ವೇದವನು ತೊರೆದವರು ಮತ್ತಾ ವೇದವನು
ಓದುತೋದುತಲೊರೆವವರು ಅವರಿವರೆಲ್ಲರುಂ
ಚೋದನೆಯಮಲಿನ ಪೇಟೆಯುದ್ಯೋಗಕೊಲಿದವರೆ
ವೇದ ಮೂಲದಾರಣ್ಯಿಕದ ಕೃಷಿಯ ತೊರೆದವರೆ
ವೇದನೆಯ ಕೃಷಿಗೆಲ್ಲರುಂ ಸೂತ್ರಧಾರಿಗಳೆ – ವಿಜ್ಞಾನೇಶ್ವರಾ
*****