ಅಮ್ಮ ತಬ್ಕೊಂಡ್ ಕೊಡೋ ಮುತ್ತು ಜಾಮೂನಪ್ಪ ಜಾಮೂನು, ಮಿಸ್ಸು ಹೇಳೋ ಕಥೆಗಳ ಮುಂದೆ ತುಂಬಾ ಸಪ್ಪೆ ಬೆಲ್ಲಾನೂ! ಬುದ್ಧಿ ಮಾತನ್ ಒದ್ದು ಹೇಳೋದ್ ಅಪ್ಪ ಅಲ್ದೆ ಯಾರು? ಆಗಿದ್ಹಂಗಿರುತ್ತೆ ಒಂದೊಂದ್ ಮಾತೂ ಹಾಗಲಕಾಯಿ ಚೂರು! ಮಕ್ಳು ಅಂದ್ರೆ ಅಜ್ಜೀಗ್ ಮುದ...

ಬೀಚಿಯವರು ಹೇಳಿದ ಜೋಕು: “ದೇಶಭಕ್ತನಿಗೆ ನಿಮ್ಮ ‘ಕೈಕೊಡಬೇಡಿ ಏಕೆಂದರೆ ನಿಮ್ಮ ಕೈಯಲ್ಲಿರುವ ಉಂಗುರ ಕಸಿದು ಬಿಡುತ್ತಾನೆಂದು ಖಂಡಿತಾ ಅಲ್ಲ, ಬೆರಳನ್ನೇ ಕಸಿದು ಬಿಟ್ಟಾನು ಎಂದು.!” ***...

ಕಂಡು ಕೇಳಿಹೆನೆಂಬ ದುಂದುಗ ಬಿಟ್ಟು, ನೋಡಿ ನುಡಿವೆನೆಂಬ ನೋಟವ ನಿಲಿಸಿ, ಮಾಡಿ ಕೂಡಿಹೆನೆಂಬ ಮನ ನಿಂದು, ತನುವ ಮರೆದು, ತಾ ನಿಜ ಸುಖಿಯಾದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ಹಲ್ಲು ಹಲ್ಲು ಮಸೆದವು, ಕರುಳು ಕರುಳ ಕಡಿದವು ಹೊಟ್ಟೆ ತನ್ನನ್ನೇ ಸುತ್ತಿ ತಿನ್ನಲನುವಾಯ್ತು ಹಸಿವು ತೀರದೆ ಇನ್ನೂ ಹೆಚ್ಚಾಯಿತು ಒಂದು ಚಣದ ಬೇಡಿಕೆಯಲ್ಲ ಇದು ಜೀವಮಾನದ ಬೇಡಿಕೆ ಜನ್ಮಾಂತರಗಳ ಕುಣಿಗಳನ್ನು ನಾವೇ ತೊಡುವ ತೋಡಿಕೆಯಾಗಿ ಜೀವ ಜೀವಗಳ ಹರ...

ಪ್ರಿಯ ಸಖಿ, ಗುರುಗಳ ಬಳಿ ಶಿಷ್ಯನೊಬ್ಬ ಬಂದು ತನ್ನ ನೋವನ್ನು ತೋಡಿಕೊಳ್ಳುತ್ತಾ ತನ್ನ ಹೊಸ ಕೆಲಸವನ್ನು ನೋಡಿ ಜನರೆಲ್ಲರೂ ಆಡಿಕೊಂಡು ನಗ್ತಾ ಇದ್ದಾರೆ. ಇದರಿಂದ ತನಗೆ ತುಂಬಾ ಬೇಸರವಾಗಿದೆ. ಹಾಗಾಗಿ ಇನ್ನು ಮುಂದೆ ಈ ಕೆಲಸ ಮುಂದುವರೆಸುವುದಿಲ್ಲ ಎಂ...

ಆಲದ ಮರ ನಾನು ಬನ್ನಿ ಹಕ್ಕಿ ಪಕ್ಕಿಗಳೀ ಹುಳ ಹುಪ್ಪಡಿಗಳೇ ಹಾದಿಹೋಕರೆ ಇದು ನಿಮ್ಮೆದೇ Royal Palace ಯಾವ ಅಭ್ಯಂತರವಿಲ್ಲದೆ ವಿಶ್ರಮಿಸಿ ಉಪಹರಿಸಿ. Excuse Brokers *****...

ಬಿಳಿಬೆಕ್ಕು ಹಿಂಜಿದ ಹತ್ತಿಯಂತಿದೆ, ಚಳಿಗಾಲದ ಮಂಜಿನಂತಿದೆ, ಜಲಪಾತದ ನೊರೆಯಂತಿದೆ.  ಹಗಲಿನಂತಿದೆ. ಕರಿಬೆಕ್ಕು ಕುರುಬರ ಕಂಬಳಿಯಂತಿದೆ, ಮಳೆಗಾಲದ ಮೋಡದಂತಿದೆ, ಇದ್ದಿಲ ಗಟ್ಟಿಯಂತಿದೆ.  ರಾತ್ರಿಯಂತಿದೆ. ಬಿಳಿಬೆಕ್ಕಿನ ಕಣ್ಣುಗಳು ಹಗಲಿನ ನಕ್ಷತ್...

ದೇವರು ಮಾಡಿರುವ ಮನುಷ್ಯರೇ! ಮನುಷ್ಯರು ಮಾಡಿರುವ ದೇವರೇ! ನಿಮ್ಮ ಹೆಸರೇನು? ಪುರಾಣಗಳ ಬಗ್ಗೆ ಶಂಕೆಗಳು ಮೂಡಿ ಕೇಳಿದಾಗ ನಮ್ಮ ಗುರುಗಳು “ಕೆಲಸಕ್ಕೆ ಬಾರದ ಓದು! ನಿಮ್ಮ ಬುದ್ಧಿಗಳೆಲ್ಲಾ ಹಾಳಾಗಿ ಹೋಗುತ್ತಿವೆ. ನೀವೆಲ್ಲಾ ಬರೀ ಬೌದ್ಧರು.&#8...

1...2627282930...53

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...