ರುಚಿ ರುಚಿಯೆಣ್ಣೆ ಬಜ್ಜಿ ಬೋಂಡಗಳಂತೆಮ್ಮ
ಬಾಚಿ ಪಿಡಿದಿರ್‍ಪ ಯಂತ್ರ ತಂತ್ರಗಳಿದರ
ಔಚಿತ್ಯವನರಿತು ಬಳಸಲು ಬೇಕಷ್ಟಿಷ್ಟು
ಯೋಚಿಸುತೂಟದ ಜೊತೆಯೊಳೊಂದಷ್ಟು
ರುಚಿ ತಿಂಡಿಗಳನು ಹಿತಮಿತದಿ ತಿನ್ನುವಂತೆ – ವಿಜ್ಞಾನೇಶ್ವರಾ
*****