ಜಾತಿ ಗೀತಿ ಎಂಬುದೆಲ್ಲ ಸುಳ್ಳು, ಕಂದ ಸುಳ್ಳು. ಮೇಲು ಕೀಳು ಎಂಬ ಮಾತು ವಿಷ ಸವರಿದ ಮುಳ್ಳು. ನೀತಿ ನಡತೆ ಹೃದಯ ಇರುವ ಮಾನವನೇ ಹಿರಿಯ, ನಂಬಬೇಡ ಭೇದದ ವಿಷ ಕುಡಿಸುವಂಥ ನರಿಯ! ಸುತ್ತ...
ಮೂಡುವನು ರವಿ ಮೂಡುವನು. ಕತ್ತಲೊಡನೆ ಜಗಳಾಡುವನು ಮೂಡಣ ರಂಗಸ್ಥಳವನು ನೆತ್ತರು ಮಾಡುವನು. ಅವನು ಬರಬೇಕಾದರೂ ಕೆಂಪು ರಾಣಾರಂಪ ಹೋಗಬೇಕಾದರೂ ಕೆಂಪು ರಾಣಾರಂಪ. ನನಗೆ ಜಗಳವೂ ಇಲ್ಲ, ಕೆಂಪು ರಾಣಾರಂಪ ಯಾವುದೂ ಇಲ್ಲ. ಬರುವಾಗಲೂ ತಂಪು...
ಮಾಣಿಕವ ಕಂಡವರು ತೋರುವರುಂಟೇ? ಮುತ್ತ ಕಂಡವರು ಅಪ್ಪಿಕೊಂಬುವರಲ್ಲದೆ, ಬಿಚ್ಚಿ ತೋರುವರೇ? ಆ ಮುತ್ತಿನ ನೆಲೆಯನು ಮಾಣಿಕ್ಯದ ನೆಲೆಯನು ಬಿಚ್ಚಿ ಬೇರಾಗಿ ತೋರಿ ರಕ್ಷಣೆಯ ಮಾಡಿದ ಕಾರಣದಿಂದ, ಬಚ್ಚ ಬರಿಯ ಬೆಳಗಿನೊಳಗೋಲಾಡಿ ನಿಮ್ಮ ಪಾದದೊಳಗೆ ನಿಜಮುಕ್ತಳಾದೆನಯ್ಯ...
ನೆತ್ತಿಯೊಳಗೆ ವಿಷದ ಬ್ರೂಣ ಮೈಯಲ್ಲಿ ಕಲಬೆರಕೆ ರಕ್ತ ಹೊತ್ತ ದೇಹದ (ದೇಶದ) ರಾಷ್ಟ್ರನಾಯಕರು ಹಸಿರು ನೀರಡಿಕೆಗಳ ಜ್ವಲಂತ ಸಮಸ್ಯೆಯಲ್ಲಿ ಇವರು ಮದಿರಾಪಾನಕ್ಕೆ ಹಾತೊರೆಯುತ್ತಾರೆ. ಬೆಲೆ ಕಟ್ಟದ ಪ್ರೀತಿ ಪ್ರೇಮಕ್ಕಾಗಿ ಕೊಲೆಗಳಾಗಿ ಕೊಲೆಗಡುಕರಾಗುತ್ತಿದ್ದರೆ - ಇವರು...
ಹಸಿದ ಹೊಟ್ಟೆಯ ಹೇರ ಹೊರಲಾರದಿಹ ಜನರ ಕಾಸಿನಾಸೆಯ ತೋರಿ ಹೇಸಿಗೆಯ ನರಕದಲಿ ದೂಡಿದುಡಿಸುವ ದುಡ್ಡಿನಪ್ಪಗಳ ವಿಶ್ವವನು, ನಾಗರಿಕ ಜೀವನದ ಮೇಲ್ಮುಸುಕ ಮರೆಯಲ್ಲಿ ಬಚ್ಚಿಟ್ಟ ಬ್ರಹ್ಮಾಂಡ ಬಯಲು ಮಾಡಿದ ಬ್ರಹ್ಮ ೫ ಸಿಂಕ್ಲೇರ ಅಪ್ಟನನೆ ನಿನಗೆ...
ಪ್ರಿಯ ಸಖಿ, ಕೆಲವರು ಬಯಸುತ್ತಾರೆ ತಾವು ಇಡುವ ಪಾದಗಳ ಕೆಳಗೆ ಇರಬೇಕೆಂದು ರತ್ನಕಂಬಳಿಗಳು ಅಮೃತ ಶಿಲೆಗಳು ಡಾಂಬರಿನ ನಯ ನಾಜೂಕಿನ ರಸ್ತೆಗಳು ಆದರೆ ತಮ್ಮ ಕಾಲುಗಳ ಕೆಳಗೆ ಹಿಮಾಲಯ ಪರ್ವತ ಶಿಖರಗಳೆ ಇರಬೇಕೆಂದು ಮೆಟ್ಟಿದವರು...
"ಗಿಡ, ಮರ, ಪ್ರಾಣಿ ಎಲ್ಲ ನಮ್ಹಾಗೇನಮ್ಮಾ? ಹೊಡದ್ರೆ ಬೈದ್ರೆ ಅವಕ್ಕೂ ನೋವು ಆಗತ್ತೇನಮ್ಮ?" "ಹೌದು ಮರಿ, ಮರ ಗಿಡ ಎಲ್ಲಾ ನಮ್ಮಂತೇ ಪ್ರಾಣೀನ್ ಕೂಡ ನೋಡ್ಕೋಬೇಕು ಮನೇ ಮಕ್ಳಂತೆ." "ಮತ್ಯಾಕ್ ಅವು ನಮ್ಹಾಗೇನೇ ಮಾತನ್...