ನನ್ನ ಕವಿತೆಗಳಲ್ಲಿ ನಿನ್ನ ಗುಣಗಳ ತಂದು
ನಿಜ ಬಣ್ಣಿಸಿದ್ದರೂ, ಅದು ನಿನ್ನ ಘನತೆಯನು
ಅರ್ಧ ಮಾತ್ರವೆ ತೋರುವಂಥ ಸ್ಮಾರಕ ಎಂದು
ಸ್ವರ್ಗಕೇ ಗೊತ್ತಿದ್ದೂ ನಂಬುವರು ಯಾರದನು ?
ಆ ಕಣ್ಣ ಸೊಬಗ ಹಾಗೇ ಚಿತ್ರಿಸಿದರೂ,
ನಿನ್ನ ಘನತೆಯ ಕುರಿತು ಹೊಸ ಹೊಸತು ಬರೆದರೂ,
ಬರಲಿರುವ ಕಾಲ ಸಾರುವುದು – ಈ ನುಡಿ ಸುಳ್ಳು
ಇಂಥ ದೈವಿಕತೆ ಇರಲಿಲ್ಲ ಮನುಜರಲೆಂದೂ.
ದಿನ ಹೋಗಿ ಹಳದಿ ತಿರುಗಿದ ನನ್ನ ಪುಟಗಳನು
ಸಟೆ ನುಡಿವ ಮುದುಕರೆಂಬಂತೆ ಜನ ತೆಗಳುವರು
ನಿನ್ನ ನಿಜ ಸತ್ವವನು ‘ಆವೇಶದಲಿ ಕವಿಯು
ಹಳೆಹಾಡ ಜಗ್ಗಿ ಹಿಗ್ಗಿಸಿದ ಸ್ತುತಿ’ ಎನ್ನುವರು.
ನೀ ಉಳಿವೆ ಆಗ ನಿನ್ನದೆ ಕಂದ ಇದ್ದಲ್ಲಿ
ಎರಡೆರಡು ರೀತಿಯಲಿ, ಕಂದನಲಿ ಕವಿತೆಯಲಿ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 17
Who will believe my verse in time to come
Related Post
ಸಣ್ಣ ಕತೆ
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…
-
ಕೇರೀಜಂ…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ವಲಯ
ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…