ಅಂಗಡಿಯೊಳನ್ನಾಹಾರ ದೊರಕುತಿರಲೀತನು
ಆರಾಮದೊಳಲೆಯುವನೋ ಓದಿದಾತನು
ಅಮೃತಕು ವಿಷಕು ಅಂತರವನರಿಯದಾತನು
ಅಂತೆ ಪೇಳುವನು ತಾನು ವೈಜ್ಞಾನಿಕನು
ಆಯ್ಕೆಯಾಲಿ ಕೆಡುಕನೇ ಕೊಂಡುಣ್ಣುವನು – ವಿಜ್ಞಾನೇಶ್ವರಾ
*****