ಐಸುರದಲಾವಿಹಬ್ಬ ಹೋದಮೇಲೆ
ಹೇಸಿ ರಿವಾಯತ ಸವಾಲ ಜವಾಬ
ಕಾಸಿಗೆ ಕಡಿಮ್ಯಾಗಿ ನಾಶವಾಗಿ ಹೋಯ್ತು    |೧|

ಎ೦ದಾಯ್ತೋ ಮೋರಮ ಹೇಳಲೋ
ಮಂದಿ ಓದರೆ ತಂದಿಟ್ಟ ಚೊಂಗೆ ರೋಟು
ತಿಂದು ತಿಂದು ತಿರುಗ್ಯಾಡು ಮುಲ್ಲಾಗ       |೨|

ಮುಲ್ಲಾನ ಓದಕಿ ಎಲ್ಲೆದ
ಅಲ್ಲಮಪ್ರಭುವಿನ ಅರಿಯದ ತುರುಕರು
ಬಲ್ಲಿದ ಶಿಶುನಾಳಧೀಶನಲಾವಿ ಹಬ್ಬ         |೩|
*****