ಅಂತಾದೊಡಂತಾದೊಡಿಂತಾದೊಡೆಮ್ಮ ನೆರಳು
ಎಂಮ ಜೊತೆಗಿರ್‍ಪಂತೆ ಎಂಮ ಜೊತೆ
ಗೆಂಮನ್ನದ ಕೆಲಸಗಳಿರಬೇಕಲ್ಲದೊಡೆ
ಎಂಮ ಜ್ಞಾನದೋದಿಗದೇನರ್‍ಥವೋ?
ಗುಂಮೆನುವ ಕತ್ತಲಿನನ್ನ ವ್ಯರ್‍ಥವೋ – ವಿಜ್ಞಾನೇಶ್ವರಾ
*****