ಧೂಳು

ಆ ಊರಿಗೆ ನೀವು ಹೋಗಲೆಬೇಡಿ
ಅಥವಾ ಹೋದರೆ
ಆ ಓಣಿಯಲಿ ನಡೆಯಲೆಬೇಡಿ
ಅಥವಾ ನಡೆದರೆ
ಆ ಮನೆ ಬಾಗಿಲ ತೆರಯಲೆಬೇಡಿ
ಅಥವಾ ತೆರೆದರೆ
ಆ ಹಳೆ ಪಟ್ಟಿಗೆ ಮುಟ್ಟಲೆಬೇಡಿ
ಅಥವಾ ಮುಟ್ಟಿದರೆ
ಅದರೊಳಗೇನಿದೆ ನೋಡಲೆಬೇಡಿ
ಅಥವಾ ನೋಡಿದರೆ
ಆ ಕಾಗದ ಚೂರನು ತಗೆಯಲೆಬೇಡಿ
ಅಥವಾ ತೆಗೆದರೆ
ಅದರಲ್ಲೇನಿದೆ ಓದಲೆಬೇಡಿ
ಖಂಡಿತ ಬೇಡಿ
ಅದರ ಧೂಳನು ಹಾಗೆಯೆ ಬಿಡಿ
*****

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ – ೮
Next post ತರ್ಕ-ವ್ಯರ್ಥ

ಸಣ್ಣ ಕತೆ