ಹೇಳುವೆ ಮೋರುಮ ಐಸುರದೊಳಗೊಂದು ಮಾಳಗಿ ಮೇಲೆ ಅಲಾವಿ ಕುಣಿ |ಪ| ತೋಳನ ಮದವಿಗೆ ಗಾಳಿ ದೇವರು ಬಂದು ಬಾಳಿಯ ವನದಾಗ ತಾಳಿ ಕಟ್ಟಿದ ಗೊನಿ |೧| ಜಾರತ ಕರ್ಮದಿ ಆರೇರ ಹುಡುಗಿಯು ಸೋರುವ ತಾಬೂತ ಏರಿ ಕುಳಿತಮನಿ |೨| ಶಿಶುನಾಳಧೀಶನ ಸಖನಾದ ಹಸೇನ ದಶದಿನದೊಳು...

ಆಫೀಸಿನಿಂದ ಮರಳಿ ಬಂದು ಸುಸ್ತಾಗಿ ರೂಮಿನಲ್ಲಿ ಮಂಚದ ಮೇಲೆ ಕುಳಿತು ಬೂಟುಗಳನ್ನು ಕಳಚಿ ಎದೆಯನ್ನು ಸೀಲಿಂಗ್ ಫ್ಯಾನಿಗೊಡ್ಡಿ ಸುಧಾರಿಸಿಕೊಳ್ಳುತ್ತಿದ್ದೆ. ನನ್ನಾಕೆ ಸೀತ ಕಾಫಿ ತಿಂಡಿಯೊಂದಿಗೆ ರೂಮಿಗೆ ಬಂದು ಸ್ಟೂಲಿನ ಮೇಲಿಟ್ಟು ಅಲ್ಲೇ ಇದ್ದ ಗೂಡಿ...

ತಂದೆ: “ಈ ಹೋಂವರ್ಕ್‍’ನ ನಿನ್ನ ಅಮ್ಮನ ಹತ್ತಿರವೇ ಮಾಡಿಸಿಕೋ” ಮಗ: “ಬೇಡ ಅಪ್ಪಾ, ನೀವೇ ಹೇಳಿ ಕೊಡಿ; ಉತ್ತರಗಳನ್ನು ಸಂಕ್ಷಿಪ್ತವಾಗಿ ಬರೆಯಬೇಕೆಂದು ಗುರುಗಳು ಹೇಳಿದ್ದಾರೆ.” ***...

ಹಿಡಿಯಿರೋ ಅವನ ಮಾತು ಬಲ್ಲವರೆಲ್ಲರೂ ಹಿಡಿಯಿರೋ! ಮಾತುಮಾತಿನಲಿ ಅವನಿಗಾಗಿ ಗುಂಪು ಕೂಡಿದ ನೀವು ಅವ ನಮ್ಮವ ಅವ ನಮ್ಮವನೆಂದು ಗುಂಪು ಗುಂಪಾಗಿ ಗುದ್ದಾಡುತ್ತೀರಿ ಆ ಬ್ರಾಹ್ಮಣ್ಯ ಶಿಖಿಗೆ ಅತಿ ಆಚಾರಿಗಳಿಗೆ ಮತಾಂಧ ಅಭಿಮಾನಿಗಳಿಗೆ ಜನಿವಾರ ಶಿವದಾರಗಳ...

  ಗುಲಾಬಿಗಳ ಹೊದ್ದವಳು ತೀರ ಖಾಸಗಿತನದಲ್ಲಿ ವ್ಯವಹರಿಸಬಲ್ಲ ಬೆಂಕಿಯ ಕುಲುಮೆ. ನೆಲದಲ್ಲಿ ಬುಸುಗುಡುವ ಹಾವು; ಆವೇಶ ಅವಳು. ನೆರಳೆಂಬ ಮುದ್ದು ಪ್ರೀತಿ ಬಿಕ್ಕಳಿಸಿ ರೋದಿಸುತ್ತಿರುತ್ತದೆ. ಪ್ರೀತಿಯ ಅಂಗಿ ನೇತಾಡುವುದು ಮನಸ್ಸು- ತೇವಗೊಂಡ ನೊಣ...

ಅಧ್ವಾನೆದ್ದರೂ ಅಡ್ವಾಣಿ ಪಕ್ಷದ ಪದವಿಯನ್ನಾಗಲಿ ವಿರೋಧ ಪಕ್ಷದ ಸ್ಥಾನವನ್ನಾಗಲಿ ಬಿಡದೆ ಸತಾಯಿಸುತ್ತಾ ವಾಜಪೇಯಿ ಎಂಬ ಹಳೆಗುರಾಣಿಯ ರಕ್ಷಣೆ ಪಡೆಯುತ್ತಿರುವುದನ್ನು ಕಂಡು ಕೊತಕೊತನೆ ಕುದಿಯುತ್ತಿರುವ ಓಲ್ಡ್‌ ಆರೆಸ್ಸೆಸ್ಸಿನ ವಾನರ ಸೇನೆಗೀಗ ತೋರುತ್...

ಬಡವೆಯಾದ ವಿಧವೆಗೊಬ್ಬ ಮಗನಿದ್ದನು. ಅವನು ಶಾಲೆಗೆ ಹೋದಾಗ ಸರಿಯರು ಧರಿಸಿದ್ದ ಒಳ್ಳೊಳ್ಳೆಯ ಬಟ್ಟೆಗಳನ್ನೂ ಅವರು ತರುತ್ತಿದ್ದ ತಿಂಡಿತಿನಿಸು ಆಟಿಗೆಗಳನ್ನೂ ಕಂಡು, ಅವು ತನಗೂ ಬೇಕೆಂದು ತಾಯಿಯ ಬಳಿಯಲ್ಲಿ ಕೇಳುವನು. “ನಾವು ಬಡವರು. ಅಂಥ ಬಟ್...

  ಮೃತರ ಸವಾಲುಗಳಿಗೆ ಉತ್ತರಿಸಲೇಬೇಕಾದ ದಿನ ಬಂದೊದಗಬಹುದು. ಆಗ ಉತ್ತರಿಸದಿದ್ದಲ್ಲಿ ಅವರು ಮತ್ತೊಮ್ಮೆ ರೋದಿಸುತ್ತಾರಂತೆ. ಆಗಲೂ ಸುಮ್ಮನಿದ್ದಲ್ಲಿ, ಬದುಕಿ ಪ್ರಶ್ನಿಸುತ್ತಾರಂತೆ- ಎದುರಾಳಿಗಳ ನಾಲಗೆಗಳನ್ನು ಕತ್ತರಿಸಿ. *****...

ಐಸುರದಲಾವಿಹಬ್ಬ ಹೋದಮೇಲೆ ಹೇಸಿ ರಿವಾಯತ ಸವಾಲ ಜವಾಬ ಕಾಸಿಗೆ ಕಡಿಮ್ಯಾಗಿ ನಾಶವಾಗಿ ಹೋಯ್ತು    |೧| ಎ೦ದಾಯ್ತೋ ಮೋರಮ ಹೇಳಲೋ ಮಂದಿ ಓದರೆ ತಂದಿಟ್ಟ ಚೊಂಗೆ ರೋಟು ತಿಂದು ತಿಂದು ತಿರುಗ್ಯಾಡು ಮುಲ್ಲಾಗ       |೨| ಮುಲ್ಲಾನ ಓದಕಿ ಎಲ್ಲೆದ ಅಲ್ಲಮಪ್...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....