ತವರೂ ನೋಡಾಲ ನಾ ಬಂದೇ
ತಾಯೇ ನೆನಪಿಗೆ ಕಣ್ಣಲಿ ನೀರ ತಂದೇ || ೧ ||

ಹುಟ್ಟೇಲೀನೊಳಗೆ ಹಾಲ ಕುಡಿಸಿದ್ದೇ
ತೊಟ್ಟಿಲೊಳಗೇ ಲಾಡಿ ಮೆರೆದಿದ್ದೆ || ೨ ||

ಅಣ್ಣಾ ನಮ್ಮ ಏನಾದರೂ
ಅತ್ತಗಿ ನಮ್ಮಾವಳಲ್ಲಾ || ೩ ||

ತಾಯೀಯ ಮನೆದೊಳಗೇ
ಹಾಲನ್ನು ಕುಡದು ಬೆಳದಿದ್ದೇ || ೪ ||

ಅಣ್ಣಾನ ಮನೆಯೊಳಗೇ
ಹಣಿನೀರು ನಮ್ಮಗೇ ಕೊಟ್ಟಿರೂ || ೫ ||
*****
ಹೇಳಿದವರು: ಗಣಪ ಸುಬ್ಬ ಗೌಡ, ೨೬ ವರ್ಷ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.