ಪ್ರಿಯ ಸಖಿ, ದೊಡ್ಡವರು ಸಣ್ಣವರಾಗುವುದು ಯಾವಾಗ? ಎನ್ನುವುದನ್ನು ಕವಿ ಸುಮತೀಂದ್ರ ನಾಡಿಗರು ತಮ್ಮ ದೊಡ್ಡವರು ಕವನದಲ್ಲಿ ಹೀಗೆ ವಿವರಿಸುತ್ತಾರೆ. ದೊಡ್ಡವರು ಸಣ್ಣವರಾಗುವುದು ತಾವೆಲ್ಲ ಮಾಡಿದ್ದೇವೆ, ತಾವೆಲ್ಲ ಮಾಡಿದ್ದೇವೆ ತಮೆಗೆಲ್ಲ ಗೊತ್ತಿದೆ ಎ...

ಟಾಮೀ ಟಾಮೀ ನಮ್ಮನೆ ನಾಯಿ ಚುರುಕು ಅಂದರೆ ಚುರುಕು, ಆದರೆ ಸದಾ ಬೊಗಳುತ್ತಿರುವುದು ಅದರ ಬಾಯೇ ಹರಕು! ತಿಂಡಿ ಎಂದರೆ ಕಿವಿಯನು ಎತ್ತಿ ಬಾಲ ಕುಣಿಸುವುದು, ವಾಸನೆ ಬಂದರೆ ಅಡಿಗೇ ಮನೆಗೇ ಸೀದಾ ನುಗ್ಗುವುದು! ಅಜ್ಜಿ ಮಡಿಯಲಿ ಬಂದರೊ ಟಾಮಿ ಓಡಿ ಮುಟ್ಟು...

ತಿಮ್ಮ ಬೋರ ನಂಜ ಕೂಡಿ ರಾಗಿ ಹಿಟ್ಟು ಕಲಸುವಾಗ ಬಾಯ್ಗೆ ಬಾಯಿ ಮಾತು ಎದ್ದು ಅವರನ್ನವರು ಮರೆತು ಕುಡಿದು ನಂಜ ಕುಪ್ಪಿ ಎತ್ತಿದ- ಬೋರ ಪಾಲು ಕೇಳಿದ! ಹಿಂದಿನಿರುಳು ಬೇಟೆಯಲ್ಲಿ ಕೊಚ್ಚೆ ಹಾರ್ದ ಮೊಲದ ಕಾಲ ಹಿಡಿದು ತಿಮ್ಮ ಅಂತೆ ತಂದು ಮಾಂಸ ತುಂಡು ಮಾ...

ಅಯ್ಯ ನಾನು ಬಂದ ಭವಾಂತರದಲ್ಲಿ ನೀವು ಕಡೆ ಹಾಯಿಸಿದಿರೆಂಬುದನರಿಯೆ. ಕಂಗಳಿಗೆ ಕನ್ನಡಿಯ ತೋರಿದರು. ನಿಮ್ಮ ಕಾಣದೆ ಇದ್ದೆನಯ್ಯ. ಅದು ಕಾರಣದಿಂದ ಮನಕೆ ಪ್ರಾಣವಾಗಿ ಬಂದು ನಿಂದಿರಿ. ತನುವಿಂಗೆ ರೂಪಾಗಿ ಬಂದು ಸುಳಿದಿರಿ. ನಿಮ್ಮ ಸುಳುಹ ಕಾಣಲೊಡನೆ ಎನ...

ನಾ ಅಭಿಮಾನಿ ನಾ ಭಾಽಳ ಸ್ವಾಭಿಮಾನಿ ಯಾರಿಗೂ ಸೊಪ್ಪ ಹಾಕೋ ಮಗ ನಾ ಅಲ್ಲ, ಅಂತಿದ್ಯಲ್ಲೊ…..? ನಂದೂ ನಮ್ಮಪ್ಪಂದೂ ಮಾತ ಅಂದ್ರ ಯಾವನೂ ಅಡ್ಡ ಹಾಕಾಕಿಲ್ಲ ಮಗ, ಅಷ್ಟ ಅಲ್ಲೋಲೇಽ ಯಾವ ಮಿನಿಸ್ಟ್ರೂ ಹೇಳಿದ್ಹಂಗ ಕೇಳ್ತಾನ. ಯಾವ ಬಡ್ಡಿ ಮಕ್ಕಳದೇನಂ...

ಕಾಲನಾಗಗಳೊಡಲು ಜಗದ ಮನ ಎಂಬುದನು ಅರಿತುಅರಿತೂ ಮರೆತು ಬಾಳಬೀದಿಗಳಲ್ಲಿ ಒಲವ ಭೀಕ್ಷೆಯ ಬೇಡಿ ಬಂದಿಹೆನು ಇಲ್ಲಾನು ಹೃದಯ ಬೇಡಿದ ನೇಹ ದೊರಕುವುದು ನಿನ್ನಲ್ಲಿ ಎನುವ ಭರವಸೆಗೂಡಿ.  ಮರುಳುಗೊಳಿಸುವ ಮಾಟ ಹುದುಗಿಸುತ ಒಳಗೆ ವಿಷ, ಹೊರಗೆ ಮಾಯೆಯ ಬೀರಿ ತ...

ಪ್ರಿಯ ಸಖಿ, ಅಲ್ಲಾಗಲಿ ಅಥವಾ ಇಲ್ಲಾಗಲಿ ಸಲ್ಲದೆನ್ನಬೇಡ ಒಳಿತು ಎಲ್ಲೂ ಒಂದೇ ನೋಡ ಸೆಣಸು ನಿಸು ಒಳ್ಮನಸು ಪತಾಕೆ ಬೀಳದಂತೆ ಜೋಕೆ ! ಕವಿ ಗೋಪಾಲಕೃಷ್ಣ ಅಡಿಗರ ‘ಅಲ್ಲಾಗಲಿ’ ಎಂಬ ಕವನದ ಈ ಸಾಲುಗಳನ್ನು ಓದಿದೆಯಾ ಸಖಿ? ಎಲ್ಲ ಕೆಡಕುಗಳನ್ನು ನೋಡಿ ನೋಡ...

“ಒಂದು ಎಲ್ಲಕ್ಕಿಂತ ಮೊದಲು ಬರತ್ತೆ ಅಲ್ವೇನೋ? ಆಮೇಲ್ ಎರಡು ಮೂರು ನಾಲ್ಕು ಐದು, ಸರಿಯೇನೋ? ಹೇಳ್ಲ ಈಗ ಒಟ್ಟಾಗ್ ಮತ್ತೆ ಕಲಿತದ್ದೆಲ್ಲಾನೂ? ಒಂದು ಎರಡು ಮೂರು ನಾಲ್ಕು ಐದು-ಮುಂದೇನು?” “ಐದು ಆದ್ಮೇಲೆ ಹೇಳ್ಬೇಕಾದ್ದು ಆರು ಏ...

ಸ್ನಾನಕ್ಕೇಂತ ಬಂದ ಚಂದ್ರ ಸಮುದ್ರ ಕನ್ಯೆಯ ಕೋಣೇಲಿ ಅಡಗಿದನೆಂಬ ಗುಮಾನಿ ಕೇಳಿ, ಬೆಳಗಿನ ಜಾವದಲ್ಲಿ ತುರ್ತಾಗಿ ಬಲೆ ಕೊಟ್ಟು ಬೆಸ್ತರನ್ನಟ್ಟಿದ ಭೂಮಿಗೆ ಸಿಕ್ಕದ್ದು ಏನು? ಬರೀ ಒಂದಿಷ್ಟು ಮೀನು. *****...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...