ನಾನು ಕವಿಯಲ್ಲ; ಆದರೆ ಕವನಗಳನ್ನು ಬರೆಯಬಲ್ಲೆ ಒಂದಿಷ್ಟು ಕುತೂಹಲದಿಂದ, ನನ್ನ ಮನದ ಸಂತೋಷಕ್ಕಾಗಿ ಪದಪುಂಜವ ಜೋಡಿಸಿ ಭಾವನೆಯೆಳೆಯನ್ನು ಬಿಡಿಸಿ ಪದಗಳಿಗೆ ಭಾವನೆಯೆಂಬ ವಸ್ತ್ರವನ್ನು ತೊಡಿಸುತ್ತೇನೆ ಕವನದ ರೂಪದಲ್ಲಿ ಮನದ ಮೂಲೆಯಲ್ಲೆಲ್ಲೋ ಅಡಗಿದ ಕ...

ಯಾರು ಏನು ಯಾಕೆ ಎಂದು ಹೇಳುವವರು ಯಾರು ಇಲ್ಲ ಕೇಳುವವರೆ ಎಲ್ಲರು ಮರವು ತಾನೆ ಏರದು ದಾರಿ ತಾನೆ ನಡೆಯದು ಕತೆಯು ತಾನೆ ಹೇಳದು ಕವಿತೆ ತಾನೆ ಹಾಡದು ಎಲ್ಲಿ ಕಾರ್‍ಯ ಕಾರಣ ಮಳೆಯು ತಾನೆ ಸುರಿಯದು ನದಿಯು ತಾನೆ ಹರಿಯದು ಕಡಲು ತಾನೆ ಉಕ್ಕದು ನೌಕೆ ತಾನ...

ರೂವಾರಿ ರೂವಿಟ್ಟ ಕಲ್ಲಲ್ಲ, ಮೂರ್ತಿಯಿದು, ಎಂತೆಂದರಂತಾಗಬಲ್ಲ ಬಯಲಲ್ಲ, ಮನುಜನಳಲಿಂ ಮೂಡಿದೊಲುಮೆಮಾತ್ರವಿದಲ್ಲ, ನ್ಯಾಯನಡೆಸುವ ನಿಷ್ಠುರದ ನಿಯತಿಯಲ್ಲ. ಜಡದಿಂದ ಜೀವಕ್ಕೆ ಜೀವದಿಂದಾತ್ಮಕ್ಕೆ ಆತ್ಮದಿಂ ರಸಪದಕೆ ಇರವನಿದ ಸೆಳೆವ ಚೇತನಾಯಸ್ಕಾಂತ ಜಾನ...

ಖುರಪುಟದ ಹೆಜ್ಜೆ ಬಡಿತದ ಶಬ್ದ, ಭಗ್ನ ಅವಶೇಷಗಳಡಿ ಕಾಲನ ಉಸಿರು ಮುರಿದು ಬಿದ್ದಚಕ್ರದ ಗಾಲಿ, ಗಡಿಯಾರ ಮುಳ್ಳಿನ ರಿಂಗಣ ಕಾಮನ ಬಿಲ್ಲಿನ ನೆರಳು ಸಿಗದು. ಆಗಸದಲಿ ಹರಡಿದ ಬಟ್ಟೆಯಲ್ಲಿ ತೆಗೆದಿಟ್ಟ ಚುಕ್ಕಿಗಳ ಮೂಟೆ ಮೌನ ಬಿಕ್ಕುವ ಮಾತುಗಳನ್ನು ಕೊಳೆಹ...

ವಜ್ರದ ಗಣಿಗಳು ನಮ್ಮ ದೇಶದಲ್ಲಿ ಮಾತ್ರ ಇದ್ದುದು. ಮೊತ್ತ ಮೊದಲು ವಜ್ರವನ್ನು ಬಳಸಿದ ಹಾಗೂ ಪರಿಚಯಿಸಿದ ದೇಶ ಭಾರತ! ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೊಲ್ಲೂರು ಗಣಿಯಿದೆ. ಇದು ವಿಶ್ವಕ್ಕೇ ಮಾದರಿ. ಬಹು ದೊಡ್ಡ ಗಣಿಯಾಗಿದೆ. ಈ ಗಣಿಯಿಂದ ಕೊಹಿನ...

೧ ಏನಿದೇನಿದು ಬಾನಧುನಿಯಲಿ ಘೋರಗರ್ಜನೆ ಗೆಯ್ವುದು ಪೊನಲ ನೆಗಸವು ನೆಗೆದು ಬಂದಿರೆ ಘೂರ್ಣಿಸುವ ಸೌಂರಂಭಮೊ ವನಧಿ ಮೇರೆಯ ಘನರವಂಗಳ ಮಿಕ್ಕಿ ಮೀರುವ ಮೊಳಗಿದೊ ೨ ಕಾಲಪುರುಷನ ಕಡಕಡಾಟದ ಸಂಚರಿಪ ಸಂಚಾಲಮೊ ಇಳೆಯನೆಲ್ಲವ ಬಳಸಿಯುಲಿಯುವ ವಿಲಯ ಕಾಲದ ಕಹಳೆಯ...

ಕಾಣುವ ಕಣ್ಣಿಗೆ ಇರುವಳು ರುಕ್ಮಿಣಿ ಕೃಷ್ಣನ ಬದಿಯಲ್ಲಿ; ರಾಧೆಯು ಎದೆಯಲ್ಲಿ. ಬಲ್ಲವರಾರು ಇರುವವರೆಂದು ರುಕ್ಮಿಣಿ ಎದೆಯಲ್ಲಿ; ಕೃಷ್ಣನ ಸಹವಾಸದಲಿ! ತುಟಿಯಲಿ ರಾಮ ಮನದಲಿ ಕೃಷ್ಣ ಇದು ಗಂಡಿಗೆ ಪ್ರೀತಿ; ನಾವೊಪ್ಪಿದ ರೀತಿ. ನುಡಿಯದೆ ಹೋದ ಮಾತುಗಳಿರ...

ಎಂದಿನಂತೆ ಹೂವಯ್ಯ ಸಮಯಕ್ಕ ಸರಿಯಾಗಿ ತಮ್ಮ ಮನೀಂದ ಹೊರಗ ಬಿದ್ದರು. ಬರತಾ ದಾರಾಗ ದಣೀ ಮನಿ ಹೊಸ್ತಿಲಾ ಮುಟ್ಟಿ ಸಣ್ ಮಾಡೀನಽ ದಿನಾ ಕಚೇರಿಗೆ ಎಡತಾಕೋದು. ಹಂಗಂತ ಸ್ವಾತಂತ್ರ್ಯ ಸಿಕ್ಕು ಏಸ್ ವರ್‍ಷಾಗಿರಬಹುದು ಅನ್ನಾ ಲೆಕ್ಕಾ ಹಾಕಾಂಗಿಲ್ಲ. ಮುಂಜಾನ...

ಮೂಲ: ಬುದ್ಧದೇವ ದಾಸಗುಪ್ತ ಛತ್ರಿಗಳೆಲ್ಲ ಥಟ್ಟನೆ ಬೀದಿಗೆ ಬಂದಿದ್ದಾವೆ, ಒಂದರ ಸಹಾಯದಿಂದ ಒಂದು ನಡೆಯುತ್ತಿದ್ದಾವೆ. ಪುಟ್ಟನೆ ಛತ್ರಿಯ ಹೆಗಲಿನ ಮೇಲೆ ಒಂದು ಕೈಯಿಟ್ಟು ದೊಡ್ಡ ಛತ್ರಿ ನಡೆಯುತ್ತಿದೆ ತಾನೇ ಪ್ರತ್ಯೇಕ. ಎಷ್ಟೋ ಹೊತ್ತಿನಿಂದ ಪಾಪ ಬಸ...

1...56789

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....