ಗಟ್ಟಿಮುಟ್ಟಾದ
ತೋಳು ತೊಡೆ ತಟ್ಟಿ
ಅಖಾಡದಲ್ಲಿ
ಸೆಣೆಸಾಡಿದ ಜಟ್ಟಿ
ಹೂಮಾಲೆ ಕಂಡೊಡನೆ
ತಲೆಬಾಗಿದ
ರಣರಂಗದಲ್ಲಿ
ನೂರಾರು ರುಂಡ
ಚಂಡಾಡಿದ
ಭುಜಬಲ ಪರಾಕ್ರಮಿ
ಹೂಮಾಲೆ ಕಂಡೊಡನೆ
ತಲೆ ಬಾಗಿದ
ಹೂವಿನ ಹಿರಿಮೆಯನು
ಬಲ್ಲವನೇ ಬಲ್ಲ
ಲೋಕದಲಿ ಹೂವಿಗೆ
ಎದುರಾಳಿಗಳೆ ಇಲ್ಲ!
*****
ಗಟ್ಟಿಮುಟ್ಟಾದ
ತೋಳು ತೊಡೆ ತಟ್ಟಿ
ಅಖಾಡದಲ್ಲಿ
ಸೆಣೆಸಾಡಿದ ಜಟ್ಟಿ
ಹೂಮಾಲೆ ಕಂಡೊಡನೆ
ತಲೆಬಾಗಿದ
ರಣರಂಗದಲ್ಲಿ
ನೂರಾರು ರುಂಡ
ಚಂಡಾಡಿದ
ಭುಜಬಲ ಪರಾಕ್ರಮಿ
ಹೂಮಾಲೆ ಕಂಡೊಡನೆ
ತಲೆ ಬಾಗಿದ
ಹೂವಿನ ಹಿರಿಮೆಯನು
ಬಲ್ಲವನೇ ಬಲ್ಲ
ಲೋಕದಲಿ ಹೂವಿಗೆ
ಎದುರಾಳಿಗಳೆ ಇಲ್ಲ!
*****