ಜಾತಿ ಗೀತಿ ಎಂಬುದೆಲ್ಲ
ಸುಳ್ಳು, ಕಂದ ಸುಳ್ಳು.
ಮೇಲು ಕೀಳು ಎಂಬ ಮಾತು
ವಿಷ ಸವರಿದ ಮುಳ್ಳು.
ನೀತಿ ನಡತೆ ಹೃದಯ ಇರುವ
ಮಾನವನೇ ಹಿರಿಯ,
ನಂಬಬೇಡ ಭೇದದ ವಿಷ
ಕುಡಿಸುವಂಥ ನರಿಯ!
ಸುತ್ತ ಇರುವ ಸಸ್ಯ ಪ್ರಾಣಿ
ನಮ್ಮಂತೇ ಅಂದುಕೊ
ನಮ್ಮ ಹಾಗೆ ಅವಕೂ ಸಹ
ಜೀವ ಉಂಟು, ತಿಳಕೊ.
ಒಬ್ಬೊಬ್ಬರ ಬಾಳೂವೆಯೂ
ಹೊರಗೆ ಬೇರೆ ರೀತಿ
ಒಳಗೆ ಒಂದೇ, ಅದು ತಿಳಿವುದು
ನಮಗಿದ್ದರೆ ಪ್ರೀತಿ.
*****