ಅಚ್ಚಚ್ಚು ಬೆಲ್ಲದಚ್ಚು ಅಲ್ಲಿ ನೋಡು ಇಲ್ಲಿ ನೋಡು ಸಂಪಂಗಿ ಮರದಲ್ಲಿ ಕಾಗೆ ನೋಡು…. ಗೆಳತಿ ಗುಣುಗುಣಿಸಿದಳು. ನಾನು ನೋಡಿದೆ: ಮರದ ಮೇಲೆ ಕುಳಿತುಕೊಂಡು ಹುಳುವೊಂದನ್ನು ಅವುಚಿ ಹಿಡಿದು ಕಾಗೆ ಕೂಗುತ್ತಿತ್ತು. ಕಾ…. ಕಾ….. ಕಾ...

ಪೂಜಾರಪ್ಪ ಒಡೆಯರ ಮನೆ ಬಳಿಗೆ ಬಂದಾಗ ಅವರು ಜೋಯಿಸರ ಜೊತೆ ಮಾತಾಡುತ್ತ. ಅಡಿಕೆಲೆ ಜಗಿಯುತ್ತ ಕೂತಿದ್ದರು. ಪೂಜಾರಪ್ಪ “ಅಡ್ ಬಿದ್ದೆ ದಣೇರ” ಎಂದು ಹೇಳಿ ಹಜಾರದ ತುದಿಯಲ್ಲಿ ನಿಂತುಕೊಂಡ. “ಕುಂತ್ಯಳಯ್ಯ” ಎಂದರು ಒಡೆಯರು...

ನನ್ನ ನಲ್ಲ ಹಮ್ಮುಬಿಮ್ಮಿನ ಒಡೆಯ ನಾ ನಕ್ಕರೂ ನಗಲಾರ ಬಿಗುಮಾನಕ್ಕೆ ಅವನೇ ಪತಿ ಸತಿಯಲ್ಲಿ ಅಕ್ಕರೆಯ ಸಕ್ಕರೆಯ ಪಾಕ ತೋರಿಕೆಗೆ ಮಾತ್ರ ಜಂಭದ ವಿವೇಕ ಸೋಗು ನುಡಿಗಾರನಲ್ಲ ಮರಳು ಮಾತುಗಾರನಲ್ಲ ನಿಷ್ಠುರತೆಯ ಕಟು ವ್ಯಕ್ತಿ ನೇಮಗಾರ ಹುಟ್ಟುಗುಣಗಳು ಕೆಲ...

ಬರುವುದಿಲ್ಲವಿನ್ನೆಂದರೆ ಬರುತಿದ್ದರು ದೂರ ದೇಶದ ವ್ಯಾಪಾರಿಗಳು ವಿಧ ವಿಧ ಸರಕನು ತುಂಬಿದ ಹೇರು ಎಳೆಯಲು ಅರಬೀ ಕುದುರೆಗಳು ಊರಿನ ಮುಂದೆಯೆ ಡೇರೆಯ ಹಾಕಿ ಹೂಡುವರಿವರು ಬಿಡಾರ ಗಲ್ಲಿ ಗಲ್ಲಿಗೂ ಬರುವರು ಹುಡುಕಿ ಮಾತೇ ಮಾಯಾ ಬಜಾರ ಉಂಗುರ ಮಣಿಸರ ಕಾಡ...

ಪ್ರೀತಿಯ ಗೆಳೆಯಾ, ಈ ಸಂಜೆ ಒಂದೆರಡು ಹನಿ ಮಳೆಬಿತ್ತು. ಅದು ಪೂರ್ತಿಯಾಗಿ ಮನಸ್ಸನ್ನು ತೋಯಿಸಲಿಲ್ಲ. ಹೊತ್ತು ಕಂತುವ ಮಬ್ಬು ಮನಸ್ಸಿಗೂ ಗೌಂವ್ ಎನ್ನುವ ಏಕಾಂಗಿತನವನ್ನು ಎದೆಯೊಳಗೆ ಸುರಿದು ಬಿಡುತ್ತದೆ. ಗೋಡೆಗಳು ಮಾತನಾಡುವದಿಲ್ಲ. ತಬ್ಬಿ ಬೋರೆಂದ...

ಸಂಗೀತ : ಪ್ರತಿಮೆಗಳ ಉಸಿರಾಟ; ಚಿತ್ರಗಳ ನಿಶ್ಚಲತೆ ; ಎಲ್ಲ ಮಾತಿನ ಕೊನೆ ; ಕರಗುವ ಮನಸ್ಸಿನಲ್ಲಿ ಲಂಬವಾಗಿ ನಿಂತ ಕಾಲಸ್ತಂಭ. ಭಾವ? ಕ್ಷಣ ಕ್ಷಣ ರೂಪಾಂತರದ ಶ್ರಾವಣದೇಶ. ಸಂಗೀತ : ಅಪರಿಚಿತ. ನಮ್ಮನ್ನೂ ಮೀರಿ ವಿಸ್ತಾರವಾಗುವ ಎದೆ ಬಯಲು. ಒಳಗೆ ಒಳ...

ಓ ಮುಗಿಲ ದೇವತೆಯೆ ಓ ಕಡಲ ರೂಪಸಿಯೆ ಓ ಹೇಳಿ ಕಿಟ್ಟಣ್ಣನೆಂದು ಬರುವ ಹೂವಿಗಿಂತಲು ಹೂವು ಮುದ್ದಿಗಿಂತಲು ಮುದ್ದು ಕೆನೆಹಾಲ ಸವಿಗಲ್ಲ ಎಂದು ತರುವ ಓ ಗಗನ ಮಲ್ಲಿಗೆಯೆ ಓ ಸಿಡಿಲ ಸಂಪಿಗೆಯೆ ಆ ನಗೆಯ ಕಂದಯ್ಯನೆಂದು ಬರುವ ಚನ್ನಯ್ಯ ಚಲುವಯ್ಯ ಚಿನ್ನಯ್ಯ ...

ಕರೆದರೂ ತಿರುಗದೆ ಜಿಗಿದು ಓಡಿದಳಲ್ಲ, ಯಾರಿವಳು ಎರಳೆಮರಿ ಎಂದಿರೆ? ಇವಳೆ ಊರ್ಮಿಳೆ, ತುಂಬುಜಂಬುನೇರಳೆ ನಮ್ಮ ಮಲೆನಾಡ ಸಿಹಿಪೇರಲೆ. ನನಗು ಇವಳಿಗು ಸ್ನೇಹ ತೀರ ಈಚೆಗೆ ಎನ್ನಿ ನನ್ನ ಕಂಡರೆ ನಾಚಿಕೆ, ಪ್ರೀತಿಯಲಿ ಬಾ ಎಂದು ರಮಿಸಿದರೆ ನಿಲ್ಲುವಳು ನಾ...

ಮರೆಯಲಾರೆ ಎನ್ನರಸ ಮರೆಯದಿರು ಎನ್ನ ಮರೆತಂತೆ ಭಾವನೆಗಳನು|| ಕನಸಿನ ಹಗಲಿರುಳಲ್ಲಿ ಸುಂದರ ನೆನಪುಗಳ ತೀಡಿ ಸೆರೆಯಾದ ಭಾವ ಜೀವವ ಕದಡಿ ಕಾಡುವೆ ಏಕೆ ಹಗಲಿರುಳು|| ಮುಂಜಾನೆಯಂಗಳದೆ ಬಾನಂಚಿನ ಬಣ್ಣ ಧರೆಗೆ ಮುಖ ಚೆಲ್ಲಿದಾಗ ಮನವ ಕದಡಿ ಕಾಡುವೆ ಏಕೆ ಹಗ...

123456...9

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....