(ಹೋಗತಿರಲೋ ಬಲಿಗಾರಣ್ಣಾ)

ಹೋಗತಿರಲೋ ಬಲಿಗಾರಣ್ಣಾ
ಹೋಗತರ ಬೇಲೆ ಮೇಲೆ
ಬಿಲ್ಲಿಗೆ ಮೂರ ಶಿನ್ನ || ೧ ||

ಚಂದ್ರ ನೋಡಿ ಚಾವಡಿ ನೀರ
ಮುದ್ದುರಾಮ ನನ್ನ ಮತ್ತುಗಾರ || ೨ ||

ಅತ್ತೆ ಮಾವ್ನ ಧರ್‍ಮದಿಂದಿ
ಹತ್ತು ಹೊನ್ನೊಂದ್ ಮೂಗತಿಯಾ || ೩ ||

ಬಾವಿಲ್ ಮೊಕ ನೋಡ್ಗಂಡು
ಅಲ್ಲೆ ಬಿದ್ದ ಮೂಗುತಿಯ
ಸತ್ತ ಗುರುವಿನ ಕೋಲೇ || ೪ ||

ಸೊಬಗುಣಿ ರಣದ
ಹತ್ತನ ಬೇಳೆ ಕಂಡ್ರು ಗುಬ್ಬಿಗೆ
ಸರುಣ ಸರುಣ ಸರುಣಂಬೊಸ್ವಾಮಿಗೆ
ಬೋಳಿ ದೇವರಿಗೆ ಸರುಣ ಬಾರೋ || ೫ ||

ಸರುಣ ಸರುಣ ಸರುಣಂಬ ಗುರುವಿಗೆ
ಗುರುವಿನ ಪಾದಕ್ಕೆ ಸರುಣೆಂಬರೋ || ೬ ||

ಮಾರುತಿ ಒಳಬೊಬ್ರು ದೇವರು
ಲೇರುತಿ ಒಳ ಬಾಗ್ಲ ಬೀರರು || ೭ ||

ಜುಟ್ಟೆ ಜುಟ್ಟಾಲ್ ಮೈ ಜೋಡಿನಂದಿ
ನಂದು ನಿಂದು ಹೊಯ್ಲ ಮೈ ಜೋಡಿನಂದಿ || ೮ ||

ಸತ್ಯವುಳ್ಳ ಜಟ್ಗು ದೇವ ಯತ್ತ ನೋಡಿಬಂದೆವು
ಯತ್ತಗೋಡಿ ಬಂದೆವು
ಯತ್ತಣ ದಾಸಫಲ ಸುಗ್ಗಿ ಕೋಲ್ ಬಂದವು || ೯ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.