ಅಮ್ಮನಿಗೆ

ಎಲ್ಲ ಮುಗಿದ ಮೇಲೆ ಅವಳನ್ನು ಮಣ್ಣಿಗಿಟ್ಟರು. ಹೂ ಬೆಳೆದವು, ಚಿಟ್ಟೆ ಹಾರಿದವು ಅಲ್ಲಿ. ಹೆಣ ಮಣ್ಣಿಗಿಟ್ಟಾಗ ಗುರುತು ಕೂಡ ಬೀಳಲಿಲ್ಲ. ಅಷ್ಟು ಹಗುರವಾಗಲು ಅವಳೆಷ್ಟು ನೋವು ತಿಂದಿದ್ದಳೋ! ***** ಮೂಲ: ಬೆರ್ಟಾಲ್ಟ್ ಬ್ರೆಖ್ಟ್ /...

ಬುದ್ಧಪೂರ್ಣಮಿ

ಇದು ಬುದ್ಧ ಪೂರ್ಣಮಿ ಇದು ಶುದ್ಧ ಪೂರ್ಣಮಿ ಎಲ್ಲ ಪೂರ್ಣಮಿಯಂತಲ್ಲ ಜಗವೆ ತೊಯ್ಪದಲ್ಲ! ಎಲ್ಲರ ಕಣ್ಗಳ ತೆರೆಸಿ ಲೋಕದ ಮಾಯೆಯ ಹರಿಸಿ ಬುದ್ಧ ಜನಿಸಿದಂದು ವೈಶಾಖ ಪೂರ್ಣಮಿಯಿಂದು ಜನ್ಮಾಂತರದಿಂದೆದ್ದ ದುಃಖದ ಮೂಲವ ಗೆದ್ದ ಬುದ್ಧ...

ಸಮಯವಿದೆಯೆ ಪಪ್ಪಾ?

೧ ಸಮಯವಿದೆಯೆ ಪಪ್ಪಾ? ಆಚ ಗುಡ್ಡದಾಚೆ ಇದ ನದಿ ಆಹಾ! ಎಷ್ಟು ಚಂದ ಅದರ ತುದಿ ಅಬ್ಬಾ... ಎಷ್ಟು ದೊಡ್ಡ ಸುಳಿ ಹೇಗೋ ಪಾರಾದೆ ನುಸುಳಿ ಸರ್ರೆಂದು ಜಾರುವುದು ನುಣ್ಣನೆಯ ಹಾವು ಎದೆಯೆತ್ತರಕೂ ಹಾರುವುದು...

ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲಾ

ಎಷ್ಟು ಸವರಿದರೂ ಮತ್ತೆ ಮತ್ತೆ ಮುಟ್ಟಬೇಕೆನ್ನಿಸುವ ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ ಅಕ್ಷರಗಳು ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ. ಆತನ ತುಟಿಗಳ ಮೇಲೆ ಬೆರಳಾಡಿಸಿದಾಗೆಲ್ಲ ಅನೂಹ್ಯವಾದ ಬೆಸುಗೆ ಕರುಳ ಕೊಂಡಿಯಂತೆ ಒಳಗೊಳಗೆ ಬಲಿಯುತ್ತದೆ. ನನ್ನೊಳಗಿನ ಆತ್ಮದ...

ಬಹಳ ಕಂಡಿದ್ದೇನೆ

ಹದುಳವಿಲ್ಲದ ಬದುಕು ಬಹಳ ಕಂಡಿದ್ದೇನೆ. ನಗು ನಗುತ್ತ ಹರಿವ ನದಿಯ ಉಸಿರು ಕಟ್ಟಿ ಒಣಗಿತ್ತು, ನಳನಳಿಸುವ ಎಲೆ ವ್ಯರ್ಥ ಉದುರಿ ಬಿದ್ದು ಒಣಗಿತ್ತು, ಹುಮ್ಮಸ್ಸಿನ ಮಣಕದ ಕಾಲು ಮುರಿದಿತ್ತು, ನಿಶ್ಚಲ ಮಧ್ಯಾಹ್ನದ ತೂಕಡಿಕೆಯಲ್ಲಿ ಪ್ರತಿಮೆ...

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ ನಡೆದರು ಮುಗಿಯದ ಕಾಡಿನ ಹಾದಿ ಕಾಣಿಸಿತೊಂದು ಗುಡಿಸಲ ಬಿಡದಿ ಮೀಯಲು ಬೆಚ್ಚನೆ ಬಿಸಿ ನೀರಿತ್ತು ಕುಡಿಯಲು ಪನ್ನೀರಿನ ಷರಬತ್ತು ಒಲೆಯ ಮೇಲೊಂದು ಮಾಯಾ...

ತಂಗಿ ಹುಟ್ಟಿದಳು

ಸಂಭ್ರಮವಿಲ್ಲ, ಸಡಗರವಿಲ್ಲ ಮನೆಯೊಳಗೆ ಸೂತಕದ ವಾತಾವರಣ ಆಶೆಯಂತೆಯೆ ಬತ್ತಿ ಹೋಗಿದೆ ಎದೆ ಹಾಲು ಹಡೆದವ್ವ ಕೊರಗುವಳು ಜೋಲಿ ಏರಿಸಲು ಮೊಳೆಯೆ ಸಿಗಲೊಲ್ಲದು ಅಪ್ಪ ಗೊಣಗುವನು ಪೇಟೆಯಲ್ಲಿ ಮಿಠಾಯಿ ಇದ್ದಕ್ಕಿದ್ದ ಹಾಗೆಯೆ ತುಟ್ಟಿಯಾಗಿದೆ ಚಂದ ಮಾಡಿ...

ಜಗವ ತೋರುವ ಕಣ್ಣು

ಜೊತೆಜೊತೆಯಲಿ ಕೈಯಲ್ಲಿ ಕೈಯಿಟ್ಟು ನಡೆವ ಅವರನ್ನೂ ಕಂಡಾಗಲೆಲ್ಲಾ, ಮುಂದೊಂದು ದಿನ ನಾನು ಹೀಗೆ, ಬರಿಯ ಹಾಗೇ ಅಂದುಕೊಂಡಿದ್ದೆ, ಅಷ್ಟೇ. ಪೇಟೆ ದಾರಿಯಲ್ಲಿ ಹೀಗೆ ಕೈ ಕೈ ಹಿಡಿದು ನಡೆದಾಡಿರಲೇ ಇಲ್ಲ ನಾವೆಂದೂ. ಹಾಗೆ ಇರಲಾಗಲೇ...

ಒರೆಸಿಬಿಡು ಬೇಕಾದರೆ

ಒರೆಸಿಬಿಡು ಬೇಕಾದರೆ ಗೋಳಿಡುವ ಈ ದುರ್ಬಲ ಬದುಕನ್ನು, ಬೋರ್ಡಿನ ಮೇಲೆ ಬರೆದ ಅಲ್ಪಾಯುಷಿ ಅಕ್ಷರಗಳನ್ನು ಡಸ್ಟರು ಸುಮ್ಮನೆ ಒರೆಸಿಬಿಡುವಂತೆ. ನಿನ್ನವರ್‍ತುಲಕ್ಕೆ ಮತ್ತೆ ಹೆಜ್ಜೆ ಇಡಲು ಕಾದಿದ್ದೇನೆ ನಾನು ಹೆಜ್ಜೆ ಇಟ್ಟು ನಡೆದು ಬಳಲಿದ ಹಾದಿಗಳೆಲ್ಲ...

ಬ್ರಾಹ್ಮಣನೂ ಭಗವದ್ಗೀಯೂ

ದಾರಿ ತಪ್ಪಿದವನೊಬ್ಬ ಬ್ರಾಹ್ಮಣ ಅಲೆಯುತಿದ್ದ ಕಾಡಿನಲ್ಲಿ ಮುಸ್ಸಂಜೆಯ ಸಮಯ ಸಿಕ್ಕಿದ ಯಕ್ಷಿಯ ಬಲೆಯಲ್ಲಿ ಹೆಣ್ಣು ರೂಪದ ಯಕ್ಷಿ ತನ್ನ ಮನೆಗೆ ಕರೆಯಿತು ನಾಳೆ ಹೋದರಾಯಿತೆಂದು ಅವನ ಮನವ ಒಲಿಸಿತು ಊಟ ಕೊಟ್ಟು ಚಾಪೆ ಹಾಕಿ...