ಎಲ್ಲಿ ಹೋದನೇ ಮರೆದು-ಹರಿ ಎಲ್ಲಿ ಹೋದನೇ ತೊರೆದು? ಎಲ್ಲಿ ಹೋದನೇ ನಲ್ಲೆ ನೀಡಿದಾ ಹಾಲನು ಮಣ್ಣಿಗೆ ಸುರಿದು? ಅಲೆದು ಬಂದೆನೇ ವನವ-ನಾ ತೊರೆದು ಬಂದೆನೇ ಜನವ; ಒಲಿದು ನೀಡಿದ ಹರಿಗೆ ನನ್ನನೇ ಸುಲಿದು ಸವಿದನೇ ಫಲವ ಮಾಸಿತೇ ಮನ ಗೆಳತಿ ದಾಸನಾದ ಹರಿ ಎನ...

ಮನವೆಂದರೆ ಮರವೆಗೆ ಒಳಗು ಮಾಡಿತ್ತು. ತನುವೆಂದರೆ ತಾಮಸಕ್ಕೊಳಗು ಮಾಡಿತ್ತು. ಧನವೆಂದರೆ ಆಸೆ ಎಂಬ ಪಾಶಕ್ಕೊಳಗು ಮಾಡಿತ್ತು. ಇವು ಮಾಯಾ ಪಾಶವೆಂದು ಬಿಟ್ಟು ಹುಟ್ಟನರಿದು, ಬಟ್ಟಬಯಲಲ್ಲಿ ನಿಂದು, ಚಿತ್ತ ನಿರ್ಮಳವಾಗಿ ನೋಡಿ ಕಂಡ ಶರಣಗೆ ತನುವೆ ಲಿಂಗವ...

ಎಲ್ಲಾ ಅಂಗಡಿ ಹರವಿಕೊಂಡಿದ್ದೇವೆ ಈ ಬಡಿವಾರ ಬಟ್ಟೆ, ಮೋಜಿನ ಕಟ್ಟೆ ಬೆಚ್ಚನ ಮನೆ-ವೆಚ್ಚದ ಬೇನೆ ಈ ಬೆಚ್ಚಿ ಬೀಳುವ ಧಿಮಾಕು ನಾಜೋಕು-ಷೋಕು ಹುಚ್ಚು ನಾಯಿಯ ಹಾಗೆ ತಿರುಗಾಟ ಕಾಮಾಲೆ ರೋಗದಂಥ ನೋಟ ನಾಲಿಗೆ ಪಾಚಿಗಟ್ಟಿ, ಹೊಟ್ಟೆ ಜಿದ್ದುಗಟ್ಟುವವರೆಗೆ ...

ಆಸ್ಪತ್ರೆ ಎಂದೊಡನೆ ಡಾಕ್ಟರ್’ಗಳು ಒ.ಟಿ. ವಾರ್ಡ್, ರೋಗಿಗಳ ದುರ್ನಾತ, ಪಿನಾಯಿಲ್ ವಾಸನೆ, ಸಾವು ನೋವು ಇವುಗಳ ನಡುವೆಯೇ ಶ್ವೇತವಸ್ತ್ರಧಾರಿಣಿಯಾಗಿ ನಳಿನಳಿಸುತಾ ಮುಗುಳ್ನಗೆ ಚೆಲುತ್ತಾ ವಾರ್ಡ್‍ನಿಂದ ವಾರ್ಡ್ಗೆ ಸ್ಲಿಪರ್ ಶಬ್ದಮಾಡುತ್ತಾ ಕೈನಲ್ಲಿ...

ಹೋಯಿತೆಲ್ಲಿ ನಿಸರ್ಗದ ದಟ್ಟ ಹಸಿರು ಹೋದರೆಲ್ಲಿ ಪ್ರೀತಿಯೊಡಲಿನ ಅಜ್ಜ ಅಜ್ಜಿ ಹೋದವೆಲ್ಲಿ ಸಂಭ್ರಮದ ಹಬ್ಬ ಹರಿದಿನಗಳು ಹೋದವೆಲ್ಲಿ ಡೊಳ್ಳಾರಗಿ ಕೌದಿ ಹೊರಸು ಸಂಬಂಧಗಳು ವಿಶ್ವಾಸಗಳು… ಬಿಕ್ಕದರೇನೀಗ, – ನಸುಕಿನ ಕೋಳಿಕೂಗಿಗೆ ನಡುರಾತ...

ತಾವರೆಯಿಲ್ಲ ತಾವರೆಯ ಎಲೆಯಿಲ್ಲ ಬೀಳುವ ಹೂವಿಲ್ಲ ಹೂಬಿಡುವ ಮರವಿಲ್ಲ ದಾಟಿಸುವ ಅಂಬಿಗನಿಲ್ಲ ಕಾದು ನಿಂತ ದೊಣಿಯಿಲ್ಲ ಆಕಾಶದಲ್ಲಿ ಚಂದ್ರನಿಲ್ಲ ನಕ್ಷತ್ರಗಳಿಲ್ಲ ಬೀಸುವ ಗಾಳಿಯಲ್ಲಿ ಹಾಡುವ ಹಕ್ಕಿಗಳಿಲ್ಲ ಪಾದ ತೊಳೆವ ಅಲೆಗಳಲ್ಲಿ ಮುತ್ತಿಡುವ ಮೀನುಗ...

ರಾಕೇಶ್ ಆಸ್ಪತ್ರೆಗೆ ಅಂದು ರಜೆ ಹಾಕಿ ಸೂಟುಧಾರಿಯಾಗಿ ಸುಶ್ಮಿತಳ ಮದುವೆಗೆ ಹೊರಟು ನಿಂತನು. ಏನು ಕೊಳ್ಳಬೇಕೆಂದು ತಿಳಿಯದೆ ಬರಿಗೈಲಿ ಮದುವೆ ಮನೆಗೆ ಬಂದನು. ಅಪರಿಚಿತರ ನಡುವೆ ತಬ್ಬಿಬ್ಬಾಗಿ ನಿಂತುಬಿಟ್ಟ. ಸುಶ್ಮಿತಳೇನೋ ಹಸೆಮಣೆಯ ಮೇಲಿದ್ದಾಳೆ. ಆ...

1234...53

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...