ಸಂಗೀತ : ಪ್ರತಿಮೆಗಳ ಉಸಿರಾಟ;
ಚಿತ್ರಗಳ ನಿಶ್ಚಲತೆ ;
ಎಲ್ಲ ಮಾತಿನ ಕೊನೆ ;
ಕರಗುವ ಮನಸ್ಸಿನಲ್ಲಿ ಲಂಬವಾಗಿ ನಿಂತ
ಕಾಲಸ್ತಂಭ.
ಭಾವ? ಕ್ಷಣ ಕ್ಷಣ ರೂಪಾಂತರದ ಶ್ರಾವಣದೇಶ.

ಸಂಗೀತ : ಅಪರಿಚಿತ.
ನಮ್ಮನ್ನೂ ಮೀರಿ ವಿಸ್ತಾರವಾಗುವ ಎದೆ ಬಯಲು.
ಒಳಗೆ ಒಳಗೆ ಒಳಗೆ
ನಮ್ಮೊಳಗೆ ಇರುವ ಶುದ್ಧನಾವು
ಪರಿಚಿತ ನಮ್ಮಿಂದ ಬೇರೆಯಾಗಿಬಿಡುವ ಪವಿತ್ರ ವಿರಹ.
ಒಳಗಿದ್ದದ್ದಲ್ಲ ಹೊರಗೆ ಮೂಡಿ
ಪರಿಚಿತ ದಿಗಂತದಾಚೆ ಇರುವ
ಯಾರೂ ಉಸಿರಾಡದ ಗಾಳಿಯ ಲೋಕ.
*****
ಮೂಲ: ರೇನರ್ ಮಾರಿಯಾ ರಿಲ್ಕ್

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)