ನನ್ನ ಮನಸು ನಿನ್ನಲ್ಲಿ
ನಿನ್ನ ಮನಸು ನನ್ನಲ್ಲಿ
ನಡುವೆ ಯಾವುದೀ ಅಂತರ . . .
ಆಗಬಹುದೆ ಹೃದಯ ಹಗುರ? /ಪ//

ಹರಿಯುತಿದೆ ತುಂಬಿ ಹೊಳೆ
ಜೊತೆಗೆ ಮುಂಗಾರು ಮಳೆ
ತಳ ಒಡೆದ ದೋಣಿ ದಡದಲಿ . . .
ತಾರೆ ಬೆಳಕು ಸಹ ಇಲ್ಲ ನಭದಲಿ !

ಮೊರೆಯುತಿದೆ ಸಪ್ತ ಸಮುದ್ರ
ದಿಕ್ಕು ದೆಸೆಗಳೆಲ್ಲವೂ ಛಿದ್ರ
ದಾರಿ ಮೂಡಬಹುದೇ ಇಲ್ಲಿ? . . .
ನನ್ನ ನಿನ್ನ ಸಂಗಮದ ದಿಕ್ಕಲಿ

ನನ್ನ ನಿನ್ನ ನಡುವೆ ಬೇಲಿ
ಹೇಗೊ ಏನೊ ಬೆಳೆದಿಹುದಿಲ್ಲಿ
ಹೇಳು ಇದಕೇನು ಕಾರಣ? . . .
ಆಗಬಹುದೆ ಬದುಕು ಶ್ರಾವಣ?
*****