ಕೋಲು ಕೋಲೆನ್ನ ಕೋಲೇ (ಅತ್ತೆ ಹೆಸ್ರು ಹರ್‌ಕು ಚಾಪೆ)

ಅತ್ತೆ ಹೆಸ್ರು ಹರ್‌ಕು ಚಾಪೆ ಮಾವನ ಹೆಸ್ರು ಮಂಚದ ಕಾಲೂ
ಕೋಲು ಕೋಲೆನ್ನ ಕೋಲೇ || ೧ ||

ರನ್ನದಾ ಬಣ್ಣದಾ ಚಿನ್ನದಾ ಬೆದುರಿನ
ಕೋಲು ಕೋಲೆನ್ನ ಕೋಲೇ || ೨ ||

ಚಿನ್ನದಾ ರನ್ನದಾ ಬಣ್ಣದಾ ಬೆದುರಿನ
ಕೋಲು ಕೋಲೆನ್ನ ಕೋಲೇ || ೩ ||

ಸುರಸೂರಂಬು ಹೆಣ್ಣೆ ಸುರಗೀ ಮೊಗ ಮುಚ್ಚಿ
ಕೇಳಿದೆಯೇ ಹೆಣ್ಣೇ ಹೊಸ ಸುದ್ದೀ? ರನ್ನದಾ
ಕೋಲು ಕೋಲೆನ್ನ ಕೋಲೇ || ೪ ||

ರನ್ನದಾ ಬಣ್ಣದಾ ಚಿನ್ನದಾ ಬೆದುರಿನ
ಕೋಲು ಕೋಲೆನ್ನ ಕೋಲೇ || ೫ ||

ಉದ್ದೀನ ಗೆದ್ದೀಯಲ್ಲಿ ಉದ್ದೀಸಿ ಬೇಲಿಯ ಮಾಡಿ
ವಳ್ಳೋಳ್ಳೆ ಪುಂಡಿರ ಏಳು ಮಾಡೀ | ಹೆರು ಮಾಡೀ ಕುಮಟಿಯ
ಕಾಗದ ಬಂದ್ ಹೊರ್‌ತೂ ಬಿಡುಬೇಡೀ
ರನ್ನದಾ ಬಣ್ಣದಾ ಚಿನ್ನದಾ ಬೆದುರಿನ
ಕೋಲು ಕೋಲೆನ್ನ ಕೋಲೇ || ೬ ||
*****
ಹೇಳಿದವರು: ದಿ. ಪರಮೇಶ್ವರಿ ತಂದೆ ಯಂಕಣ್ಣ ಅಂಬಿಗ, ೨೭/೧೨/೭೦

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪಿಯ ಪಾಡು – ೨೨
Next post ರುಚಿಯನರಸುವೊಡೆ ಶುಚಿಯಳಿವ ಭಯವಿರಬೇಡವೇ?

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…