ಬೆಕ್ಕಿಗೊಂದು ಕವಿತೆ ನಾಯಿಗೆರಡು ಕವಿತೆ ಓಡುವ ಮೊಲಕ್ಕೆ ಮೂರು ಕವಿತೆ ಎತ್ತಿನ ಬಂಡಿಗೆ ನಾಲಕ್ಕು ಕವಿತೆ ಆನೆಯ ಸೊಂಡಿಲಿಗೆ ಐದು ಕವಿತೆ ಕುರಿಗಳ ಹಿಂಡಿಗೆ ಆರು ಕವಿತೆ ಕುದುರೆ ಜೀನಿಗೆ ಏಳು ಕವಿತೆ ಒಂಟೆಯ ಬೆನ್ನಿಗೆ ಎಂಟು ಕವಿತೆ ಅಟ್ಟದ ಏಣಿಗೆ ಒಂ...

ಎತ್ತಿನ ಕತ್ತಿನ ಗೆಜ್ಜೆಯ ಸರವು ಮೊರೆಯಿತು ಘಲ್ ಘಲ್ ಘಲ್ಲೆಂದು ಹಳ್ಳಿಯ ಸರಳದ ಜೀವನ ನೆನೆದು ಕುಣಿಯಿತು ಎನ್ನೆದೆ ಥೈ ಎಂದು ಸೂರ್ಯನ ಅಸ್ತಮ ಸಮಯದ ಚೆಲುವು ಪಚ್ಚೆಯ ಪಯಿರಿನ ನೋಟದ ಸುಖವು ಹಕ್ಕಿಗಳೋಟದ ಗುಂಪಿನ ಸೊಗವು ವಿಶ್ವವ ತುಂಬಿದ ಆಗಸವು ಏರಿಯ...

ರಕ್ಷಣೆ ಇರಲೆಂದು, ಕಾಲಿಗೆ ಮೆಟ್ಟು ಧರಿಸಿಹೆನು ದೇವಾಽ ಹೃದಯ ಚುಚ್ಚುವ, ಮಾತಿಗೆ ಏತರ ಮೆಟ್ಟು ಧರಿಸಲಿ ದೇವಾಽ…? ಬಂಧುಗಳ ಕೊಟ್ಟೆ, ನೋವನೂ ಇಟ್ಟೆ ದೇವಾಽ… ಸಂಬಂಧಿಕರಿಂದ ಕೆಟ್ಟೆ, ಕೈಗೆ ಖಾಲಿ ಚಿಪ್ಪನಿಟ್ಟೆ ದೇವಾಽ… ಮಾತಿಗೂ...

ಎಲ್ಲರಿಗೂ ಯಾವಾಗಲೂ ಹಗಲಿರಬೇಕೆಂದೇ… ಭೂಮಿ ಕ್ಷಣವೂ ನಿಲ್ಲದೆ ಅಹರ್ನಿಶಿ ಸುತ್ತುತ್ತಲೇ ಇರತ್ತದೆ. ಆದರೆ ದುರಾದೃಷ್ಟ ಮಾಡುವುದೇನು, ಎಷ್ಟು ಸುತ್ತಿದ್ದರೂ ಒಂದು ಕಡೆ ಹಗಲಾಗುವುಷ್ಟರಲ್ಲೇ ಮತ್ತೊಂದು ಕಡೆ ಕತ್ತಲಾಗಿ ಬಿಡುತ್ತದೆ. *****...

ಈ ನೆಲ, ಕಲ್ಲು-ಮಣ್ಣು, ಈ ವಾಸ್ತವತೆ ವ್ಯವಹಾರ ಈ ಲಿಂಗ ಬೇರು, ಈ ಅಳ, ಈ ಎಲುಬು, ಈ ಗರ್ಭಗುಡಿ ಈ ಸಾವು ಗೋಳು, ಈ ಮಾಂಸದ ಹಸಿವು ಕರುಳಿನ ನಾಚಿಕೆಗೇಡಿತನ ಈ ಕಾಲದ ಕರಾಳ ಹಸ್ತ, ಈ ಇರುಳ ಕಾಳ ಕುಂತಳ ಲೋಕಗೆದ್ದ ಹಣ, ಹೆದರಿಸುವ ಹೆಣ ಈ ಹಗರಣ ಹಗಲು, ಒ...

ಮದುವೆ ಆದ, ಹೊಸತರಲ್ಲಿ ಮಾವನ ಮನೆ ಬಲು ತಂಪಗೆ; ನನ್ನ ಮನದನ್ನೆ, ಅಲ್ಲಿ ಕೆಂಡ ಸಂಪಿಗೆ; ಹಳತಾದಂತೆ ತಂಪು ಆರಿ ಕಡು ಬೇಸಗೆ ಎದೆಯಲ್ಲಿ ಆಗ ಧಗಧಗಿಸುವ ಕೆಂಡ ದುಪ್ಪರಿಗೆ! *****...

ಪಂಜಾಬೀ ಜನರ ಒಂದು ಹಾಡು:- ನಿತ್ಯವು ಕೂಗದು ಕೋಗಿಲೆ ವನದಿ ನಿತ್ಯವು ಫಲಿಸದು ವನ ತಾ ಮುದದಿ ನಿತ್ಯವು ಮುದಗೊಡನರಸನು ಜವದಿ ನಿತ್ಯವು ಓಲಗ ನಡೆದುದು ಭರದಿ|| ಈ ಹಾಡಿನ ಭಾವವೇನಂದರೆ-ನಾವು ಯಾವಾಗಲೂ ಸಂತುಷ್ಟರಾಗಿರುವ ಆಶೆಯನ್ನು ಮಾಡಲಾರೆವು. ಹಾಗೂ ...

ಹುಟ್ಟು, ಸಾವು ಮನೆ ಬೀದಿಯ ಬಾನುಲಿ ವಾರ್ತೆಗಳು ಬಾಳು – ನಾಟಕ, ಗೀತ, ಸಂಗೀತ ಸುಖದುಃಖ ವರ್ಣನಾತೀತ ಬೆಳವಣಿಗೆ, ಆಟ, ಪಾಠ, ಮನರಂಜನೆ ಮೆರವಣಿಗೆ ಪೂರ್ಣತೆ ಪರಿಧಿ ದೈವಾಧೀನ ಮಾನವಪರಾಧೀನ! *****...

ಬಂದನೂ ಬಂದನೂ ಚಂದ ಮಾಮಣ್ಣ ತಂದನೂ ಜಗಕೆಲ್ಲ ಹಾಲಿನಾ ಬಣ್ಣ ಕುಳಿತಳು ನಮ್ಮಜ್ಜಿ ಅಂಗಳಕೆ ಬಂದು ಹಾಕಿದೆನು ನಾನಿಂತು ಕುಣಿವ ಕೂಗೊಂದು ಪಾರ್ವತೀ ಜಯಲಕ್ಷ್ಮೀ ಕೋಮಲೇ ಸೀತೆ ಸಾವಿತ್ರಿ ಕಾವೇರಿ ರುಕ್ಮಿಣೀ ಲಲಿತೆ ನಿರ್ಮಲಾ ಕುಂತಳಾ ಕುಮುದಿನೀ ರಾಧೆ ಭಾ...

ಅಮ್ಮ ಬೆಳಗೆದ್ದು ರೊಟ್ಟಿ ಸುಡುವದೆಂದರೆ ನಮಗೆ ಪಂಚಪ್ರಾಣ ಕತ್ತಲು ತುಂಬಿದ ಗುಡಿಸಲಿಗೆ ಒಲೆಯ ಬೆಂಕಿಯೇ ಬೆಳಕು ಸುಟ್ಟು ಸುಟ್ಟು ಕರ್‍ರಗಾದ ಬಿಳಿ ಮೂರು ಕಲ್ಲು ಮೇಲೊಂದು ಕರ್‍ರಾನೆ ಕರಿ ಹೆಂಚು ಒಲೆಯೊಳಗೆ ಹಸಿ ಜಾಲಿ ಮುಳ್ಳು ಕಟ್ಟಿಗೆ ಒಟ್ಟಿ ಹೊಗೆ...

1234...7

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....