ನಾ ಅಭಿಮಾನಿ
ನಾ ಭಾಽಳ ಸ್ವಾಭಿಮಾನಿ
ಯಾರಿಗೂ ಸೊಪ್ಪ ಹಾಕೋ
ಮಗ ನಾ ಅಲ್ಲ, ಅಂತಿದ್ಯಲ್ಲೊ…..?
ನಂದೂ ನಮ್ಮಪ್ಪಂದೂ ಮಾತ ಅಂದ್ರ
ಯಾವನೂ ಅಡ್ಡ ಹಾಕಾಕಿಲ್ಲ ಮಗ,
ಅಷ್ಟ ಅಲ್ಲೋಲೇಽ
ಯಾವ ಮಿನಿಸ್ಟ್ರೂ ಹೇಳಿದ್ಹಂಗ
ಕೇಳ್ತಾನ. ಯಾವ
ಬಡ್ಡಿ ಮಕ್ಕಳದೇನಂತ ಅಂತಿದ್ಯಲ್ಲೋ…..?
ಈಗ್ಯಾಕೋ
ನಿಂತ ನಿಂತಲ್ಲೇ
ಕುಂತ ಕುಂತಲ್ಲೇ
ಕೆಸರಾಗ, ಕಸದ ಗುಂಡ್ಯಾಗ ಬೀಳಾಕ್ಹತ್ತಿ
ಕಣ್ಣ್ಯಾಕ ತೇಲಕ್ಹತ್ಯಾವು
ಕುತಿಗ್ಯಾಕ ಬೀಳ್ಯಾಕ್ಹತ್ತೇತಿ
ಏನೋ ಸಮಾಚಾರ –
“ಅಫೀಮ್, ಗಾಂಜಾ, ಡಾಲಿ…..
ರೀನಾ, ಸು‍ಷುಮಾ, ಸರಿತಾ …. ”
ಅಲಽಲಽಲಽ ದೂರ ಹೋಗಿದಿಪಾ
ಬಾಯಿ ತೊದಲಾಕ್ಹತ್ತತಿ ಸಾಽಕ ಸಾಽಕ
ಇವ್ರ ಇರಬೇಕು
ನಿಂದು ನಿಮ್ಮಪ್ಪಂದು ಮಿನಿಷ್ಟ್ರುಗಳು
ಹೇಳಿದ್ಹಾಂಗ ಕೇಳಾವ್ರು
ನಿನ್ನ ಸ್ವಾಭಿಮಾನಕ ಕಿಮ್ಮತ್ತ ಕೊಡಾವ್ರು
ಭಲೇ ಭೇಷ್
ಗಾಂಜಾದ ಪ್ರತಿನಿಧಿಗೆ….. ಲೀ
ರೀನಾ ಡಾಲಿಗೆ…. ಲೀ
*****