ಮೂಗೂರಿಂದ ಮೂಗಪ್ಪ ಬಂದರೆ ಮೂಗಿನ ವಿಷ್ಯ ತೆಗೀಲೆ ಬೇಡಿ ಸಿಟ್ಮಾಡ್ಕೊಂಡು ಮೂಗನು ಕೊಯ್ದು ಎಂದೋ ಬಿಸಾಕಿ ಬಿಟ್ಟಿದ್ದಾರೆ ಹಾಗಾದ್ರೆ ಪಾಯಸ ತಿನ್ನೋದು ಹೇಗೆ ಘಮ ಘಮಿಸೋದು ಮೂಗಿಗೆ ತಾನೆ? ನೋಡಿದ ಮಾತ್ರಕೆ ಅವರಿಗೆ ಗೊತ್ತಾಗತೆ ಯಾವುದು ಘಮಘಮ ಯಾವುದು ...

ಕಲ್ಲು ತಂದು ರೂಪುಮಾಡಿ ದೇವನೆಂದು ಕರೆದು ನಿನ್ನ ಎಲ್ಲ ಜಗದ ಒಡೆಯನಾಗಿ ಕಾವುದೆಂದೆನು. ಮೆಯ್ಯ ತೊಳೆದು ಹಾಲನೆರೆದು ಹೂವು ಮುಡಿಸಿ ಗಂಧವಿಕ್ಕಿ ತುಯ್ಯಲಿಟ್ಟು ದೀಪವಿಟ್ಟು “ದೇವ” ಎಂದೆನು. ನಾನು ಮಾಡೆ ನೀನು ಆದೆ ನಾನು ಕಟ್ಟೆ ನಿನಗೆ...

ಕವಿತೆಯಂದರೇನು? ಕಣ್ಣು, ಕಿವಿ, ಮೂಗು, ಅಗಲವಾದ ಬಾಯಿ! ಮುವತ್ತೆರಡು ಹಲ್ಲು, ಬರೀ ನಾಲಗೆಯಲ್ಲ! ಸುಗಂಧ, ಪರಿಮಳ ದ್ರವ್ಯ! ಮುತ್ತು, ರತ್ನ, ವಜ್ರ, ವೈಢೂರ್‍ಯದಂತೆ! ಕಾಮನ ಬಿಲ್ಲಿನ ಸೊಬಗಿನಂತೆ! ೨ ಕವಿತೆಯೆಂದರೇನು? ಕೈ, ಕಾಲು ಸಣ್ಣ, ಹೊಟ್ಟೆ ಡುಬ...

ಈ ಚಂದ್ರ ಎಂಥಾ ಬೆಪ್ಪು ಹುಣ್ಣಿಮೇ ದಿನಾ ಅವನ ಚಂದ ನೋಡಿದ ಸಮುದ್ರ ಕನ್ಯೆ ಹುಚ್ಚಿ ಥರಾ, ಬಟ್ಟೆ ಬಿಚ್ಚಿ ಬೆವರು ಸುರಿಸಿ ಕ್ಯಾಬ್ರೆ ಕುಣಿದಿದ್ದ ನೋಡಿ ಅವಳನ್ನು ಮೈತುಂಬಾ ಮುದ್ದಿಸಿದವನಿಗೆ ಸಿಕ್ಕಿದ್ದು ಬಾಯ್ತುಂಬಾ ಬರೀ ಉಪ್ಪು. *****...

ಈ ಬಾಗಿಲೀಚೆಗೊಂದು ದೃಶ್ಯ ಆಚೆಗೊಂದ ದೃಶ್ಯ ಈಚೆಗೆ ಗಿಡಕಂಟಿ, ಹೀಚುಹೂವು, ಮುಳ್ಳು ಕಾಯಿ ಹಣ್ಣು-ಹುಣ್ಣು ಹುಳು ಆಚೆಗೆ ತಗ್ಗು ಕರೀ ಕಂದಕ ಹಾಳು ಬಾವಿ ಹಲವು ಕತ್ತರಿಗಳಿಗೆ ಸಿಕ್ಕಿ ನರಗಳೂಳಿಡುವ ಕೂಗು ಕತ್ತಲು, ಕೊರಗು ಕತ್ತಲು ಈ ಮೂಲಕ ಹಾಯ್ದು ಬಂದ...

“ಗ್ರೀನ್‌ಹೌಸ್” ಎಂದರೆ “ಹಸಿರುಮನೆ” ಎಂದರ್ಥ.  ಒಂದು ದೊಡ್ಡ ಮನೆಯಾಕಾರದ ಕಟ್ಟಡ ಗಾಜು ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸುತ್ತಾರೆ.  ಈ ಮನೆಯಲ್ಲಿ ಗಾಳಿ, ಉಷ್ಣತೆ, ಇಂಗಾಲದ ಡೈಆಕ್ಸೈಡ್, ತಂಪು ಮುಂತಾದವುಗಳನ್ನು ಅಗತ್...

ತಿದ್ದಿ ಬರೆವುದು ಹಲಗೆಯಲಿ ಬರವಣಿಗೆ, ಬರಿಯುತ್ತದೆ ಕೈ ಎಳೆದು ಅಳುವ ಮಗುವು ಗೀಚಿ ಬರುವುದು ಎಲ್ಲೆಡೆ ಅದು ಕಲೆ, ಅದು ಸಂತಸ ಅದು ಸ್ವಾತಂತ್ರ್‍ಯ ಬರೆಯಬಲ್ಲದು ನಗುವ ಮಗುವು *****...

ಎಷ್ಟೊಂದು ಹೂವುಗಳು ಈ ಪೇಟೆಯಲಿ ಆದರೂ ನನಗೆ ಬೇಕಾದ ಹೂವು ಇಲ್ಲಿಲ್ಲ ಹೂಗಾರ ಹೂವಾಡಗಿತ್ತಿಯರ ಹೊಗಳಿಕೆಯಲಿ ನಾನು ಮರುಳಾಗಿ ಕೊಳ್ಳುವವನೇ ಅಲ್ಲ ಮನೆಯಂಗಳದ ಹೂವು, ಹೂದೋಟದ ಹೂವು ಬೆಟ್ಟದ ಹೂವು, ಕೊಳ್ಳದ ಹೂವು, ಏರ್ ಕಂಡೀಶನ್ ಹೂವು, ಬಣ್ಣವಾಸನೆಗಳ ...

ತನು ಕರಗಿತ್ತು. ಮನ ನಿಂದಿತ್ತು. ಉಲುಹು ಅಡಗಿತ್ತು. ನೆಲೆಗೆ ನಿಂದಿತ್ತು. ಮನ ಪವನ ಬಿಂದು ಒಡಗೂಡಿತ್ತು. ಉರಿ ಎದ್ದಿತ್ತು. ಊರ್ಧ್ವ ಕ್ಕೋಡಿತ್ತು. ಶರಧಿ ಬತ್ತಿತ್ತು. ನೊರೆ ತೆರೆ ಅಡಗಿತ್ತು. ಅಷ್ಟ ಮದವೆಲ್ಲ ಹಿಟ್ಟುಗುಟ್ಟಿತ್ತು. ಕರಣಂಗಳೆಲ್ಲ ಉ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....