ಮೂಲ: ವಿ ಎಸ್ ಖಾಂಡೇಕರ ಹುಡಿಗೆಯು ಮುಖವನ್ನು ಮೇಲಕ್ಕೆತ್ತಿ ನೋಡಿದಳು. ಕೈಯ್ಯನ್ನು ತೆಗೆದ ಕೂಡಲೆ ಹೊರಮುಚ್ಚಕದ ಗಿಡವು ಮತ್ತೆ ಮೊದಲಿನಂತೆ ಹಚ್ಚನೆ ನಿಲ್ಲುವದಿಲ್ಲವೆ? ನೋಡಲಿಕ್ಕೆ ಬಂದವರೆಲ್ಲರೂ ಚಹ ತೆಗೆದುಕೊಳ್ಳಲಿಕ್ಕೆ ಹತ್ತಿದರು. ಆಗ ಅವಳಿಗೆ ...

ಮನುಜ ನಡೆ ಮುಂದೆ ನಡೆ ಮುಂದೆ ನೀ ನಿಂತ ತಾಣ ಇದು ಶಾಶ್ವತ ಅಲ್ಲ ಇದು ಕೇವಲ ಕನಸುಗಳ ಗುಂಪು ಇಲ್ಲಿಲ್ಲ ಪರಮಾತ್ಮನ ಭಕ್ತಿ ಇಂಪು ನಿನ್ನ ಹೆಜ್ಜೆ ಹೆಜ್ಜೆಗೂ ಕಾಡಿವೆ ಮುಳ್ಳು ಆ ಮುಳ್ಳಗಳ ನೀನು ಹೂವಾಗಿಸಬೇಕು ಆಡಬೇಡ ವ್ಯರ್ಥ ಚರ್ಚೆ ಮಾತುಗೊಳ್ಳು ಅದು...

ಯುದ್ಧ ಯುದ್ಧ ಯುದ್ಧ ಎಲ್ಲೆಲ್ಲೂ ಯುದ್ಧ! ದೇಶ ದೇಶಗಳ ಗಡಿಗಳಲ್ಲಿ, ದ್ವೇಷದ ಉರಿಹತ್ತಿದಲ್ಲಿ, ಮತಾಂಧತೆಯ ಮರುಳು ಮುತ್ತಿದಲ್ಲಿ ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ ಎಲ್ಲೆಲ್ಲೂ ಯುದ್ಧ; ಮೃತ್ಯು ಕುಣಿತ. ಉರುಳುವುದು ಹೆಣಗಳ ಸಾಲು ಸಾಲ...

ನಿನ್ನ ಮಾತೆತ್ತಿದೆನೊ ಹುರುಪಳಿಸಿ ಕುಸಿಯುವೆನು, ನನಗು ಗಟ್ಟಿಗನೊಬ್ಬ ನಿನ್ನ ಹೆಸರನು ಬಳಸಿ ಸಮೆಸಿರುವ ಅದಕೆಂದೆ ತನ್ನೆಲ್ಲ ಸತ್ವವನು, ಕಟ್ಟಿಹೋಗಿದೆ ನನ್ನ ನಾಲಿಗೆಯೆ ನುಡಿಯಳಿಸಿ. ನಿನ್ನ ಗುಣಶೀಲ ಸಾಗರದಲ್ಲಿ ತೇಲುವುದು ಹಿರಿಜಹಜು ಕಿರುದೋಣಿ ಭೇ...

ಸುಖದ ಸುಪ್ಪತಿಗೆಯಲ್ಲಿ ದಶರಥನಿಗಾದರೋ ತನ್ನ ಸುಖಸಾಮ್ರಾಜ್ಯವನ್ನು ಕಂಡು ಒಂದು ರೀತಿಯ ಆನಂದ ಇನ್ನೊಂದು ಕಡೆ ಭಯ. ತನ್ನ ಸುಖ ಸಂಸಾರಕ್ಕೆ ಯಾರ ಕಣ್ಣು ತಾಗುವುದೋ ಎಂದು. ಮಕ್ಕಳನ್ನು ನೋಡಿದೆ, ಮುದ್ದಾಡಿದೆ. ದೊಡ್ಡವರನ್ನಾಗಿ ಮಾಡಿದೆ. ಸೊಸೆಯರನ್ನು ...

ಮೈ ತೊಳೆದು ಗಂಗೆಯಲಿ ಮನವೆಲ್ಲ ಮಡಿಯಾಗಿ ಅವಕಾಶವೆಲ್ಲವನು ತುಂಬಿದರು ದೇಗುಲದಿ ಸಾಕಾರ ನಾಗಿರುವ ವಿಶ್ವೇಶ ನಿನ್ನಡಿಗೆ ಶರಣಾಗಿ ಬಂದಿಹುದು ಈ ಜೀವ ಈ ಬಾಳ ನಿನ್ನಡಿಗೆ ಮುಡುಪಾಗಿ ನಿಲಿಸುವಂತಹ ಮನವ ನೀಡೆನೆಗೆ ಕಾರುಣ್ಯರೂಪನೇ! ತಾಮಸದ ಕಜ್ಜಳವ ಕಳೆದೊ...

ಪ್ರಾರ್ಥನೆ ಗೈವರು ದೇವರಲಿ ತಪ್ಪು ಮಾಡುವ ಮುನ್ನಾ ಕ್ಷಣ ನೆನೆಯುವರು ನಿನ್ನ ಮನದಲ್ಲಿ ಕಾಪಾಡು ನನ್ನನು ಅನುದಿನ ಎಂದು. ಪ್ರಾರ್ಥನೆ ಗೈವರು ದೇವರಲಿ ಮಾಡಿದ ತಪ್ಪಿಗೆ ಕ್ಷಮೆಕೋರಿ ನೆನದು ಬೇಡುವರು ಅನುಕ್ಷಣ ಮನ್ನಿಸಿಬಿಡು ನನ್ನನ್ನ ಹರಕೆಯ ಹೊರುವರು...

ಹೂಕೋಸಿನ ರೂಪ ಬಣ್ಣದಲಿ ಮನ ಲೀನ, ಮಲಿನ. ಹೆಚ್ಚುತ್ತಾ ಮೆಚ್ಚುತ್ತಾ ಅದರ ಬುಡದಲ್ಲೇ ಹರಿವ ಪಿತಿಪಿತಿ ಹುಳು ಕಂಡರೂ ಕಾಣದಂತೆ ಚೆಲುವಿನಾರಾಧನಾ ಧ್ಯಾನ ಪೀಠಸ್ಥ ಆದೇಶಕ್ಕೆ ಮಹಾಮೌನ. ದಂಟು ಬೇಳೆ ಬೇಯಿಸಿ ಬಸಿದು ಮೆಣಸು ಮಸಾಲೆ ಖಾರ ಹದ ಬೆರೆಸಿ ಕುದಿಸ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....