ಮರ್ತ್ಯದ ಮನುಜರು ಸತ್ತರೆನುತ್ತ,
ಕತ್ತೆಲೆಯೊಳು ಮುಳುಗಿ,
ಈ ಮಾತು ಕಲಿತುಕೊಂಡು
ತೂತು ಬಾಯೊಳಗೆ ನುಡಿದು
ಕಾತರಿಸಿ ಕಂಗೆಟ್ಟು,
ಹೇಸಿಕೆಯ ಮಲದ ಕೋಣನ
ಉಚ್ಚೆಯಬಾವಿಗೆ ಮಚ್ಚಿ ಕಚ್ಚಿಯಾಡಿ,
ಹುಚ್ಚುಗೊಂಡು ತಿರುಗುವ ಕತ್ತೆ
ಮನುಜರ ಮೆಚ್ಚರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ