ಕನ್ನಡ್ ಪದಗೊಳು

ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ- ತಕ್ಕೊ! ಪದಗೊಳ್ ಬಾಣ! ೧ ಬಗವಂತ್ ಏನ ಬೂಮೀಗ್ ಇಳದು ನನ್ ತಾಕ್ ಬಂದಾಂತ್ ಅನ್ನು; ಪರ್ ಗಿರೀಕ್ಸೆ ಮಾಡ್ತಾನ್...

ಅಷ್ಟಷಟ್ಪದಿ

ಅಷ್ಟಷಟ್ಟದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ; ಹಾಗೆ ಇದು, ಹೀಗೆ ಇದು, ಎನುತ ಜೀಕುಜೀಕಿನ ವಿಲಾಸದಲಿ ತನ್ಮಯವಾಗಿ, ಸಂಶಯವೆ ಸಿಂಗಾರವಡೆದು ಸ್ವಚ್ಛಂದದಲಿ ಬೀರಿದುದೆ ನೋಟ, ಹಾರಿದುದೆ ಹುಬ್ಬೆನುವಂತೆ ಕುಣಿಸುತಿದೆ ಅಂಗಾಂಗ; ಹೃದ್ಯ ಚಿತ್ತತರಂಗ ಮಿಂಚಿನಂತುಲ್ಲಟಿಸಿ ಅಟಮಟಿಸಿ...
ಮತಸಂಪಾದನೆಗೆ ರಾಮಬಾಣ ಉಪಾಯ

ಮತಸಂಪಾದನೆಗೆ ರಾಮಬಾಣ ಉಪಾಯ

ಬರ್‍ರಿ, ಬರ್‍ರಿ ಗೋಪಾಳರಾವ ನಮ್ಮನ್ನಗ್ದಿ ಮರೇತ್ರಂತ ತಿಳಕೂಂಡಿದ್ದಿವಿ. ಬರ್ರಿ ಇಲ್ಲೆ ಕೂಡಬರ್ರಿ. ಅಕಡೆ ಕೂಡಬಾಡ್ರಿ ನಿಮ್ಮ ಕೂಡುವ ಸ್ಥಾನ ಈ ಗಾದಿಯ ಮೇಲೆ ಅದೆ. ನಿಮ್ಮನ್ನ ತೆಳಗ ಕೂಡ್ರಿಸಿ ನಾವೆಲ್ಲಿ ಕೂಡ್ರ ಬೇಕು. ಗಾದಿಯ...

ಒಳ್ಳಿತೆಲ್ಲಿಹುದಿಲ್ಲ ಕೃಷಿಯಲ್ಲಿ?

ಎಲ್ಲಿ ನೋಡಿದರಲ್ಲಿ ರೈತ ಬವಣೆಗಳು ನೂರು ಬೆಳೆಯದಾವುದಾದರು ಈರುಳ್ಳಿ ಸುಲಿದ ನೀರು ಕೊಳತ ಟೊಮೇಟೋದೀಪರಿಗೆ ಬಂದೀತು ಕಾರು (ವಾಂತಿ) ಹೇಳಿ ಕೇಳಿ ಕಲ್ಪವೃಕ್ಷವೆಂದವರ ಆಸೆಗಳು ಚೂರು ಮೊಳೆತೆನ್ನಾರಂಭದಾಶಯಕೆಲ್ಲಿಹುದು ನೀರು - ವಿಜ್ಞಾನೇಶ್ವರಾ *****

ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ

ಕಟ್ಟಿದ ಕಾಲೀ ಆಣೀ ಪರದಾಣೀ ಕೋಲೇ ಕಟ್ಟಿದ ಕಾಲೀಯಾ ಪರದಾಣೀ ನನ್ನ ಒಡೆಯ ಕಂತೂಕೂ ಹೋಗೂವಾ ಶೂಲಮ್ಮ ಕೋಲೇ || ೧ || ಊರ ವಂದೇ ಹತ್ತು ಮಂದಿಗೆ ಹೇಳೂಕೆಯಾ ಕೊಡುವಾನೋ ಮೀರಾಶೀ ಮಗನೇ...
ಪಾಪಿಯ ಪಾಡು – ೧

ಪಾಪಿಯ ಪಾಡು – ೧

ನೂರು ವರ್ಷಗಳಿಗಿಂತಲೂ ಹಿಂದೆ ಫ್ರಾನ್ಸ್ ದೇಶದಲ್ಲಿ ಜೀನ್ ವಾಲ್ಜೀನನೆಂಬ ಒಬ್ಬ ಕಷ್ಟಜೀವಿಯಾದ ರೈತನು, ಆಹಾರ ವಿಲ್ಲದೆ ಸಾಯುತ್ತಿದ್ದ ತನ್ನ ತಂಗಿಯ ಮಕ್ಕಳಿಗಾಗಿ ಒಂದು ರೊಟ್ಟಿಯನ್ನು ಕದ್ದು ತಂದನು. ಇದಕ್ಕಾಗಿ ಇವನಿಗೆ ಐದುವರ್ಷಗಳ ಕಠಿಣ ಶಿಕ್ಷೆಯನ್ನು...

ಆಚರಣೆ

ರಾಮ ರಾಮ ಎಂದು ಧ್ಯಾನಿಸಿದೆ ನಿ ಎನ್ನ ಹೃದಯದಲಿ ಉದಯಿಸಿದೆ ನಿನ್ನ ಕೃಪೆಗಾಗಿ ನಾ ಕಾತರಿಸಿದೆ ನಾ ಬಡವನು ಕೃಪೆ ಇರಲಿ ತಂದೆ ಎತ್ತೆತ್ತ ನೋಡಲು ನಿನ್ನ ರೂಪ ಎದೆಯ ಮೂಲೆಯಲ್ಲೂ ನಿನ್ನ ನೆನಪ...

ಹಾರಿಬಂತೊಂದು ಹಕ್ಕಿ

ಹಾರಿಬಂತೋಂದು ಹಕ್ಕಿ ಸಂಜೆಯಲಿ ಮೈದಪ್ಪಿ ಒಳಗೆ ಹಾರಿಬಂತೊಂದು ಹಕ್ಕಿ. ಹೊರ ಹೋಗಲರಿಯದೆ ತನ್ನವರ ಕಾಣದೆ ಬಂದ ಬಗಯರಿಯದೆ ಅತ್ತಿತ್ತ ನೋಡುತಿದೆ ಭಯದಿಂದ ನಡುಗುತಿದೆ. ಇವರಾರೊ ಹೊಸಬರು ತನ್ನನಿವರರಿಯರು ಮೊದಲಿವರು ಕಾಣರು ಬಂಧನದಿ ಬದುಕುವರು ತನ್ನ...

ಪಾಂಡವರ ರಾಜಸೂಯ ಯಾಗ

-ಪ್ರಜಾಕಂಟಕನಾಗಿದ್ದ ಜರಾಸಂಧನನ್ನು ಪಾಂಡವರ ಸಹಾಯದಿಂದ ಸಂಹರಿಸಿ, ಅವನು ಬಲಿಕೊಡಲೆಂದು ಸೆರೆಯಲ್ಲಿಟ್ಟಿದ್ದ ಅನೇಕ ಮಂದಿ ರಾಜರನ್ನು ಸ್ವತಂತ್ರಗೊಳಿಸಿದ ಬಳಿಕ ಕೃಷ್ಣನು, ಪಾಂಡವರಿಗೆ ರಾಜಸೂಯ ಯಾಗವನ್ನು ಕೈಗೊಳ್ಳಲು ಸೂಚಿಸಿದನು. ಧರ್ಮಜನ ನಾಲ್ವರು ಸೋದರರಾದ ಭೀಮಾರ್ಜುನ ನಕುಲ ಸಹದೇವರುಗಳು...

ಉಮರನ ಒಸಗೆ – ೧

ಏಳೆನ್ನ ಮನದನ್ನೆ! ನೋಡು, ಪೊಳ್ತರೆ ಬಂದು ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸೆದು ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು; ನಿದ್ದೆ ಸಾಕಿನ್ನೀಗ ಮುದ್ದಣುಗಿ ಬಾರ. *****