Month: May 2021

ದಯಮಾಡೋ ರಂಗಾ

ದಯಮಾಡೋ ರಂಗಾ|| ನಿನ್ನಡಿಗಳಿಗೆನ್ನ ಹೃದಯ ಕಮಲವನಿಟ್ಟು ಬರಮಾಡಿಕೊಳ್ಳುವೆ|| ತನುವೆಂಬಾ ಈ ಮನೆಯ ಶುದ್ಧಿಯಮಾಡಿ ಮನವೆಂಬ ಮರ್ಕಟವ ಒಂದೆಡೆ ಕೂಡಿ| ಧ್ಯಾನಿಪೆ ನಿನ್ನನು ಎನ್ನಂತರಂಗದಿ ಪೂಜಿಸಿ|| ಕರಕಮಲದಿಂದಲಿ ಹರಿಭಜನೆಯ […]

ದಾರಿ ಮರೆಯದಿರಲಾ ದಾರಿ ತೋರುವುದೊಂದು ಪರಿಯಲ್ಲವೇ?

ತಿರು ತಿರುಗಿ ನೆನಪಿಸುತೆನ್ನರಿವನಿನ್ನಷ್ಟು ಒರೆ ಹಚ್ಚುವಾತುರದೊಳ್ ಬರೆದೆನ್ನ ಕವನಗಳು ತೋರು ಬೆರಳೆನಗೆ, ಎನ್ನ ಬದುಕಿನ ಸಾರವಿದು ಪರಿಶ್ರಮದ ಫಲವಿದಕೆ ತಿನುವಷ್ಟು ರುಚಿ ಇಕ್ಕು ದಾರಿ ದಣಿದವರಿಂಗಿದು ಉಣಿಸಾದೊಡತಿ […]

ಜಿಜ್ಞಾಸೆ

ನಿನ್ನನ್ನು ಯಾರು ಯಾರೋ ಹೇಗ್ಹೇಗೋ.. ಇರುವೆ ಎನ್ನುವರು. ನೋಡಿದರೆ ಕಲ್ಲು, ಮಣ್ಣು, ಗಗನ, ಗಾಳಿ, ನೀರು, ಬೆಳಕು ಪಶು ಪಕ್ಷಿ ಕ್ರಿಮಿ, ಕೀಟ ನಾನಾ ತರದ ಜನ […]

ತಲ್ಪಾ

ನತಾಲಿಯಾ ಅಮ್ಮನ ತೋಳಿನಲ್ಲಿ ಹುದುಗಿ ತುಂಬ ಹೊತ್ತು ಮೌನವಾಗಿ ಬಿಕ್ಕಿದಳು. ನಾವು ಝೆನ್‌ಸೋಂಟ್ಲಾದಿಂದ ವಾಪಸು ಬಂದು ಅವಳು ಅಮ್ಮನನ್ನು ನೋಡುವ ಈವತ್ತಿನವರೆಗೆ, ಅವಳಿಂದ ಸಮಾಧಾನ ಮಾಡಿಸಿಕೊಳ್ಳಬೇಕು ಅನ್ನಿಸುವ […]

ಮಾಯಾವಿ ಹೂವು

ಗಟ್ಟಿಮುಟ್ಟಾದ ತೋಳು ತೊಡೆ ತಟ್ಟಿ ಅಖಾಡದಲ್ಲಿ ಸೆಣೆಸಾಡಿದ ಜಟ್ಟಿ ಹೂಮಾಲೆ ಕಂಡೊಡನೆ ತಲೆಬಾಗಿದ ರಣರಂಗದಲ್ಲಿ ನೂರಾರು ರುಂಡ ಚಂಡಾಡಿದ ಭುಜಬಲ ಪರಾಕ್ರಮಿ ಹೂಮಾಲೆ ಕಂಡೊಡನೆ ತಲೆ ಬಾಗಿದ […]

ಮುಸ್ಸಂಜೆಯ ಮಿಂಚು – ೨೧

ಅಧ್ಯಾಯ ೨೧ ಸೂರಜ್ ಮದುವೆ ಸಂಚು ವೆಂಕಟೇಶ್‌ರವರು ‘ನಮ್ಮ ಮನೆಯ’ ಎಲ್ಲಾ ಜವಾಬ್ದಾರಿಯನ್ನು ಮೊಮ್ಮಗನ ಮೇಲೆ ವಹಿಸಿಬಿಟ್ಟು ‘ರಾಮ-ಕೃಷ್ಣಾ’ ಎಂದಿದ್ದುಬಿಟ್ಟಿದ್ದರು. ಸೂರಜ್ ಇಲ್ಲಿ ಬಂದಿರುವುದು ಆನೆಬಲ ಬಂದಂತಾಗಿದ್ದರೆ, […]

ಬಾನ್ಸುರಿಯ ನಾದ

ಅದೆಷ್ಟು ದಿನಗಳಾದವು ಕಸುವು ಹದಗೊಳ್ಳಲು ಕಾದು, ಬರುವ ನಿರೀಕ್ಷೆಗಳಲ್ಲಿಯೇ ನೆಟ್ಟ ಕಣ್ಣು ಬಿದಿರುಕೋಲಿನ ನಾದ ಕರ್‍ಣಕ್ಕಿಳಿಯದೇ ಕದಿರು ಕತ್ತರಿಸಿದ ಪೈರು ಆಕೆ ಆ ನೀಲಾಂಗನನ ಸುತ್ತ ನೆರೆದ […]