ಮೂಗೂರಿಂದ ಮೂಗಪ್ಪ ಬಂದರೆ
ಮೂಗಿನ ವಿಷ್ಯ ತೆಗೀಲೆ ಬೇಡಿ

ಸಿಟ್ಮಾಡ್ಕೊಂಡು ಮೂಗನು ಕೊಯ್ದು
ಎಂದೋ ಬಿಸಾಕಿ ಬಿಟ್ಟಿದ್ದಾರೆ

ಹಾಗಾದ್ರೆ ಪಾಯಸ ತಿನ್ನೋದು ಹೇಗೆ
ಘಮ ಘಮಿಸೋದು ಮೂಗಿಗೆ ತಾನೆ?

ನೋಡಿದ ಮಾತ್ರಕೆ ಅವರಿಗೆ ಗೊತ್ತಾಗತೆ
ಯಾವುದು ಘಮಘಮ ಯಾವುದು ಬರಿಗಮ

ಉಂಡೂ ಉಂಡೂ ಸುಸ್ತಾಗಿ ಹೋಗ್ತಾರೆ
ಚಾಪೆ ಹಾಕ್ಕೊಂಡು ಮಲಗಿ ಬಿಡುತ್ತಾರೆ

ಸೀನು ಬಂದರೆ ಏನು ಮಾಡುತ್ತಾರೆ?
ಸೀನುವುದಕ್ಕೆ ಮೂಗು ಬೇಕು ತಾನೆ?

ಅದಕ್ಕೊಂದು ವೃವಸ್ಥೇನ ಮಾಡ್ಕೊಂಡಾರೆ
ಜೂನಲಿ ತಾನೇ ಸೀನು ಬರೋದು?

ಜೂನಿನ ಕ್ಯಾಲೆಂಡರು ಕಿತ್ತಾಕುತಾರೆ
ಮತ್ತೆಲ್ಲಿ ಸೀನು?

ಬರಿ ನಾಟಕ ಸೀನು!
*****