ಎಲ್ಲರೂ ದಡ ಸೇರಿದರು ನಾನು ಮಾತ್ರ ನಡು ನೀರಿನಲ್ಲಿ ಎಲ್ಲರೂ ಹೊಳದಾಟಿದರು ನಾನು ಮಾತ್ರ ಮುರುಕು ದೋಣಿಯಲ್ಲಿ ಕತ್ತರಿಸುತ್ತಿದೆ ಚಳಿ ತತ್ತರಿಸುತ್ತಿದೆ ಎದೆ ನಡುಗಿ ಅಲೆಯೊಳಗೆ ತೇಲಿ ಬಿಟ್ಟಿರುವೆ ಕಂಬನಿಯ ಮಾಲೆ ಇರುವುದೊ ಇಲ್ಲವೊ ನಾನರಿಯೆ ನನ್ನ ಪಾ...

ರಂಗ ಕುಸ್ತಿಯಲ್ಲಿ ಗೆದ್ದರೂ ಅಂತಹ ಸಂತೋಷವಾಗಲಿ ಪುಳಕವಾಗಲಿ ಉಂಟಾಗಿರಲಿಲ್ಲ. ಯಾರಿಂದಲೂ ಆಗದ್ದನ್ನು ಸಾಧಿಸಿದೆ. ಹಳ್ಳಿಮಾನವನ್ನು ಕಾಪಾಡಿದೆನೆಂಬ ಭ್ರಮೆಯೂ ಅವನನ್ನಾವರಿಸಿರಲಿಲ್ಲ. ಕಾಲೆಳೆದುಕೊಂಡೆ ಮನೆಗೆ ಬಂದ. ಅವನು ನಿರೀಕ್ಷಿಸಿದಂತೆಯೇ ಮನೆಯಲ...

ಬೇಸರವಾಗಿದೆ ನಗರದಲಾಟ ಧೂಸರ ಧೂಳಿನ ಜೀವನವು ಆಶಿಸಿ ಚಿಗುರೊಳಗಾಡಿತು ಗಾಳಿ ಭಾಷೆಗೆ ನಿಲುಕದ ಭಾವಕೆ ಬೆಂದು. ಬೇಗ ನಡೀ ಹೊರಡೇಳು ನಡೀ ಕೂಗಿದಳಾವಳೊ ಕಾಡಕಿನ್ನರಿಯು ಸೂಟಿಯು ಸಂದರೆ ನಂದಿಯ ಕೂಟ ನೋಟಕೆ ಹಬ್ಬವು ಜೋಗದ ಪಾತ ಮಾಟದ ಪುತ್ಥಳಿ ಬೇಲೂರ ನೋಟ...

ದಿನಾಂಕ ೧೬-೧೦-೨೦೦೮ ರಂದು ‘ವಿಜಯ ಕರ್ನಾಟಕ’ದಲ್ಲಿ ಪ್ರಕಟವಾದ ಡಾ. ಎಸ್.ಎಲ್. ಭೈರಪ್ಪನವರ ಲೇಖನಕ್ಕೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಹೀಗಾಗಿ ನಾನು ತೀರಾ ಹೊಸ ವಿಚಾರವನ್ನು ಹೇಳುತ್ತೇನೆಂಬ ಭ್ರಮೆಯಿಂದ ಬರೆಯುತ್ತಿಲ್ಲ. ಪ್ರತಿಕ್ರಿಯಿಸುವುದು ಒ...

ಓ ಬೆಟ್ಟ ಬಯಲುಗಳೆ ಕಣಿವೆ ಕಡಲುಗಳೆ ನಾನು ನಿಮ್ಮ ಕವನ ಬೇಡ ಧಾವಂತ | ಉಳಿಸಿ ಜೀವಂತ ಕೊಳ್ಳಿ ನನ್ನ ನಮನ //ಪ// ಬೆಳಕ ಚೆಲ್ಲಿದ ಬೆಳ್ಳಿ ಸೂರ್ಯನಿಗೆ ಕತ್ತಲ ಪರದೆಗಳಿಲ್ಲಿ ತಂಪು ನೀಡುವ ತುಂಬು ಚಂದ್ರನಿಗೆ ತಾಪದ ಮುತ್ತಿಗೆಯಿಲ್ಲಿ ಬೀಸಿ ಬರುವ ತಂಗಾ...

ನೀನಿರುವ ತನಕ ನನಗಿಲ್ಲ ಚಿಂತೆ ನಿನ್ನಾಸೆರೆಯಲಿ ನಾನಾಗುವೆ ಕವಿತೆ || ಪ್ರೀತಿಯ ಪದಗಳ ಸುಮವು ನಾನು ದುಂಬಿ| ನೀನಾಗಿ ಬರಲು ಹಿಗ್ಗುವೆನೂ || ವಿರಹದ ಚಿಲುಮೆಯಲ್ಲಿ ಆಷಾಡ ಕಳೆದಿಹೆನು ಹಣೆಯ ಕುಂಕುಮವಾಗಿ ನೀನಿರಲು ನನಗಿಲ್ಲ ಚಿಂತೆಯು || ಶ್ರಾವಣಕೆ ...

ಅಡ್ಡ ಬ್ರಾಹ್ಮಣರ ಬೀದಿನಡುವಿನ ಉದ್ದನೆ ಗರುಡಗಂಬ ಸುತ್ತಮುತ್ತ ಹತ್ತಾರು ಊರಲ್ಲಿ ಇಲ್ಲದ ಏಕಶಿಲಾಸ್ತಂಭ. ವಠ ವಠಾರದ ನಲ್ಲಿ ಬಚ್ಚಲು ಕಥೆ ಒಲೆ ಉರಿಯದ ವ್ಯಥೆ ಯಾರೋ ನಾರಿ ಕತ್ತಲು ಜಾರಿ ಮಣ್ಣ ಸಂದಿಗಳಲ್ಲಿ ಬಣ್ಣವುರಿದ ಜೊತೆ- ಇಂಥ ಗುಲ್ಲನ್ನೆಲ್ಲ ಇ...

ನೀನು ನೋಡಿದರೆ ಹದಿನಾರು ಸಾವಿರದ ನೂರಾ ಎಂಟಕ್ಕೆ ಒಬ್ಬನೇ ಗಂಡ ಪಾಪ ಪಾಂಡವರು ಒಬ್ಬಳಿಗೆ ಐವರು ಗಂಡಂದಿರು ಅರ್ಥಾಥ್ ಸಂಬಂಧವೇ ಇಲ್ಲದ ತದ್ವಿರುದ್ದದ ನಿನ್ನ ಅವರ ಬಾಂಧವ್ಯಕ್ಕೇನಯ್ಯ ಅರ್ಥ ಹೋಗ್ಲಿಬಿಡು ನಿನ್ನ ಬಗ್ಗೆ ಹೀಗೆಲ್ಲಾ ತರ್ಕ ಮಾಡೋದೇ ವ್ಯರ...

ಆ ಊರಿಗೆ ನೀವು ಹೋಗಲೆಬೇಡಿ ಅಥವಾ ಹೋದರೆ ಆ ಓಣಿಯಲಿ ನಡೆಯಲೆಬೇಡಿ ಅಥವಾ ನಡೆದರೆ ಆ ಮನೆ ಬಾಗಿಲ ತೆರಯಲೆಬೇಡಿ ಅಥವಾ ತೆರೆದರೆ ಆ ಹಳೆ ಪಟ್ಟಿಗೆ ಮುಟ್ಟಲೆಬೇಡಿ ಅಥವಾ ಮುಟ್ಟಿದರೆ ಅದರೊಳಗೇನಿದೆ ನೋಡಲೆಬೇಡಿ ಅಥವಾ ನೋಡಿದರೆ ಆ ಕಾಗದ ಚೂರನು ತಗೆಯಲೆಬೇಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....