ನಡೆ ಮುಂದೆ

ಮನುಜ ನಡೆ ಮುಂದೆ ನಡೆ ಮುಂದೆ
ನೀ ನಿಂತ ತಾಣ ಇದು ಶಾಶ್ವತ ಅಲ್ಲ
ಇದು ಕೇವಲ ಕನಸುಗಳ ಗುಂಪು
ಇಲ್ಲಿಲ್ಲ ಪರಮಾತ್ಮನ ಭಕ್ತಿ ಇಂಪು

ನಿನ್ನ ಹೆಜ್ಜೆ ಹೆಜ್ಜೆಗೂ ಕಾಡಿವೆ ಮುಳ್ಳು
ಆ ಮುಳ್ಳಗಳ ನೀನು ಹೂವಾಗಿಸಬೇಕು
ಆಡಬೇಡ ವ್ಯರ್ಥ ಚರ್ಚೆ ಮಾತುಗೊಳ್ಳು
ಅದು ನಿನ್ನ ವ್ಯಕ್ತಿತ್ವ ಹನನವಾಗಿಸಲು ಸಾಕು

ಅಚಲ ಶ್ರದ್ಧೆ ಭಕ್ತಿಗಳೇ ನಿನ್ನ ಸಿದ್ಧತೆ
ಪ್ರಾಮಾಣಿಕ ನಡೆ ನುಡಿಗಳೇ ಬದ್ಧತೆ
ಸಾಧಿಸಬೇಕಾದರೆ ಈಗಲೇ ಸಾಧಿಸು
ನಾಳೆ ಎಂಬುದೆಲ್ಲ ಇಂದೇ ಭೇದಿಸು

ಭವಸಾಗರದಿಂದ ಆನಂದ ಸಾಗರತ್ತ ನಡೆ
ಮಾಡು ನಿನ್ನಯ ಈ ಜನುಮ ಕಡೆ
ಬಲು ನೀರ, ಗಾಳಿಗೆ ಚಡಪಡಿಸುವಂತೆ
ಆಗದೆ, ಮಾಡು ಮಾಣಿಕ್ಯ ವಿಠಲನ ಚಿಂತೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಿಡುಗಡೆ ಕ್ಷಣ
Next post ಅವಳ ಕಣ್ಣುಗಳು

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…