ಬಾಳಲಿ ಕೆಸರೇ ತುಂಬಿಹುದೂ ಕಮಲ ಹುಟ್ಟಬೇಕು ಅಂಧಕಾರದಲಿ ಅಜ್ಞತೆ ತುಂಬಿದೆ ಜ್ಞಾನ ತಾರೆ ಬೇಕು || ೧ || ಜೀವರಾಶಿಗಳ ದೂರ ಪಯಣದಲಿ ಮನುಜ ಕೊನೆಗೆ ಬಂದ ಕೋಟಿ ಜನುಮಗಳ ಸಮುದ್ರ ಮಥನದಿ ಅಮ್ಮತವನ್ನೆ ತಂದ || ೨ || ವಿಷಯಸಾಗರದಿ ವಿಷದ ಭೋಗದಲಿ ಜೀವ ಕೊಡ...

ನಾಸಿರ್‌ ಇಬ್ನ್‌ ಅಹಮದ್‌ ನಾಸಿರ್‌ ಇಬ್ನ್‌ ಅಹಮದ್! ಯಾರಿಗೆ ತಾನೆ ಗೊತ್ತಿಲ್ಲ ಅವನ ? ಸಾಮನೀದ್‌ ರಾಜವಂಶದ ಅಮೀನ ಅವನಲ್ಲಿ ನಮಗೆ ಅಪಾರ ವಿಶ್ವಾಸ-ಆತ ಹೋದ ಹೋದಲ್ಲಿ ರಕ್ಷಣೆಯ ಪಡೆ, ಸೇವಕರ ದಂಡು, ಬುಖಾರಾದವರು ಸ್ವಾಮಿ, ನಾವು. ಕಸುವಿರುವ ನೆಲ, ಫ...

ನಡೆದಿಹೆನು ನಡೆದಿಹೆನು ಅಡವಿಯ ಅರಣ್ಯದಲಿ ಮುಂಜಾನದಲ್ಲಿ ನಿನಗೆ ಕಾಣದೇನು? ಕಡುಕತ್ತಲೆಯ ಸುತ್ತು ಬಿತ್ತರಿಸಿ ಮುತ್ತುತಿಹ ಮೊದಲೆ ಬೆಳಕು ಕೊಡಲುಬಾರದೇನು? ಕಂಟಿಕಲ್ಲಗಳೆಡವುತೆಡವುತ್ತ ಮುಗ್ಗರಿಸು – ತಿರೆ ಎತ್ತಿ ನೀ ಹಿಡಿಯಬಾರದೇನು? ಕುಂಠಿ...

ನನ್ನ ಮನಸು ನಿನ್ನಲ್ಲಿ ನಿನ್ನ ಮನಸು ನನ್ನಲ್ಲಿ ನಡುವೆ ಯಾವುದೀ ಅಂತರ . . . ಆಗಬಹುದೆ ಹೃದಯ ಹಗುರ? /ಪ// ಹರಿಯುತಿದೆ ತುಂಬಿ ಹೊಳೆ ಜೊತೆಗೆ ಮುಂಗಾರು ಮಳೆ ತಳ ಒಡೆದ ದೋಣಿ ದಡದಲಿ . . . ತಾರೆ ಬೆಳಕು ಸಹ ಇಲ್ಲ ನಭದಲಿ ! ಮೊರೆಯುತಿದೆ ಸಪ್ತ ಸಮುದ...

“ಹಾಕಿದುದು ಅರಮನೆಯ ಅಡಿಗಟ್ಟು ; ಕಟ್ಟಿದುದು ಗುಡಿಸಲು! ಹೀಗೇಕಾಯಿತು ? ವಿಧಾತನ ಕ್ರೂರತನವೊ , ತಂದೆಯ ಬಡತನವೊ ? ವಿಧಿಯನ್ನಲೇ ? ವಿಧಿಯು ಉದಾರಿಯು ; ಸೃಷ್ಟಿಯಲ್ಲಿ ಮೈ ಮರುಳುಗೊಳಿಸುತ್ತ, ಬಗೆಗೆ ಆನಂದ ಬೀರುತ್ತ, ಸೊಬಗಿನ ಆಗರಗಳಾಗಿ ಇರು...

ಆಗಾಗ ಭೂ ಕಂಪಗಳು ಯುದ್ಧಗಳು ಸುನಾಮಿಗಳು ಮುಗಿಯದ ತಾಪ ತ್ರಯಗಳು ಗೋಜು ಗೊಂದಲಗಳು ಶರಧಿಯ ತಿಮಿಂಗಿಲಗಳು ಅಲ್ಲಲ್ಲಿ ಮಿಂಚು ಹುಳುಗಳು ದ್ವೀಪಗಳು ಕಾಪಾಡ ಬಂದ ಹಡಗುಗಳು ಸಿಡಿಸುತ್ತಿರುವ ಮತಾಪುಗಳು ಅನವರತ ಸಾಗುವ ಈ ಪ್ರಯಾಣ ಮುಗಿಯುವುದೇ ಇಲ್ಲ ಆಯಾಸ ...

ನನ್ನ ಕವಿತೆಗಳಲ್ಲಿ ನಿನ್ನ ಗುಣಗಳ ತಂದು ನಿಜ ಬಣ್ಣಿಸಿದ್ದರೂ, ಅದು ನಿನ್ನ ಘನತೆಯನು ಅರ್ಧ ಮಾತ್ರವೆ ತೋರುವಂಥ ಸ್ಮಾರಕ ಎಂದು ಸ್ವರ್ಗಕೇ ಗೊತ್ತಿದ್ದೂ ನಂಬುವರು ಯಾರದನು ? ಆ ಕಣ್ಣ ಸೊಬಗ ಹಾಗೇ ಚಿತ್ರಿಸಿದರೂ, ನಿನ್ನ ಘನತೆಯ ಕುರಿತು ಹೊಸ ಹೊಸತು ಬ...

1...56789...13

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....