ಭಕ್ತ

ಪ್ರಾರ್ಥನೆ ಗೈವರು ದೇವರಲಿ
ತಪ್ಪು ಮಾಡುವ ಮುನ್ನಾ ಕ್ಷಣ
ನೆನೆಯುವರು ನಿನ್ನ ಮನದಲ್ಲಿ
ಕಾಪಾಡು ನನ್ನನು ಅನುದಿನ ಎಂದು.

ಪ್ರಾರ್ಥನೆ ಗೈವರು ದೇವರಲಿ
ಮಾಡಿದ ತಪ್ಪಿಗೆ ಕ್ಷಮೆಕೋರಿ
ನೆನದು ಬೇಡುವರು ಅನುಕ್ಷಣ
ಮನ್ನಿಸಿಬಿಡು ನನ್ನನ್ನ

ಹರಕೆಯ ಹೊರುವರು ನಿನ್ನಲ್ಲಿ
ಕಾಡಿಬೇಡುವರು ವರವನು ಕೇಳಿ
ಅಂದುಕೊಂಡಂತೆ ನೆನೆದರೇನೆ
ಮುಂದಿಡುವರು ಹರಕೆಯ ಸನ್ನ

ಮಾಡುವರು ಶಪಥ ನಿನ್ನಲ್ಲಿ
ಆಮಿಷ ತೋರುವ ತರದಲಿ
ಕಾರ್ಯ ಸಿದ್ಧಿ ಯಾದರೇನೆ ನಿನಗೆ
ಕೊಡುವರು ಚಿನ್ನಾಭರಣ

ಸ್ವಾರ್ಥದಿ ಜನ ಬೇಡುವರು ದಿನ
ಬೇಡುವರೆಲ್ಲರು ತಮ್ಮದೆ ಒಳಿತಿಗೆ
ಬಲಿ ಕೊಡುವರು ಮೂಕ ಪ್ರಾಣಿಗಳ
ರಕ್ಕಸ ಮುಖ ತೋರುವ

ದೇವರೆ ದೇವರೆ ಎನ್ನುವರು ದಿನ
ತಮಗಾಗಿ ತಮ್ಮ ಒಳಿತಿಗಾಗಿ
ನಿನಗಾಗಿ ಪ್ರಾರ್ಥಿಸುವವರು ನಾನಂತು ಕಾಣೆ
ಇದು ಸತ್ಯ ದೇವ ನಿನ್ನಾಣೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಜ ಧ್ಯಾನ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೩

ಸಣ್ಣ ಕತೆ

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…