
ಕಾಯವೆಂಬ ಕದಳಿಯನೆ ಹೊಕ್ಕು, ನೂನ ಕದಳಿಯ ದಾಂಟಿ, ಜೀವಪರಮನ ನೆಲೆಯನರಿದು, ಜನನಮರಣವ ಗೆದ್ದು, ಭವವ ದಾಂಟಿದಲ್ಲದೆ, ಘನವ ಕಾಣಬಾರದೆಂಬರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ...
ಕನಸು ಕಾಣದ, ನಾಚಿ ತುಟಿ ಕಚ್ಚಿಕೊಳ್ಳವ ಹಸಿರಕ್ತದ ಬಿಸಿಮಾಂಸದ ಬೆಡಗಿಯೆರು ನಿಲ್ಲುತ್ತಾರೆ ಆರೆಬೆತ್ತಲಾಗಿ ನಗುತ್ತಾರೆ ಮುದಿಗಳೂ ಹೊರಳಿ ನೋಡುವಂತೆ ಹದ್ದುಗಳು ಎರಗುತ್ತವೆ ಮುಗಿಬೀಳುತ್ತವೆ ಕಾಮದ ಹಸಿವಿಗಾಗಿ ದೂರದ ಆಫ್ರಿಕ ಏಷಿಯಾದ ಮುಸುರೆ ತೊಟ್ಟ...
ನನ್ನ ಕವಿಯೆಂದೆನುವ ಮೆಚ್ಚುಮಾತೇಕೆ? ಪದದ ಸಮ್ಮಿಳನವೋ ಈ ನನ್ನ ಕವಿತೆ! ಎದೆಯ ಉಮ್ಮಳವಿದುವೆ, ಅದು ನಿನ್ನ ಕುರಿತೆ ಕೊರಗುತಿಹೆ ಕೊರಳಿದಕೆ ಹೊನ್ ಪದಕವೇಕೆ? ಇದು ಕವಿತೆಯಹುದೆನುವ ಮಾತು ಸರಿಯಲ್ಲ -ಕವಿಯು ನಾನಲ್ಲ- ಇದು ನಿನ್ನ ನೂರಾರು ಛಾಯೆಗಳ ಒರೆ...
ಹುಲ್ಲು ಹೇಗೆ ಹಾಲಾಗುತ್ತೆ ಹಸುವಿನ ಹೊಟ್ಟೇಲಿ? ಹಕ್ಕಿಗೆ ಉಸಿರು ಕಟ್ಟೋಲ್ವಾಂತ ಪುಟ್ಟನೆ ಮೊಟ್ಟೇಲಿ? ಮೋಡದ ತುಂಬ ನೀರಿದ್ರೂನೂ ಅದ್ಹೇಗೆ ತೇಲತ್ತೆ? ರಾತ್ರೋ ರಾತ್ರಿ ಸೀ ಹಾಲೇಕೆ ಹುಳಿ ಮೊಸರಾಗುತ್ತೆ? ದೇವ್ರೇ ಇದೆಲ್ಲ ಮಾಡ್ತಾನಂತೆ ಕಷ್ಟ ಇಲ್ದೇನ...
ಮಹಾಭಾರತದ ಮಹಾಮುನಿಗಳಲಿ ದೂರ್ವಾಸ ಅಪೂರ್ವ ನಿನ್ನ ಮಹಿಮೆ. ವ್ಯಾಸ, ಕುವರವ್ಯಾಸ ಕಾಲ ಶಿಲೆಯಲ್ಲಿ ಕಡೆದಿಹರು ನಿನ್ನ ಅಶಾಂತ ಗ್ರೀಷ್ಮ ಮಧ್ಯಾಹ್ನ ಮೂರ್ತಿಯನು. ಆರ್ಯಾವರ್ತ ಒಂದು ಕಾಲದಲಿ ಆಶ್ರಮ ನಿಯಮ ಹದಗೆಟ್ಟು ತ್ಯಾಗದ ಮುಖದ ಮೇಲೆ ಭೋಗದ ಬಂಗು ಬರ...
ಯಾರ ಕಂಡು ಹೆದರಿ ಓಡುವೆ? ಯಾರ ಹಿಡಿಯಲು ಸರ್‍ರ ಸಾಗುವೆ? ಒಂದೆ ದಾರಿಯೊಳೆಂದು ನಡೆಯುವೆ- ಎಲ್ಲಿ ನಿಲ್ಲುವಿ ಹೇಳೆಲೊ? ಬೆಟ್ಟು ಅಗಲದ ದಾರಿ ಮಧ್ಯದಿ ಕಡಿದ ಬಯಲಿನ ಹೊಂಡ ನಡುವಲಿ ಕಂಡ ಕಂಡ ತಗ್ಗು ತಳದಲಿ- ಎಲ್ಲಿ ಮುಂದಕೆ ಹರಿಯುವೇ? ಹನಿಯ ಜಿನುಗಿಸಿ...
ತನು ನಷ್ಟವಾದರೇನಯ್ಯ, ಮನ ನಷ್ಟವಾಗದನ್ನಕ್ಕ? ವಾಕ್ಕು ನಷ್ಟವಾದರೇನಯ್ಯ, ಬೇಕುಬೇಡೆಂಬುದನಳಿಯದನ್ನಕ್ಕ? ಅಂಗ ಸುಖ ನಷ್ಟವಾದಡೇನಯ್ಯ, ಕಂಗಳ ಪಟಲ ಹರಿಯದನ್ನಕ್ಕ? ಮನ ಮುಗ್ಧವಾದಡೇನಯ್ಯ, ಅಹಂಮೆಂಬುದ ಬಿಡದನ್ನಕ್ಕ? ಇವೆಲ್ಲರೊಳಗಿರ್ದವೆಲ್ಲ ನೆನಿಸಿಕೊಂ...
ಉತ್ತರ ಧೃವಕ್ಕೆ ಹೊಂದಿಕೊಂಡಿರುವ ನೆದರ್‌ಲ್ಯಾಂಡಿನ ಒಳನಾಡಿನ ಹಳ್ಳಿಯೊಳಗೆ ಹೊಕ್ಕಾಗ – ಮನಸ್ಸು – ದೇಹ ಎಲ್ಲ ನನಗರಿಯದೇ slow motion pictureದಂತಾಗಿ ಹಗುರಾಗಿ ಹಕ್ಕಿಯಾಗಿ ಹಾರಾಡಿತು. ಧರಗಿಳಿದು ಬಂದ ಸ್ವರ್ಗದೊಳಗೆ ಅದೇ ಮಳೆಯಾಗ...
ಒಮ್ಮೊಮ್ಮೆ ಎನಿಸಿವುದು ಜೀವವಾರಿದಮೇಲೆ ಸುಖಸ್ವಪ್ನಗಳ ಬಿಂಬ ಮೂಡುವುದು ಎಂದು, ಕೊಳದ ನೀರಲೆಯಳಿದು ಮೌನದಲಿ ಮಲಗಿರಲು ಸೌಂದರ್ಯದಾಗಸವ ಬಿಂಬಿಸುವ ತೆರದಿ! ಆದರೆಂತೋ ಏನೊ! ಅಂತಾದರೆನಿತುಸುಖ, ಬಾಳದು ಸ್ವಪ್ನವನು ಮರೆಯಬಹುದಾಗ! ಜೀವದೊಳಗಿಲ್ಲದುದ ಸಾವ...















