ಹಾಲೆಂಡಿನ ನಿಸರ್ಗ

ಉತ್ತರ ಧೃವಕ್ಕೆ ಹೊಂದಿಕೊಂಡಿರುವ
ನೆದರ್‌ಲ್ಯಾಂಡಿನ ಒಳನಾಡಿನ ಹಳ್ಳಿಯೊಳಗೆ
ಹೊಕ್ಕಾಗ –
ಮನಸ್ಸು – ದೇಹ ಎಲ್ಲ ನನಗರಿಯದೇ
slow motion pictureದಂತಾಗಿ
ಹಗುರಾಗಿ ಹಕ್ಕಿಯಾಗಿ ಹಾರಾಡಿತು.
ಧರಗಿಳಿದು ಬಂದ ಸ್ವರ್ಗದೊಳಗೆ
ಅದೇ ಮಳೆಯಾಗಿ ಸಿಂಪಡಿಸಿದ
ನೀರುಗಳಿಂದೆದ್ದು ಒಂದ ಗಿಡಬಳ್ಳಿ ಹೂವುಗಳು
ನನ್ನನ್ನು ಸ್ವಾಗತಿಸಿದವು.
“ಹೊಲಗದ್ದೆಗಳಲ್ಲಿ ಹರೆಯುವ ತಿಳಿನೀರಿನ
ಕಾಲುವೆಗಳ ‘ಝುಳು – ಜುಳು ಸಂಗೀತ’
ಅಮಸ್ಟರ್ಡ್ಯಾಂದ ಕ್ಯಾಬರೆ show  ಆಗಲೇ
ಅದೇ ಹಿಂದಿನ ದಿನ ನೋಡಿದ Rock & Rollದ
ಕಿರುಚಾಟವಾಗಲೀ ನನ್ನ ಮನಸ್ಸಿನಿಂದ ಕಿತ್ತೊಗೆದು
ಮೌನವಾಗಿ ಮೃದುವಾಗಿ ಆಕರ್ಶಿಸಿತ್ತು”
ಹಳದಿ ಕೆಂಪು ‘ಟ್ಟೂಲಿಪ್’ ಹೂಗಳ (Combination or contrast)
ಸಾಲಿನಲ್ಲಿ ನಡೆದಾಡುವಾಗ
ನಾ ತೊಟ್ಟ Paris T Shirtಕೂಡಾ
ತುಂಬಾ ಸಪ್ಪೆಯಾಗಿ ಕಂಡಿತು.
“Wind Mill” (ಗಾಳಿಚಕ್ರ)ದ ಚಕ್ರಗಳು
ವಿಶಾಲ ವಿಹಂಗಮ ನಿಸರ್ಗ ಸ್ವರ್ಗದೊಳಗೆ
ಕಿರೀಟ (crown) ಇಟ್ಟಂತಿದ್ದರೆ
“North Seaಗೆ” (ಉತ್ತರ ಸಮುದ್ರ) ರಾಣಿಯ
ಪೋಷಾಕಿನಂತ ಸುಂದರವಾಗಿ
ಗರಿಗರಿಯಾಗಿ – ಬಿಂಕದಂತೆ ಅಲೆ‌ಅಲೆಯಾಗಿ
ಬಂದು ನನ್ನ ತಬ್ಬಿಬ್ಬದಾಗ
ನಾನು ಈ ನಿಸರ್ಗ ಮಡಿಲಲ್ಲಿ
ತಬ್ಬಿಬ್ಬಾದೆ.
(ನೆದರ್‌ಲ್ಯಾಂಡ್‌ (ಹಾಲೆಂಡ್)ದ ಸುಂದರ ಪ್ರಶಾಂತ ಹಳ್ಳಿಗಳಾದ ಮುರ್ಕನ್‌, ಓಲೆಡ್ಯಾಂ ಸೈನ್ಸೆಗಳ ವಿಹಂಗಮ ಅನುಭವ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಮ್ಮೊಮ್ಮೆ ಎನಿಸುವುದು
Next post ಲಿಂಗಮ್ಮನ ವಚನಗಳು – ೧೪

ಸಣ್ಣ ಕತೆ

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…