ಬರಡಾಗುತಿದೆ ಬದುಕು ಭೂಮಿಗೆ ಮಳೆಯಿಲ್ಲದೆ ಜಾಲಾಡಿದರೂ ಜಲವಿಲ್ಲ ಜೀವಿಗಳಿಗೆ ಉಳಿವಿಲ್ಲ ಮಾನವರೆಲ್ಲೊ ಸೇರಿಸುವರು ಅಲ್ಲಿ ಇಲ್ಲಿ ಹೊತ್ತು ತಂದು ಮೂಕ ಪ್ರಾಣಿಗಳಿಗೆ ಬಂದಿದೆ ಜೀವಕ್ಕೆ ಕುತ್ತು ವರುಣ ನೀ ಕರುಣೆ ತೋರಿ ಸುರಿಸು ಮಳೆ ಹನಿಯನ್ನು ಜೀವಿಗಳ...

ಧ್ಯಾನವಿಲ್ಲ ತಪವಿಲ್ಲ ಗಾಢನಿದ್ದೆಯಲಿ ಮೈಮರೆತವ ಅಪ್ಪಿತಪ್ಪಿ ಪಕ್ಕಕ್ಕೆ ಹೊರಳಿ ನೇರ ಈ ಮರ್ತ್ಯಲೋಕಕ್ಕೆ ಬಿದ್ದು ನೆತ್ತಿಯೊಡೆದು ಬಾಯ್ಬಿಟ್ಟು ಈ ನೆಲದಂತರಾಳಕ್ಕೂ ಆ ಅನೂಹ್ಯ ಲೋಕಕ್ಕೂ ನಡುವೆ ನಿಸ್ತಂತುವಿನೆಳೆ * ಆಯಾಸ ತುಂಬಿದ ನಿದ್ದೆಗಣ್ಣಿನಲ್ಲ...

ಭಾರತೀಯ ಚಿತ್ರರಂಗಕ್ಕೆ ಈಗ ನೂರನೇ ವರ್ಷ. ನಿಜಕ್ಕೂ ಇದೊಂದು ಅಪೂರ್ವ ಕಾಲಘಟ್ಟ ಹಾಗೂ ಐತಿಹಾಸಿಕ ಸಂದರ್ಭ. ಯಾವುದೇ ಐತಿಹಾಸಿಕ ಸಂದರ್ಭಗಳು ಸಂಭ್ರಮಕ್ಕೆ ಕಾರಣವಾಗಲೇಬೇಕು. ಅದೇ ಸಂದರ್ಭದಲ್ಲಿ ಸಿಂಹಾವಲೋಕನ ಮತ್ತು ಆತ್ಮಾವಲೋಕನಗಳಿಗೆ ಅವಕಾಶವಿರಬೇಕು...

ಕೆಂಪಿನ ಓಕುಳಿ ಸ್ನಾನದಲಿ, ಇಂಪಿನ ಕೋಗಿಲೆ ಗಾನದಲಿ, ಬಾನಿನ ಗದ್ದಿಗೆ ಏರಿದನು, ಭಾನುವು ಹೊಂದಲೆ ತೋರಿದನು. ಆ ದಿನನಾಥನ ಮೂರುತಿಗೆ ಆದವು ಹೂಗಳು ಆರತಿಗೆ; ಕೋಳಿಯು ಕಹಳೆಯ ಊದಿದುದು, ಗಾಳಿಯು ರಾಯಸ ಓದಿದುದು. ***** (ಕವಿಶಿಷ್ಯ)...

ವೇದವನು ತೊರೆದವರು ಮತ್ತಾ ವೇದವನು ಓದುತೋದುತಲೊರೆವವರು ಅವರಿವರೆಲ್ಲರುಂ ಚೋದನೆಯಮಲಿನ ಪೇಟೆಯುದ್ಯೋಗಕೊಲಿದವರೆ ವೇದ ಮೂಲದಾರಣ್ಯಿಕದ ಕೃಷಿಯ ತೊರೆದವರೆ ವೇದನೆಯ ಕೃಷಿಗೆಲ್ಲರುಂ ಸೂತ್ರಧಾರಿಗಳೆ – ವಿಜ್ಞಾನೇಶ್ವರಾ *****...

ಏಳು ಕಂದಾ ಮುದ್ದು ಕಂದಾ ತಂದೆ ಶ್ರೀಗುರು ಕರೆದನು ಮಕ್ಕಳಾಟವು ಸಾಕು ಮಗುವೆ ವ್ಯರ್ಥ ಸಾಕು ಎಂದನು ಕೈಯ ಹಿಡಿದನು ಕರುಣೆ ಮಿಡಿದನು ಮೇಲು ಮೇಲಕೆ ಕರೆದನು ಮೇಲು ಮೇಲಿನ ಮೇಲು ಮಠದಾ ಪ್ರೇಮ ಪಾಠವ ಕೊಟ್ಟನು ಮಾತು ಜ್ಯೋತಿರ್ಲಿಂಗವಾಗಲಿ ಮನವು ಆರತಿ ಬೆ...

ಶಾಂತಿ ಶಾಂತಿ ಶಾಂತಿ ಶಾಂತಿ ಮಂತ್ರ ಊದಿದ ಬಾಯಿಗಳಲ್ಲಿಂದು ರಣಕಹಳೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಗುಬ್ಬಿಯ ಮುಂದೆ ಬ್ರಹ್ಮಾಸ್ತ್ರ ಸರ್ವಾಧಿಕಾರದ ಪರಮಾವಧಿ ರಕ್ಷಕರೇ ಭಕ್ಷಕರಾಗಿ ನುಡಿಸಿದರು ಭೀಭತ್ಸಗಾನ ದೇವರಿಗೂ ಸಡ್ಡು ಹೊಡೆದು ಮಾಡಿದರು ಮಾರಣ...

ಆಕಾಶದಲ್ಲಿ ತಾರೆಗಳು ಕಾಣಬಾರದೆಂಬ ಯೋಚನೆಯುಳ್ಳಡೆ ಸೂರ್ಯೋದಯಕ್ಕಯ್ಯಾ ಆಕಾಶದಲ್ಲಿ ತಾರೆಗಳು ಕಾಣಬೇಕೆಂಬ ಯೋಚನೆಯುಳ್ಳಡೆ ಸೂರ್ಯಾಸ್ತಮಾನಕ್ಕಯ್ಯಾ ಕಾಣಬಾರದು ಕಾಣಬಾರದು ಜ್ಞಾನದಲ್ಲಿ ಆನಂದ ಅನಾನಂದವ ಕಾಣಬಹುದು ಕಾಣಬಹುದು ಅಜ್ಞಾನದಲ್ಲಿ ಸುಖದುಃಖೋಭ...

ಕಾಳರಾಣಿ ಕೊಲೆಪಾತಕ ಬಂದ! ಮೂಳನಾಗಿ ಮೊಗದೋರಲು ಬಂದ!! ೧ ಮುಗಿಲರಮನೆ ಮುಂಭಾಗದಿ ನಿಂದ! ಜಗದ ಜಾತಿಗಳ ನೆಬ್ಬಿಸಿರೆಂದ!! ೨ ಮನುಜನೊಬ್ಬ ಮನೆಯಿಂದಲಿ ಬಂದ! ಹನಿನೀರಿಗೆ ತಾ ಕೆರೆಗೈ ತಂದ !! ೩ `ಕೊನೆಯಮನುಜ ನಾ ಕಾಣಿರಿ’ ಯೆಂದ! `ಕನಿಕರ ಕಣ್ಣೀ...

1...7891011...15

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....