ಕಾಸಿಗ್ ಕಾಸ್ ಗಂಟಾಕಿ ಒಟ್ಟೆಗ್ ಬೆನ್ ಅಂಟಾಕಿ ’ನಾನೂ ಒಬ್ ಸೆಟ್ಟಿ ದುಡ್ಡೈತೆ ಗಟ್ಟಿ’ ಅಂತಂತಿ ಮುನ್ಯ! ಚಂದಾನ ಮುನ್ಯ? ೧ ಯೆಚ್ಚ್ ಅಳತೆ ಕೊಡವಲ್ಲೆ! ಬಿಡಕಾಸೂ ಬಿಡವಲ್ಲೆ! ನೀನೂ ತಿನ್ವಲ್ಲೆ! ‘ಕೋ’ ಅಂತನ್ವೊಲ್ಲೆ! ಚಂದಾನ ಮುನ್ಯ? ನೀನೇ ಯೋಳ್ ಮು...

ವಿಂಧ್ಯದ ಅನುಲ್ಲಂಘ್ಯ ಮಸ್ತಕವ ಮೆಟ್ಟಿ, ದ- ಕ್ಷಿಣದ ದಾರಿಯ ತೆರೆದು ತೋರಿದಿರಿ; ಉತ್ತರಕೆ ಉತ್ತರೋತ್ತರವಾಯ್ತು. ದಕ್ಷಿಣದ ಏಳ್ತರಕೆ ಎಡೆಯಾಯ್ತು. ನಿಮ್ಮ ಪಾವನ ಪಾದ ಮೆಟ್ಟಿದ- ಲ್ಲಲ್ಲಿ ತೀರ್ಥಕ್ಷೇತ್ರ. ಮುಕ್ತಿ ಗಂಗೆಯು ಇಳಿದ ಭಕ್ತಿ ಭೂಮಿಯು ತಮ...

ಹಸಿರು ತುಂಬಿದ ಒಂದು ಮರ. ಅದರ ಪಕ್ಕದಲ್ಲಿ ಮತ್ತೊಂದು ಬೋಳು ಮರ. ಎರಡೂ ಒಂದನ್ನೊಂದು ನೋಡುತಿದ್ದವು. ಬೋಳು ಮರವನ್ನು ನೋಡಿ ಹಸಿರು ಮರ ಮರುಕಗೊಂಡು ಹೇಳಿತು. “ನಗ್ನವಾಗಿರುವ ನಿನ್ನ ನಾ ನೋಡಲಾರೆ. ನನ್ನ ಹಸಿರು ಅಂಗಿ ನಿನಗೆ ಕೊಡುವೆ”...

ಇರುನೆಲದೊಳನ್ನ ದೊರೆಯುತಿರಲೇಕಿಂತು ನರನಲೆಯುವನೋ ಉದ್ಯೋಗವೆಂದೆನುತ ಊರೂರಲೆದು ಬಂದಿರ್‍ಪ ನೂರೊಂದಮೇಧ್ಯವ ನಾರೋಗಿಸಿದ ರಕುತದೊತ್ತಡದ ಶಕುತಿಯಿಂದೆಮದು ತಿರುತಿರುಗಿ ಬೇಕೆನಿಪ ಶಕುತಿ ಸುರೆಗಿಹುದು – ವಿಜ್ಞಾನೇಶ್ವರಾ *****...

(ಹೂಂಗಾ ತರೋ ಮಲ್ಲಗೀರಣ್ಣಾ ) ಹೂಂಗಾ ತರೋ ಮಲ್ಲಿಗೀರಣ್ಣಾ ಹೂಂಗಿನ ಬೆಲಿಯೇನೇಲ್ ಕೇಳ್ ಬಾರ್ ಚಿನ್ನಾ ಕೋಲು ಕೋಲನ್ನ ಕೋಲ ಕೋಲನ್ನಾ ಕೋಲು ಕೋಲು ಕೋಲನ್ನ || ೧ || ಸಂಪುಗೆ ಸಂಪುಗೆ ಯಾವೂರ ಸಂಪುಗೇ? ದ್ಯೇವರಿಗೆ ಹೋಗ್ ಸಂಪಿಗೇ ದ್ಯೇವರಿಗೆ ಹೋಗ್ ಮಿಂ...

ಮೇರಿಯಸ್ಸನು ಕೋಸೆಟ್ಟಳನ್ನು ಜೀನ್ ವಾಲ್ಜೀನನಿಂದ ಸ್ವಲ್ಪ ಸ್ವಲ್ಪವಾಗಿ ದೂರಮಾಡುತ್ತ ಬಂದನು. ಈ ವಿಷಯದಲ್ಲಿ ಕೋಸೆ ಟ್ಟಳು ಯಾವ ಮಾತನ್ನೂ ಆಡದೆ ಸುಮ್ಮನಿದ್ದಳು. ತಾನು ಅಷ್ಟು ದಿನಗಳಿಂದಲೂ ತಂದೆಯೆಂದು ಕರೆದು ಪ್ರೀತಿಸುತ್ತಿದ್ದವನ ವಿಷಯ ದಲ್ಲಿ ಅ...

ಆಹಾ ನನ್ನ ಬಾಳು ಇದೆಯೇನು! ಸ್ವಾರ್‍ಥವೆ ನನ್ನ ಉಪಯೋಗವೇ ದೈವ ಧರ್‍ಮಗಳ ಮಾತನಾಡಿ ಸುಳ್ಳು ಮೋಸಗಳ ಯೋಗವೆ! ಆತ್ಮದಲ್ಲಿ ನಡೆದ ರಾಗಗಳಿಗೆ ಕೇಳದೆ ಮಾಡುತಿಹೆ ಕೋಲಾಹಲ ನಿನ್ನವರು ನಿನ್ನ ಮನ ಓಲೈಸಲು ಕುಡಿಯುತ್ತಿರುವೆ ನಿತ್ಯ ಹಾಲಾಹಲ ಎಂದಿಗಾದರೂ ನೀನು...

ರಾಮನೇನು ಗೊತ್ತು ನಮಗೆ ತ್ಯಾಗರಾಜರಿಲ್ಲದೆ ಕೃಷ್ಣನೇನು ಗೊತ್ತು ಪುರಂದರ ದಾಸರಿಲ್ಲದೆ ಶಿವನೇನು ಗೊತ್ತು ನಮಗೆ ಅಲ್ಲಮರಿಲ್ಲದೆ ದಿವವೇನು ಗೊತ್ತು ನಮಗೆ ಸೂರ್‍ಯಚಂದ್ರರಿಲ್ಲದೆ ಭಕ್ತಿಯೇನು ಗೊತ್ತು ಆ- ನಂದವೇನು ಗೊತ್ತು ಅನುಭವವೇನು ಗೊತ್ತು ಅನು- ...

ಯೋಜನಗಳಾಚೆಯೊಳು ಎಲ್ಲಿಯೋ ಜನಿಯಾಂತು ಮಿಂಚಿನಣುಗಳನೇರಿ ಸಕಲ ದಿಙ್ಮಂಡಲವ ಸಂಚರಿಸುತಂತರದಿ ಮೌನದಿಂ ಮಿಡಿಯುತಿಹ ಸೋಜಿಗದ ಗೀತವನ್ನು ಹಿಡಿದು, ಉಜ್ಜ್ವಲಗೊಳಿಸಿ, ಶ್ರೋತೃಪಥವೈದಿಸುವ ಯಂತ್ರದೊಲು,-ಹೇ ಕವಿಯೆ, ಬಾಳುಬಾಳುಗಳಾಚೆ ಬ್ರಹ್ಮಾಂಡ ಹೃದಯಾಂತ- ...

1...456789

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....