ಜಿಜ್ಞಾಸೆ

ನಿನ್ನನ್ನು
ಯಾರು ಯಾರೋ
ಹೇಗ್ಹೇಗೋ.. ಇರುವೆ ಎನ್ನುವರು.

ನೋಡಿದರೆ
ಕಲ್ಲು, ಮಣ್ಣು, ಗಗನ, ಗಾಳಿ, ನೀರು, ಬೆಳಕು
ಪಶು ಪಕ್ಷಿ ಕ್ರಿಮಿ, ಕೀಟ
ನಾನಾ ತರದ ಜನ
ಬೇರೆ ಎಲ್ಲಾ ಕಾಣುತ್ತದೆ
ನೀನು ಕಾಣುತ್ತಿಲ್ಲ !

ಎಲ್ಲದರಲ್ಲಿ. ಎಲ್ಲರಲ್ಲಿ ನೀನಿದ್ದೀಯಾ
ಅಂತಾದರೆ ನನ್ನಲ್ಲೂ ನೀನಿರಬೇಕಲ್ಲ!
ಇದ್ದರೆ ಏಕೆ ಗೋಚರವಾಗುತ್ತಿಲ್ಲ

ನನ್ನ ಅನುಮಾನ
ನಿಜವಾಗಲೂ ನೀನಿದ್ದೀಯಾ ?
ಇದ್ದರೆ ಎಲ್ಲಿರುವೆ ? ಹೇಗಿರುವೆ ?
ನಾನು ನೋಡ್ಬೋಕಲ್ಲ !
ನೋಡೋ ಪಕ್ಕಾ ಮಾರ್ಗವಿದ್ದರೆ..
ಅದು ಯಾವುದು ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಲ್ಪಾ
Next post ದಾರಿ ಮರೆಯದಿರಲಾ ದಾರಿ ತೋರುವುದೊಂದು ಪರಿಯಲ್ಲವೇ?

ಸಣ್ಣ ಕತೆ