ನೆತ್ತಿಯೊಳಗೆ ವಿಷದ ಬ್ರೂಣ
ಮೈಯಲ್ಲಿ ಕಲಬೆರಕೆ ರಕ್ತ ಹೊತ್ತ ದೇಹದ
(ದೇಶದ) ರಾಷ್ಟ್ರನಾಯಕರು
ಹಸಿರು ನೀರಡಿಕೆಗಳ ಜ್ವಲಂತ ಸಮಸ್ಯೆಯಲ್ಲಿ
ಇವರು ಮದಿರಾಪಾನಕ್ಕೆ ಹಾತೊರೆಯುತ್ತಾರೆ.
ಬೆಲೆ ಕಟ್ಟದ ಪ್ರೀತಿ ಪ್ರೇಮಕ್ಕಾಗಿ
ಕೊಲೆಗಳಾಗಿ ಕೊಲೆಗಡುಕರಾಗುತ್ತಿದ್ದರೆ –
ಇವರು ಬೆಲೆಕೊಟ್ಟುಕಾಮಿಸಿ ಕೊಲ್ಲಿಸಿ
ಸಾಧು ಜೀವಿಗಳಾಗುತಿರುವರು.
ರಾಷ್ಟ್ರ ಸೌಧಗಳಲ್ಲೆಲ್ಲ ಢಕಾಯಿತರು
ಬಹಿರಂಗವಾಗಿ ಲೂಟಿ ಮಾಡುತ್ತವೆ
ಶಾಂತಿಯಾತ್ರೆ ಮುಗಿಸಿಕೊಂಡು ಬಂದ ಇವರು
ರಾಮ – ಬುದ್ಧರ ದೇಶದಲ್ಲೇನಾಗುತ್ತಿದೆಯಲ್ಲ
ಎಂದು ಪತ್ರಕರ್ತರಿಗೆ ಭಾಷಣ ಬಿಗಿದು
ಕಳಿಸಿ –
ಮಧಿರೆಯ ಸ್ನೇಹ ಬೆಳಿಸಿ
ಮತ್ತೆ ವಿಷಜಂತುಗಳಿಂದ
ಬ್ರೂಣಗಳನ್ನು ಹುಟ್ಟಿಸಿಕೊಳ್ಳುತ್ತಲೇ
ಯಾವುದಕ್ಕೂ ನ್ಯಾಯಕೊಡದೆ
ಬಿದ್ದುಹೋಗುತ್ತವೆ
*****