ಬಾಲಕನ ಚೂಟಿಯಾಟಕ್ಕೆ ಹಿಗ್ಗುವ ಹಾಗೆ ಮುಪ್ಪಾದ ತಂದೆ, ನಾ ವಿಧಿಯಸೂಯೆಗೆ ಸಿಕ್ಕು ವಿಕಲನಾದರು ನಿನ್ನ ಮೇಲ್ಮೆ ಯೋಗ್ಯತೆಗಳಿಗೆ ನೆಮ್ಮದಿಯ ತಾಳುವೆನು. ಸೌಂದರ್ಯ ಸಂಪತ್ತು ವಂಶ, ಧೀಶಕ್ತಿ – ಒಂದೇ ಇರಲಿ, ಕೂಡಿರಲಿ ಮೆರೆಯುತಿದೆ ತುತ್ತತುದಿ ನ...

ಮಿಳಿತವಾದುದು ಪ್ರೇಮ ನಯನದಲಿ ಗಿರಿನಾಯಕ ತೋರಿಸಿಕೊಟ್ಟದ್ದು ಪರಶುರಾಮರನ್ನು. ಬದುಕಿರುವಾಗಲೇ ಕತೆಯಾದವರು ಅವರು. ಅಂಬೆ ಎಳವೆಯವಳಾಗಿದ್ದಾಗ ಅವಳ ಅಪ್ಪ ಪರಶುರಾಮರ ಕತೆಗಳನ್ನು ಎಷ್ಟೋ ಬಾರಿ ಹೇಳಿದ್ದುಂಟು. ಅಪ್ಪ ಅವರನ್ನು ಕ್ಷತ್ರಿಯ ದ್ವೇಷಿ ಎಂದು ...

ಆಸೆ ಗೂಡಿನ ಹಕ್ಕಿ ಆಗಸದಿ ಬೆಳಕ ನೋಡಿ ಸಂತಸದಿ ತೇಲುತ್ತಾ ಮನದಿ ಚಿಂವ್… ಎಂದು ಹಾರಿತು ಆಗಸಕೆ ರೆಕ್ಕೆ ಪುಕ್ಕ ಬಿಚ್ಚಿ ದಿನದ ಆಹಾರ ಅರಸುತ ಕಾಡು ಮೇಡಲಿ ಅಲೆಯುತ ದೂರದಿ ಹಾರಿ ಹೊಟ್ಟೆ ಹೊರೆದು ಬೆಳಕು ಮಂಕಾಗುವ ಹೊತ್ತು ಮರಳಿ ಸೇರಿತು ಗೂಡಿ...

ದೂರದ ಗೋವೆಯಿಂದ ವಧು ಬಂದಿತ್ತು ಪ್ರಥಮ ನೋಟದಲೆನ್ನ ಮನವ ಗೆದ್ದಿತ್ತು. ಕಣ್ಗಳೇ ಆಡಿದವು ನೂರಾರು ಮಾತು, ಆಳವಾಗಿ ಬೇರೂರಿತು ಪ್ರೇಮ, ಹೃದಯಗಳು ಬೆರೆತು. ಬಾಂಧವ್ಯಕೆ ಭಾಷೆಯ ಬಂಧನವಿಲ್ಲ ಹಲವು ಭಾಷೆಗಳಲ್ಲಿ ಹರಿಯಿತು ಪತ್ರ ಪ್ರವಾಹ ವ್ಯವಸ್ಥಿತ ಮದು...

ಮೌರಿಸ್ ಮರ್‍ಲೋ-ಪೋಂಟಿ (೧೯ಂ೮-೬೧) ಮತ್ತು ಜಾನ್-ಪಾಲ್ ಸಾರ್‍ತೃ (೧೯ಂ೫-೮ಂ) ಇಬ್ಬರೂ ಫ್ರಾನ್ಸ್ ಕಂಡ ಇಪ್ಪತ್ತನೆಯ ಶತಮಾನದ ಮಹಾ ಮೇಧಾವಿಗಳು. ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ಒಲವಿದ್ದ ಇವರು ಎಂದೂ ಆ ಪಕ್ಷದ ಸದ್ಯಸ್ಯರಾಗಿರಲಿಲ್ಲ-ಕಮ್ಯೂನಿಸ್ಟ್ ಪ...

ಬೆಲ್ಲಾ ತಿಂದೆ ನಾನು ನಲ್ಲಾ ಬೆಲ್ಲಾ ಜೇನು ಎಲ್ಲಾ ಇಂಥಾ ಬೆಲ್ಲಾ ಎಲ್ಲೂ ಇಲ್ಲಾ ನಾನು ನೀನು ಖುಲ್ಲಾ ಹುಲ್ಲು ಕಳ್ಳಿ ಕಂಟಿ ತಿಂದೆ ಅದಽ ವೈನ ಅಂದೆ ತಿಂದ ಮ್ಯಾಗ ತಿರುಗಿ ಬಿದ್ದೆ ತಳಗ ಮ್ಯಾಗ ಆದೆ ಇಂಗು ತಿಂದು ಮಂಗ ನಾದೆ ಮ್ಯಾಲ ಹೆಂಡಾ ಕುಡಿದೆ ರಂ...

ಪಾಪು: “ಅಪ್ಪ, ಅಮ್ಮ ತುಂಬಾ ಸುಳ್ಳು ಹೇಳ್ತಾಳೆ?” ಅಪ್ಪು: “ಹೌದು ಏನಾಯ್ತು…” ಪಾಪು: “ಕನ್ನಡಿ ಮುಟ್ಟು ಬೇಡ ಬಿದ್ದರೆ ಎರಡು ಚೂರಾಗುತ್ತೆ ಅಂದ್ಲು ಇಲ್ಲಿ ನೋಡು ಎಷ್ಟು ಚೂರು ಚೂರಾಗಿದೆ ಅಂತ..”...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....