
ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು. ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು. ಜೊಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು. ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸ...
ಏಳುಲೋಕದಲೇಳು ಕಡಲಲಿ ಏಳು ಪರ್ವತ ಬಾನಲಿ ಏಳು ಸಾವಿರ ದೇಶದಿ, ಸುತ್ತಿ ಹಾರ್ವುದು ನೋಡಿ ನೆಡೆವುದು ನಿಮಿಷ ನಿಮಿಷಕೆ ಕ್ಷಣದಲಿ ಕವಿಯ ಮನಸ್ಸದೊ ಹಾರ್ವುದು! ಚಂದ್ರಲೋಕದ ಸುತ್ತು ತಿರುಗುತ ಸೂರ್ಯಕಾಂತಿಯ ನೋಡಿತು! ವಿಶ್ವಗೋಳವ ತಿರುಗಿಸಿ- ಪಾತಾಳದಾಳಕ...
ಒಡಕ ಮಡಿಕೆಯಂತೆ ಒಡೆದು ಹೋಗುವ, ಹಡಿಕಿಕಾಯವ ನೆಚ್ಚಿ, ತಟತಟನೆ ತಾಗಿ, ಮಠದ ಬೆಕ್ಕಾಗಿ ತಿಟ್ಟನೆ ತಿರುಗಿ, ಬಟ್ಟೆಯ ಲಿಕ್ಕಿ ಕಡಿವ ಕಳ್ಳನನರಿಯದೆ, ತಿಂಬ ಹುಲಿಯನರಿಯದೆ, ಒಡವೆಯ ಗಳಿಸಿಹೆನೆಂದು ಒಡೆಯನ ಮರೆದು, ತನ್ನ ಮಡದಿಮಕ್ಕಳಿಗೆಂದು ಅವರ ಒಡವೆರೆ...
ಚುಮು ಚುಮು ನಸಕು ಸುಂಯ್‌ಗುಡುವ ಅಶೋಕ ವೃಕ್ಷಗಳು ರಾತ್ರಿಯಿಡೀ ಎಣ್ಣೆಯಲಿ ಮಿಂದೆದ್ದ ಗಿಡ ಗಂಟೆ, ಗದ್ದೆ ಮಲ್ಲಿಗೆ ಸಂಪಿಗೆ ಗುಲಾಬಿಗಳು ಕೊರಡು ಕೊನರುವಿಕೆಯೆ ಸಾಲುಗಳು…. ಚಳಿ ಚುಚ್ಚಿ ಮುದುರುವ ಕಂದಮ್ಮಗಳಿಗೆ ಕನಸು ಹೋದಿತೆನ್ನುವ ಬೇಸರ ತಿ...
(ಹುಡುಗಿಯರ ನಗು ಕೇಳಿ ಬರೆದುದು) ಮಲ್ಲಿಗೆಯ ಮೊಗ್ಗುಗಳ ರಾಸಿ ಅರಳಿರಲದರ ನಡುವೆ ಅರೆ ಎಚ್ಚರದಿ ಇರವನೇ ಅರೆಮರೆತು ಕಂಪಿನಿಂದಾತ್ಮವನು, ಹೃದಯವನು, ತುಂಬಿಸುತ ಬೇರೊಂದು ವಿಶ್ವವನೆ ಸೇರಿದಂತಾಗುವುದು ನಿಮ್ಮ ಕಿಲಕಿಲ ನಗುವು ದೂರದಿಂ ಗಾಳಿಯಲಿ ತುಂಬಿ ...
ಇಲೀ ಮರೀ ಇಲೀ ಮರೀ ಗಿಡ್ಡು ಪುಟಾಣಿ ಇಲೀ ಮರೀ ಆಟಕ್ ಬಂದ್ರೆ ಕೊಡ್ತೀನಿ ಬಿಸಿ ಬಿಸಿ ಕಡ್ಲೆ ಮಸಾಲ್ ಪುರಿ. ಪುರ್ ಪುರ್ ಓಡ್ತೀ ಯಾಕಪ್ಪ? ನಾನೇನ್ ಪೋಲೀಸ್ ಅಲ್ಲಪ್ಪ ಹತ್ತಿರ ಬಂದು ಆಡಿದರೆ ತಿಂಡೀ ತೋರಿಸ್ತೀನಪ್ಪ. ಚಕ್ಕುಲಿ ತುಂಬಿ ಡಬ್ಬಕ್ಕೆ ಅಮ್ಮ ...
ಪ್ರಸನ್ನ ಶರದಿಂದುಮಂಡಲದಂತೆ ‘ಶ್ರೀ’ ಗುರುವೆ ನೀವೆನ್ನ ಹೃದಯಪೀಠವನೇರಿದಂತೆನಗೆ ನಿಮ್ಮ ಸಂಸ್ಮರಣೆ. ನಿಮ್ಮಿಂದ ಪಂಪನ ಜೊತೆಗೆ ಬಂದರಾ ಪೇಕ್ಸ್‌ಪಿಯರ್ ಸಾಫೊಕ್ಲೀಸ್ ಭಾಸರೆ; ದೈವಹತ ಧನ್ಯಾತ್ಮನಾದನಶ್ವತ್ಥಾಮನ್. ಇತ್ತ ‘ಇಂಗ್ಲಿಷ್ ಗೀತೆ’ ಹೊಸತೊಂದು ...
ತಟಪಟ ತಟ್ಟುತ ಒಟ್ಟಿನಲಿ ಕೋಲಿಂ ಕೆಲವರು ಹೊಲದಲ್ಲಿ, ಕಿಣಿಕಿಣಿ ಮಣಿಯಿಂ ಕುಣಿಸುತಲಿ, ಗಲಗಲ ಬಾಲರ ಒಲಿಸುತಲಿ. ಡಂ ಢಂ ಡಾಂಬರ ಗಡಗಡಿಸಿ ಪೆಂಪಾಪೆಂಪೆಂದು ಪೇಳಿರಿಸಿ, ಲಲ್ಲಾಲ್ಲೆನ್ನುತ ಸೊಲ್ಲನೊಂದು ಬಾಯೊಳು ಸಾಯಲು ಹಾತೊರೆದು! ರತ್ನದ ಚಿನ್ನದ ಬಣ್...
ಮರ್ತ್ಯದ ಮನುಜರು ಸತ್ತರೆನುತ್ತ, ಕತ್ತೆಲೆಯೊಳು ಮುಳುಗಿ, ಈ ಮಾತು ಕಲಿತುಕೊಂಡು ತೂತು ಬಾಯೊಳಗೆ ನುಡಿದು ಕಾತರಿಸಿ ಕಂಗೆಟ್ಟು, ಹೇಸಿಕೆಯ ಮಲದ ಕೋಣನ ಉಚ್ಚೆಯಬಾವಿಗೆ ಮಚ್ಚಿ ಕಚ್ಚಿಯಾಡಿ, ಹುಚ್ಚುಗೊಂಡು ತಿರುಗುವ ಕತ್ತೆ ಮನುಜರ ಮೆಚ್ಚರು ನಮ್ಮ ಅಪ್ಪ...














