ನಿನ್ನ ದೃಢವಚನವನ್ನು ನೀನು ಪಾಲಿಸಲಿಲ್ಲ, ಹಾಗೆಂದೆ ಆಪ್ತರಾಗಿದ್ದಾರೆ ಇತರರು ನನಗೆ; ಆದರೂ ಮೃತ್ಯು ಕಣ್ಣೆದುರು ನಿಂತಾಗ, ನಿದ್ದೆಯ ಎತ್ತರಗಳನ್ನು ತೆವಳುತ್ತ ಹತ್ತಿರುವಾಗ, ಅಥವ ಮದ್ಯವ ಹೀರಿ ಉದ್ದೀಪ್ತನಾದಾಗ ಹಠಾತ್ತನೆದುರಾಗುವುದು ನಿನ್ನ ಮುಖ ನ...

ಪ್ರಿಯ ಸಖಿ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಲೇಖಕ ಯು. ಆರ್. ಅನಂತಮೂರ್‍ತಿಯವರು ಸಂವಾದಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಮ್ಮ ದೇಶದ ದುರಂತವೆಂದರೆ ಜನರಿಗೆ ಮೊದಲು ದೂರದರ್‍ಶನವನ್ನು ನೀಡಿದ್ದು! ಮೊದಲು ನಾವು ಜನರಿಗೆ ವೈಚಾರಿಕ...

ವರುಷ ವರುಷಕೆ ಮಳೆಯು ಬಾರದಿರೆ ನೊಗಗುಂದಿ ಬಿಸಿಲಿಗೆದೆಯೆಲ್ಲ ನಿಗಿನಿಗಿಯಾಗಿ ಮಲಗಿಹುದು ಮರುಭೂಮಿ ಕಂರಗತ ಪ್ರಾಣ ತಾ ಹಲುಬಿಹುದು ಗಂಗೋದಕವ ಬೇಡಿ ಸಸ್ಯಗಳು ಕಳೆಗುಂದಿ ನಿಶ್ಚೇಷ್ಟವಿರೆ ಹೆಮ್ಮರಗಳು ನಿಂತಿವೆ ಹೊಂದಿ ನೂರಾರು ಕೆಳಗಿರುವ ಜೀವನವ, ತೊಲ...

ಶರಣ ದೊಡ್ಡ ದೀಪದ ಕೆಳಗ ಉದ್ದ ಭಾಷಣ ಬಿಗಿದು ಚಪ್ಪಾಳಿ ಹೊಡೆಸಿದರ ಶರಣನಲ್ಲ ಕುಡ್ಡ ದೀಪದ ಕೆಳಗ ಬಿದ್ದ ಆತ್ಮರ ಹುಡಿಕಿ ಶಿವನ ತೋರುವ ಶರಣ ಮುದ್ದುಕಂದ ವ್ಯಾಖ್ಯಾನ ಬಲುದೊಡ್ಡ ಜುಟ್ಟಿನಲಿ ರುದ್ರಾಕ್ಷಿ ಸರ ಬಿಗಿದು ವ್ಯಾಖ್ಯಾನ ಕುಟ್ಟುವವ ಶರಣನಲ್ಲ ಹ...

ಮೊನ್ನೆ ಮೊನ್ನೆ ಪತ್ರಿಕೆಯೊಂದರಲ್ಲಿ ಗಮನಿಸಿದ ವಿಚಾರವೆಂದರೆ ಆಂದ್ರಗಡಿಗೆ ತಾಕಿಕೊಂಡಿರುವ ಕರ್‍ನಾಟಕದ ಪಾವಗಡ ಎಂಬ ಹೆಬ್ಬಂಡೆಗಳ ಊರಿನ ಹಲವು ಹಳ್ಳಿಗಳಲ್ಲಿ ವಿಧವೆಯರ ಹರಾಜು ನಡೆಯುತ್ತದೆ ಎಂಬ ವಿಚಿತ್ರ ಆದರೆ ಸತ್ಯ ಸಂಗತಿ. ಕುಂಚಲಕೊರಚ ಎಂಬ ಸಮುದ...

ನಂ ಪಡಕಾನೇಲ್ ವುಂಬ ಮುನಿಯ ಇಬ್ರೂ ಗಟಾಂಗಟಿ! ಓದ್ ಸನವಾರ ಬಿತ್ ಇಬ್ಬರ್‍ಗು ಬಾರಿ ಲಟಾಪಟ! ೧ ಸುರುವಾಯ್ತಣ್ಣ ಮಾರಾಮಾರಿ- ಯಾವ್ದೊ ಒಂದ್ ಚಿಕ್ ಮಾತ್ಗೆ; ಬೆಟ್ದಾಗ್ ಕಲ್ಗೋಳ್ ಪೇರೀಸ್ದಂಗೆ ಲಾತ್ ಏರ್‍ಕೋಂತು ಲಾತ್ಗೆ ೨ ನಡನುಗ್ ಎತ್ತಾಕ್ ಕೆಳಕ್ ಕೆ...

ನಗೆಯಾಡದಿರು ನನ್ನ ನಲುಮೆ ಒಲುಮೆಯ ಕುರಿತು. ಅರಿಯೆನೇ ತುಂಬು ಮೈ ಮಾಂಸಪಿಂಡದ ಡಂಭ- ವೆಂಬುದನು? ನಾಣು ನೆತ್ತರದಾಟ, ಮಧು ಚುಂಬ- ನವು ಕುನ್ನಿ ಚಿನ್ನಾಟ, ಸಂತತಿಯ ತಂತು ಋತು- ಮಾನಗಳ ಮಾಟ; ಅಂತಃಕರಣ ಹುಲು ಡೊಂಬ- ನೊಲು ಕುಣಿದು ಮಣಿವಾಟ. ಅತಿಥಿ ರೂ...

Kannada Research Lectures Series No. 6 ೧೯೪೩ ಯಲ್ಲಿ ಮಾಡಿದ ಬಾಷಣ. ಚಂದ್ರವಳ್ಳಿ:- ಕರ್ಣಾಟಕದಲ್ಲಿ ಭೂಶೋಧನೆಯು ಶಾಸ್ತ್ರೀಯವಾಗಿ ನಡೆದಿರುವುದು ಚಿತ್ರದುರ್ಗದ ಸಮೀಪದಲ್ಲಿರುವ ಚಂದ್ರವಳ್ಳಿ ಕಣಿವೆಯಲ್ಲಿ. ಈ ಶೋಧನೆಯಿಂದ ನಮಗೆ ಕರ್ಣಾಟಕದ ಆದ...

ರುಚಿಯದೆಲ್ಲಿಹುದು? ಬಿಸಿ ಕಾಫಿಯೊಳೇ? ಕಚಗುಳಿಯಯಿಸ್‌ಕ್ರೀಮಿನೊಳೇ? ದುಡಿದುಣುವ ಹಚ್ಚ ಹಸಿವಿನೊಳೇ? ದುಡಿಮೆ ಕಷ್ಟವೆಂದೊಡಾ ರುಚಿಯನುಚ್ಛ ನೀಚೋಷ್ಣತೆಗೇರಿಸಲಿಳಿಸಲು ಹಚ್ಚ ಹಸಿರಿಂಗೆಷ್ಟು ಕಷ್ಟವಿಹುದೆಂದರಿತಿಹಿರಾ ? – ವಿಜ್ಞಾನೇಶ್ವರಾ ***...

ಅತ್ತೆ ಹೆಸ್ರು ಹರ್‌ಕು ಚಾಪೆ ಮಾವನ ಹೆಸ್ರು ಮಂಚದ ಕಾಲೂ ಕೋಲು ಕೋಲೆನ್ನ ಕೋಲೇ || ೧ || ರನ್ನದಾ ಬಣ್ಣದಾ ಚಿನ್ನದಾ ಬೆದುರಿನ ಕೋಲು ಕೋಲೆನ್ನ ಕೋಲೇ || ೨ || ಚಿನ್ನದಾ ರನ್ನದಾ ಬಣ್ಣದಾ ಬೆದುರಿನ ಕೋಲು ಕೋಲೆನ್ನ ಕೋಲೇ || ೩ || ಸುರಸೂರಂಬು ಹೆಣ್ಣ...

1...6364656667...110

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...