಕುತ್ತಿದೆ ತಣ್ಣನೆಯ ಸ್ಪರ್ಶ ಜೀವದಾಳಕೆ ಇಳಿಯಲು ಕಾಯಬೇಕು. ಯಾರು ಹುಕುಂ...

ಸ್ಪರ್ಶ

ರಾತ್ರಿ ಕತ್ತಲೆಮನೆ ನೋವಲ್ಲಿ ಕನಸುಗಳು ಅಡರಿಸಿ ಬೆಳಂ ಬೆಳಕಿನ ಸೂರ್ಯನಿಗೆ ನೂರು ಪ್ರಶ್ನೆಗಳನ್ನು ಒಡ್ಡುತ್ತವೆ. ಬಚ್ಚಿಟ್ಟ ಬೆತ್ತಲ ಬದುಕು ಮತ್ತೆ ತಲ್ಲಣ ಗಳೊಂದಿಗೆ ಹೊಸ ಬೆಳಗು ಹುಟ್ಟುತ್ತವೆ. ಹುಟ್ಟುವ ಕ್ರಿಯೆ ಇಲ್ಲದಿದ್ದರೆ ಈ ಜಗತ್ತು...

ಯಶೋಧೆ ಕಂದ

ಯಶೋಧೆ ಕಂದ ಕೃಷ್ಣನಿಗೆ ಹೇಳುತ್ತಿದ್ದಳು ಪುಟ್ಟ ಹತ್ತ ಬೇಡ ಯದುಗಿರಿಯ ಬೆಟ್ಟ ಅದರ ಮೇಲೆ ಕೂಡಲಿ ಹಾಯಾಗಿ ಬಣ್ಣ ಬಣ್ಣದ ಹಕ್ಕಿಗಳು ಹಾಡಲಿ ಜೀವ ರಾಗಗಳ. ಕಂದ ನೀನು ಅಲ್ಲಿ ಸುಳಿದಾಡಬೇಡ ತೇಲಲಿ ಮೋಡಗಳು...

ದಾಂಪತ್ಯ

ಹರಿದ ಸಂಜೆಯ ಗುಂಗು ಪರಿಮಳಕ್ಕೆ ಅರಳಿದ ಹೂ ಸುಳಿಸುಳಿದ ಬಯಲ ಬೆಟ್ಟಗಾಳಿ ನಾನಿನ್ನ ನೋಟದೊಳಗೆ ಇಳಿದು ನೀಲ ಬಾನಲಿ ಕಾಮನಬಿಲ್ಲು. ಅತ್ತ ಕಂದನ ಮೃದು ಕೆನ್ನೆಯಲಿ ಇಳಿದ ಹನಿಬಿಂದು ಎದೆಯ ಹಾಲು ನಿನ್ನುಸಿರು ತಾಗಿದ...
cheap jordans|wholesale air max|wholesale jordans|wholesale jewelry|wholesale jerseys